ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದ ಸ್ಥಳದಲ್ಲಿ ಅನಾಮಿಕ ಗುರುತಿಸಿದ 5ನೇ ಸ್ಥಳ ಅಗೆಯುವ ಕಾರ್ಯಾಚರಣೆ ಮುಂದುವರೆದಿದೆ. ಈ ನಡುವೆ ಧರ್ಮಸ್ಥಳದ ಸೈಟ್ ನಂ.1ರಲ್ಲಿ ಅಸ್ಥಿಪಂಜರ ಶೋಧದ ವೇಳೆಯಲ್ಲಿ ಮಹತ್ವದ ಕುರುಹುಗಳು ಪತ್ತೆಯಾಗಿರುವುದಾಗಿ ಅನಾಮಿಕ ಪರ ನ್ಯಾಯವಾದಿ ಮಂಜುನಾಥ್.ಎನ್ ಹೆಸರಿನ ಪ್ರೆಸ್ ನೋಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು ಅನಾಮಿಕ ಪರ ನ್ಯಾಯವಾದಿ ಮಂಜುನಾಥ್.ಎನ್ ಎಂಬುವರ ಹೆಸರಿನಲ್ಲಿ ಕಳೇಬರ ಶೋಧ ನಡೆಸುವಾಗ ಪ್ಯಾನ್ ಕಾರ್ಡ್, ಎಟಿಎಂ, ಪತ್ರವೊಂದು ಸಿಕ್ಕಿದೆ ಎಂಬ ಪ್ರೆಸ್ ನೋಟ್ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದೇ ಸಂದರ್ಭದಲ್ಲಿ ಎಸ್ಐಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ ಪ್ರತಿಕ್ರಿಯಿಸಿ ಸದ್ಯಕ್ಕೆ ಧರ್ಮಸ್ಥಳ ಕೇಸ್ ಸಂಬಂಧ ಏನು ಸಿಕ್ಕಿಲ್ಲ. ಮುಂದೆ ಸಿಗಬಹುದು ಎಂದು ಹೇಳಲು ನಾನು ಜ್ಯೋತಿಷಿ ಅಲ್ಲ. ಕಾರ್ಯಾಚರಣೆ ಮುಂದುವರೆದಿದೆ. ಸದ್ಯ ಯಾವುದೇ ಪ್ರತಿಕ್ರಿಯೆ ನೀಡಲಾಗುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.
BREAKING: ‘ಭಾರತವನ್ನೇ ಸ್ಪೋಟಿಸುತ್ತೇನೆ’: ಬೆಂಗಳೂರಲ್ಲಿ ‘ದೇಶ ವಿರೋಧಿ’ ಗೋಡೆ ಬರಹ
ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ