Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಗ್ಯಾಸ್ ಸಿಲಿಂಡರ್’ ಅಭಾವ: ಹೈಟೆಕ್ ಯುಗದಲ್ಲೂ ‘ಕಾಲೇಜು ಮೆಸ್‌’ನಲ್ಲಿ ಈಗ ‘ಕಟ್ಟಿಗೆ ಒಲೆ’ಯಲ್ಲಿ ಅಡುಗೆ!

14/03/2026 6:28 PM

BREAKING : ಹೋಟೆಲ್ ಮಾಲೀಕರಿಗೆ ಬಿಗ್ ರಿಲೀಫ್ ; 29 ರಾಜ್ಯಗಳಿಗೆ ‘ವಾಣಿಜ್ಯ ಸಿಲಿಂಡರ್’ಗಳ ವಿತರಣೆ ಆರಂಭ

14/03/2026 6:16 PM

‘ತಂದೆಯ ಸಂಪೂರ್ಣ ಆಸ್ತಿ ಮಗನಿಗೆ ಸೇರಿದ್ದಲ್ಲ’ ; ಹೈಕೋರ್ಟ್ ಮಹತ್ವದ ತೀರ್ಪು

14/03/2026 6:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ `ಮುಸ್ಲಿಂ ಸಮುದಾಯ’ಕ್ಕೆ ಮಹತ್ವದ ಪ್ರಕಟಣೆ : ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳುವಂತೆ ಮನವಿ.!
KARNATAKA

ರಾಜ್ಯದ `ಮುಸ್ಲಿಂ ಸಮುದಾಯ’ಕ್ಕೆ ಮಹತ್ವದ ಪ್ರಕಟಣೆ : ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳುವಂತೆ ಮನವಿ.!

By kannadanewsnow5725/09/2025 12:48 PM

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ರಾಜ್ಯದಾದ್ಯಂತ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆಯನ್ನು ಆರಂಭಿಸಿದೆ. 2025ನೇ ಸಾಲಿನ ಸೆಪ್ಟೆಂಬರ್ 22 ರಿಂದ ಅಕ್ಟೋಬ‌ರ್ 7ರವರೆಗೆ ರಾಜ್ಯದ ಮೂಲೆ ಮೂಲೆಗೆ ಗಣತಿದಾರರು ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ.

ರಾಜ್ಯದ ಜನತೆಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲಿರುವ ಈ ಸಮೀಕ್ಷೆಯು ಅತ್ಯಂತ ಮಹತ್ವದ್ದಾಗಿದೆ. ಸಮಾಜದ ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಭವಿಷ್ಯದಲ್ಲಿ ಕೈಗೊಳ್ಳಲಿರುವ ಕಾರ್ಯಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಲಿದೆ.

ಕರ್ನಾಟಕದಲ್ಲಿ ಮುಸ್ಲಿಮರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಇತರ ಸಮುದಾಯಗಳ ಪೈಕಿ ಅತ್ಯಂತ ಹಿಂದುಳಿದಿರುವುದು ಸತ್ಯ. ಈ ಮೂರು ಕ್ಷೇತ್ರಗಳಲ್ಲಿ ಮುಸ್ಲಿಮರನ್ನು ಮುಂದೆ ತರಲು ರಾಜ್ಯ ಸರ್ಕಾರದ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಲು, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ಕಲ್ಪಿಸಬೇಕಿದೆ.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ನಾವು ಭಾಗವಹಿಸಿ ನಮ್ಮ ಪರಿಸ್ಥಿತಿಯನ್ನು ಸರ್ಕಾರದ ಮುಂದೆ ಇರಿಸಿದರೆ, ಸರ್ಕಾರದಿಂದ ಈಗ ನಮ್ಮ ಕಲ್ಯಾಣಕ್ಕಾಗಿ ಮಾಡುತ್ತಿರುವ ಕಾರ್ಯಕ್ರಮಗಳು, ಯೋಜನೆಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಅಲ್ಲದೇ, ಸರ್ಕಾರದ ನೀತಿ ನಿರೂಪಣೆಯಲ್ಲಿ ನಮ್ಮ ಪಾಲುದಾರಿಕೆಯೂ ಹೆಚ್ಚಾಗುತ್ತದೆ.

ದಯವಿಟ್ಟು ನೆನಪಿಡಿ, ನಾವು ನಮ್ಮ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸರ್ಕಾರದ ಗಮನ ಸೆಳೆಯದೆ ನಿರ್ಲಕ್ಷ್ಯ ತೋರಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾರ ನಮ್ಮ ಕಲ್ಯಾಣಕ್ಕಾಗಿ ಏನು ಮಾಡುತ್ತಿಲ್ಲ ಎಂದು ದೂಷಿಸಿಕೊಂಡು ಕೂತರೆ ಏನು ಪ್ರಯೋಜನವಿಲ್ಲ. ನಮಗೆ ಆಗುವ ನಷ್ಟಕ್ಕೆ ನಾವೇ ಜವಾಬ್ದಾರರಾಗುತ್ತೇವೆ.

ಆದುದರಿಂದ, ನಿಮ್ಮೆಲ್ಲರಲ್ಲೂ ನನ್ನ ಕಳಕಳಿಯ ಮನವಿ ಏನೆಂದರೆ ಗಣತಿದಾರರು ನಿಮ್ಮ ಮನೆ ಬಳಿ ಬಂದಾಗ ಅವರು ಕೇಳುವಂತಹ ಎಲ್ಲಾ 60 ಪ್ರಶ್ನೆಗಳಿಗೂ ಸಮಾಧಾನದಿಂದ ಸ್ಪಷ್ಟವಾಗಿ ಉತ್ತರ ನೀಡಿ. ಈ ಬಗ್ಗೆ ನಿಮಗೆ ಏನಾದರೂ ಅನುಮಾನಗಳಿದ್ದರೆ, ಮಾರ್ಗದರ್ಶನದ ಅಗತ್ಯವಿದ್ದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಸ್ಥಾಪನೆ ಮಾಡಿರುವ ಈ ಕೆಳಕಂಡ ಸಹಾಯವಾಣಿಗಳನ್ನು ಸಂಪರ್ಕಿಸಿ.

ಪ್ರಕಟಣೆ: ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ಸಚಿವರು, ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಸ್ ಇಲಾಖೆ, ಕರ್ನಾಟಕ ಸರ್ಕಾರ
ಸಹಾಯವಾಣಿ: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ 080-69146723 | ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ 8050770004

ಎಲ್ಲರೂ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2025ರಲ್ಲಿ ಪಾಲ್ಗೊಳ್ಳಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿ.#SocialAndEducationalSurvey @CMofKarnataka @siddaramaiah @BZZameerAhmedK pic.twitter.com/LhTFk3tpgT

— DIPR Karnataka (@KarnatakaVarthe) September 25, 2025

Important announcement for the state's 'Muslim community': Request to participate in social and educational survey!
Share. Facebook Twitter LinkedIn WhatsApp Email

Related Posts

‘ಗ್ಯಾಸ್ ಸಿಲಿಂಡರ್’ ಅಭಾವ: ಹೈಟೆಕ್ ಯುಗದಲ್ಲೂ ‘ಕಾಲೇಜು ಮೆಸ್‌’ನಲ್ಲಿ ಈಗ ‘ಕಟ್ಟಿಗೆ ಒಲೆ’ಯಲ್ಲಿ ಅಡುಗೆ!

14/03/2026 6:28 PM2 Mins Read

BIG NEWS: ಗೃಹ ಬಳಕೆ ಗ್ಯಾಸ್ ಸಿಲಿಂಡರ್ ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಕಠಿಣ ಕ್ರಮ: ಆಹಾರ ಇಲಾಖೆ ಎಚ್ಚರಿಕೆ

14/03/2026 5:15 PM1 Min Read

ಭಕ್ತರ ದಶಕಗಳ ಕನಸು ನನಸು; ಮಾ.30ರಂದು ಸೊರಬದ ಶ್ರೀರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ

14/03/2026 4:50 PM2 Mins Read
Recent News

‘ಗ್ಯಾಸ್ ಸಿಲಿಂಡರ್’ ಅಭಾವ: ಹೈಟೆಕ್ ಯುಗದಲ್ಲೂ ‘ಕಾಲೇಜು ಮೆಸ್‌’ನಲ್ಲಿ ಈಗ ‘ಕಟ್ಟಿಗೆ ಒಲೆ’ಯಲ್ಲಿ ಅಡುಗೆ!

14/03/2026 6:28 PM

BREAKING : ಹೋಟೆಲ್ ಮಾಲೀಕರಿಗೆ ಬಿಗ್ ರಿಲೀಫ್ ; 29 ರಾಜ್ಯಗಳಿಗೆ ‘ವಾಣಿಜ್ಯ ಸಿಲಿಂಡರ್’ಗಳ ವಿತರಣೆ ಆರಂಭ

14/03/2026 6:16 PM

‘ತಂದೆಯ ಸಂಪೂರ್ಣ ಆಸ್ತಿ ಮಗನಿಗೆ ಸೇರಿದ್ದಲ್ಲ’ ; ಹೈಕೋರ್ಟ್ ಮಹತ್ವದ ತೀರ್ಪು

14/03/2026 6:06 PM

BIG NEWS: ಗೃಹ ಬಳಕೆ ಗ್ಯಾಸ್ ಸಿಲಿಂಡರ್ ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಕಠಿಣ ಕ್ರಮ: ಆಹಾರ ಇಲಾಖೆ ಎಚ್ಚರಿಕೆ

14/03/2026 5:15 PM
State News
KARNATAKA

‘ಗ್ಯಾಸ್ ಸಿಲಿಂಡರ್’ ಅಭಾವ: ಹೈಟೆಕ್ ಯುಗದಲ್ಲೂ ‘ಕಾಲೇಜು ಮೆಸ್‌’ನಲ್ಲಿ ಈಗ ‘ಕಟ್ಟಿಗೆ ಒಲೆ’ಯಲ್ಲಿ ಅಡುಗೆ!

By kannadanewsnow0914/03/2026 6:28 PM KARNATAKA 2 Mins Read

ಚಿಕ್ಕೋಡಿ: ಇಂದಿನ ಕಾಲದಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಕೆಲವೊಮ್ಮೆ ಪ್ರಕೃತಿ ಅಥವಾ ಅನಿವಾರ್ಯ ಪರಿಸ್ಥಿತಿಗಳು ನಮ್ಮನ್ನು ಮತ್ತೆ ಹಳೆಯ ಪದ್ಧತಿಗೆ…

BIG NEWS: ಗೃಹ ಬಳಕೆ ಗ್ಯಾಸ್ ಸಿಲಿಂಡರ್ ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಕಠಿಣ ಕ್ರಮ: ಆಹಾರ ಇಲಾಖೆ ಎಚ್ಚರಿಕೆ

14/03/2026 5:15 PM

ಭಕ್ತರ ದಶಕಗಳ ಕನಸು ನನಸು; ಮಾ.30ರಂದು ಸೊರಬದ ಶ್ರೀರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ

14/03/2026 4:50 PM

‘ಕುವೆಂಪು ವಿವಿ ಸಹ್ಯಾದ್ರಿ ಉತ್ಸವ’ದ ಅಂತಿಮ ಫಲಿತಾಂಶ ಪ್ರಕಟ: ಸಾಗರದ ‘ಇಂದಿರಾ ಗಾಂಧಿ ಕಾಲೇಜಿಗೆ ಸಮಗ್ರ ಪ್ರಶಸ್ತಿ’

14/03/2026 4:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.