Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ನಿದ್ದೆ ಮಾಡಿದರೂ ಸುಸ್ತಾಗುತ್ತಿದೆಯೇ? ಇದು ಗಂಭೀರ ಆರೋಗ್ಯ ಸಮಸ್ಯೆಯಿರಬಹುದು ಎಚ್ಚರ.!

11/04/2026 2:08 PM

SHOCKING : ಸೀನಿದ ಮಹಿಳೆಯ ಮೂಗಿನಿಂದ ಬಿತ್ತು ಜೀವಂತ ಹುಳು : ಪರೀಕ್ಷಿಸಿದ ವೈದ್ಯರಿಗೆ ಕಾದಿತ್ತು ಶಾಕ್.!

11/04/2026 1:59 PM

ಚಿನ್ನದ ವಿಚಾರದಲ್ಲಿ ಭಾರತೀಯರೇ ನಂಬರ್ 1 : ಮನೆಗಳಲ್ಲಿರುವ ಚಿನ್ನದ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಾ.!

11/04/2026 1:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾನೂನುಬಾಹಿರವಾಗಿ ಜೆಸಿಬಿ ವಶಕ್ಕೆ ಪಡೆದು ಮಾರಾಟ: ಪರಿಹಾರಕ್ಕೆ ಕೋರ್ಟ್ ಸೂಚನೆ
KARNATAKA

ಕಾನೂನುಬಾಹಿರವಾಗಿ ಜೆಸಿಬಿ ವಶಕ್ಕೆ ಪಡೆದು ಮಾರಾಟ: ಪರಿಹಾರಕ್ಕೆ ಕೋರ್ಟ್ ಸೂಚನೆ

By kannadanewsnow0929/08/2025 3:57 PM
ಶಿವಮೊಗ್ಗ : ದೂರುದಾರರಾದ ಶಿವಮೊಗ್ಗ ತಾಲ್ಲೂಕಿನ ಗೊಂದಿಚಟ್ನಹಳ್ಳಿ ನಿವಾಸಿ ನಾಗರಾಜ ಎಂಬುವವರಿಂದ ಎದುರುದಾರರಾದ ಹೆಚ್‌ಡಿಬಿ ಫೈನಾನ್ಸಿಯಲ್ ಸರ್ವೀಸ್ ಶಿವಮೊಗ್ಗ, ಹೆಚ್‌ಡಿಬಿ ಫೈನಾನ್ಸಿಯಲ್ ಮುಂಬೈ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ ಶಿವಮೊಗ್ಗ ಇವರು ಯಾವುದೇ ರೀತಿಯ ನೋಟಿಸ್ ನೀಡದೆ ಕಾನೂನು ಬಾಹಿರವಾಗಿ ಜೆಸಿಬಿ ಯನ್ನು ವಶಕ್ಕೆ ಪಡೆದು ಹರಾಜು ಮೂಲಕ ಮಾರಾಟ ಮಾಡಿದ ಕಾರಣಕ್ಕಾಗಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಗಣಿಸಿ, 1 ಮತ್ತು 2ನೇ ಎದುರುದಾರರು ಸೂಕ್ತ ಪರಿಹಾರ ನೀಡಬೇಕೆಂದು ಆದೇಶಿಸಿದೆ.

 ದೂರುದಾರರು ತಮ್ಮ ಜೀವನ ನಿರ್ವಹಣೆಗಾಗಿ ಒಂದು ಜೆಸಿಬಿ ಖರೀದಿಸಿದ್ದು, 1 ಮತ್ತು 2 ನೇ ಎದುರುದಾರರಿಂದ ರೂ.31,65,625 ಲಕ್ಷ ಸಾಲವನ್ನು ಪಡೆದು 60 ತಿಂಗಳ ಇಎಂಐ ಅನ್ನು 4/2/2023 ರಿಂದ 4/10/2023 ರವೆಗೆ ಪಾವತಿಸಬೇಕಾಗಿರುತ್ತದೆ. ದೂರುದಾರರು ಮಾಸಿಕ ಎಲ್ಲಾ ಇಎಂಐ ಗಳನ್ನು ಪಾವತಿಸಿಕೊಂಡು ಬರುತ್ತಿದ್ದು ವೈಯಕ್ತಿಕ ಕಾರಣಗಳಿಂದ 2 ಇಎಂಐಗಳನ್ನು ಪಾವತಿಸಲು ಸಾಧ್ಯವಾಗದೇ, ಅಕೋಬ್ಟರ್-2024 ರಂದು ಉಳಿಕೆಯಾದ 2 ಇಎಂಐಗಳನ್ನು ಪಾವತಿಸುವುದಾಗಿ ಭರವಸೆಯನ್ನು ಕೊಟ್ಟಿರುತ್ತಾರೆ.

 ಆದರೆ 14/10/2024 ರಂದು ಶಿವಮೊಗ್ಗ ಸಿಟಿಯಲ್ಲಿ ಜೆಸಿಬಿ ಕೆಲಸ ಮಾಡುತ್ತಿದ್ದಾಗ 1 ಮತ್ತು 2 ನೇ ಎದುರುದಾರರು ಮತ್ತು ಏಜೆಂಟರು ಜೆಸಿಬಿಯನ್ನು ತಮ್ಮ ವಶಕ್ಕೆ ಪಡೆದಿರುತ್ತಾರೆ. ತದನಂತರ ದೂರುದಾರರು ಎದುರುದಾರರ ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ ಉಳಿಕೆ ಇಎಂಐ ಗಳನ್ನು ಪಾವತಿಸಲು ಹೇಳಿರುತ್ತಾರೆ. ಅದರಂತೆ ರೂ.50,000 ಪಾವತಿಸಿ ಜೆಸಿಬಿಯನ್ನು ಕೊಡಲು ಕೇಳಿರುತ್ತಾರೆ. ಆದರೂ ಎದುರುದಾರರು ಜೆಸಿಬಿ ಯನ್ನು ದೂರುದಾರರಿಗೆ ನೀಡಿರುವುದಿಲ್ಲ. 1 ಮತ್ತ 2ನೇ ಎದುರುದಾರರು ದಿ:16/12/2024 ರಂದು ಪತ್ರ ಬರೆದು ನಿಮ್ಮ ಜೆಸಿಬಿಯನ್ನು ಹರಾಜು ಮೂಲಕ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ. 1 ಮತ್ತು 2 ನೇ ಎದುರುರಾರರು ದೂರುದಾರರಿಗೆ ಯಾವುದೇ ರೀತಿಯ ನೋಟಿಸ್ ನೀಡದೆ ಕಾನೂನು ಬಾಹಿರವಾಗಿ ಜೆಸಿಬಿ ಯನ್ನು ವಶಕ್ಕೆ ಪಡೆದು ಹರಾಜು ಮೂಲಕ ಮಾರಾಟ ಮಾಡಿ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ದೂರನ್ನು ಸಲ್ಲಿಸಿರುತ್ತಾರೆ.

ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವಂತಹ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಶೀಲಿಸಿ, ವಾದ-ವಿವಾದಗಳನ್ನು ಆಲಿಸಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ಎದುರುದಾರರು ದೂರುದಾರರಿಗೆ ಕಾನೂನು ರೀತಿಯಲ್ಲಿ ನೋಟಿಸ್ ನೀಡದೇ ಜೆಸಿಬಿಯನ್ನು ವಶಕ್ಕೆ ಪಡೆದು ಮಾರಾಟ ಮಾಡಿರುವುದಕ್ಕೆ ಯಾವುದೇ ದಾಖಲಾತಿಗಳನ್ನು ಸಲ್ಲಿಸದಿರುವುದರಿಂದ ಸೇವಾ ನ್ಯೂನ್ಯತೆ ವಹಿಸಿರುತ್ತಾರೆ ಎಂದು ತೀರ್ಮಾನಿಸಿ, 1 ಮತ್ತು 2 ನೇ ಎದುರುದಾರರು ದೂರುದಾರರಿಂದ ಈ ಆದೇಶವಾದ 45 ದಿನಗಳ ಒಳಗೆ 2 ಇಎಂಐ ಗಳನ್ನು ಪಡೆದು ಜೆಸಿಬಿ ಯನ್ನು ದೂರುದಾರರ ವಶಕ್ಕೆ ನೀಡತಕ್ಕದ್ದು. ತಪ್ಪಿದ್ದಲ್ಲಿ 1 ಮತ್ತು 2 ನೇ ಎದುರುದಾರರು ದೂರುದಾರರಿಗೆ ಪ್ರತಿ ದಿನಕ್ಕೆ ರೂ.2000 ಗಳನ್ನು ಆದೇಶವಾದ ದಿನದಿಂದ ಜೆಸಿಬಿ ಯನ್ನು ವಶಕ್ಕೆ ಕೊಡುವವರೆಗೆ ಪಾವತಿಸತಕ್ಕದ್ದು. ಹಾಗೂ ರೂ.2,10,000 ಗಳನ್ನು ಮಾನಸಿಕ ವೇದನೆಗಾಗಿ, ಪರಿಹಾರವಾಗಿ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ವಾರ್ಷಿಕ ಶೇ.12 ರಂತೆ ಬಡ್ಡಿಯನ್ನು ಸೇರಿಸಿ ಆದೇಶವಾದ ದಿನದಿಂದ ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದೆಂದು ಹಾಗೂ 3 ನೇ ಎದುರುದಾರರ ವಿರುದ್ದ ದೂರನ್ನು ವಜಾ ಮಾಡಿದೆ ಎಂದು ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠ ದಿ:13/8/2025 ರಂದು ಆದೇಶಿಸಿದೆ.

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ `ಡಿಜಿಟಲ್ ರೂಪದಲ್ಲಿ ಸಿಗಲಿವೆ ಭೂದಾಖಲೆ’ಗಳು.!

BREAKING: KPTCL ಕಿರಿಯ ಸ್ಟೇಷನ್ ಪರಿಚಾರಕ, ಕಿರಿಯ ಪವರ್ ಮ್ಯಾನ್ ಹುದ್ದೆಗಳ ಆಯ್ಕೆ ಪಟ್ಟಿ ಪ್ರಕಟ | KPTCL Recruitment

Share. Facebook Twitter LinkedIn WhatsApp Email

Related Posts

ALERT : ನಿದ್ದೆ ಮಾಡಿದರೂ ಸುಸ್ತಾಗುತ್ತಿದೆಯೇ? ಇದು ಗಂಭೀರ ಆರೋಗ್ಯ ಸಮಸ್ಯೆಯಿರಬಹುದು ಎಚ್ಚರ.!

11/04/2026 2:08 PM1 Min Read

`LPG-CNG’ ಗ್ಯಾಸ್ ಬಂಕ್‍ ಗಳಲ್ಲಿ ಗ್ಯಾಸ್ ದರ, ದಾಸ್ತಾನು ಕುರಿತು ಮಾಹಿತಿ ಫಲಕ ಅಳವಡಿಕೆ ಕಡ್ಡಾಯ.!

11/04/2026 1:10 PM3 Mins Read

BREAKING : ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಉದ್ಯಮಿಗೆ 15 ಕೋಟಿ ವಂಚನೆ : ಬೆಳಗಾವಿಯಲ್ಲಿ ಇಬ್ಬರು ಸೈಬರ್ ವಂಚಕರು ಅರೆಸ್ಟ್!

11/04/2026 1:04 PM1 Min Read
Recent News

ALERT : ನಿದ್ದೆ ಮಾಡಿದರೂ ಸುಸ್ತಾಗುತ್ತಿದೆಯೇ? ಇದು ಗಂಭೀರ ಆರೋಗ್ಯ ಸಮಸ್ಯೆಯಿರಬಹುದು ಎಚ್ಚರ.!

11/04/2026 2:08 PM

SHOCKING : ಸೀನಿದ ಮಹಿಳೆಯ ಮೂಗಿನಿಂದ ಬಿತ್ತು ಜೀವಂತ ಹುಳು : ಪರೀಕ್ಷಿಸಿದ ವೈದ್ಯರಿಗೆ ಕಾದಿತ್ತು ಶಾಕ್.!

11/04/2026 1:59 PM

ಚಿನ್ನದ ವಿಚಾರದಲ್ಲಿ ಭಾರತೀಯರೇ ನಂಬರ್ 1 : ಮನೆಗಳಲ್ಲಿರುವ ಚಿನ್ನದ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಾ.!

11/04/2026 1:29 PM

`LPG-CNG’ ಗ್ಯಾಸ್ ಬಂಕ್‍ ಗಳಲ್ಲಿ ಗ್ಯಾಸ್ ದರ, ದಾಸ್ತಾನು ಕುರಿತು ಮಾಹಿತಿ ಫಲಕ ಅಳವಡಿಕೆ ಕಡ್ಡಾಯ.!

11/04/2026 1:10 PM
State News
KARNATAKA

ALERT : ನಿದ್ದೆ ಮಾಡಿದರೂ ಸುಸ್ತಾಗುತ್ತಿದೆಯೇ? ಇದು ಗಂಭೀರ ಆರೋಗ್ಯ ಸಮಸ್ಯೆಯಿರಬಹುದು ಎಚ್ಚರ.!

By kannadanewsnow5711/04/2026 2:08 PM KARNATAKA 1 Min Read

ಸಾಮಾನ್ಯವಾಗಿ ದಿನವಿಡೀ ಕೆಲಸ ಮಾಡಿ ದಣಿದಾಗ ಒಂದು ಒಳ್ಳೆಯ ನಿದ್ದೆ ಮಾಡಿದರೆ ಮರುದಿನ ಬೆಳಗ್ಗೆ ಉತ್ಸಾಹದಿಂದ ಇರಬೇಕು. ಆದರೆ, ರಾತ್ರಿಯಿಡೀ…

`LPG-CNG’ ಗ್ಯಾಸ್ ಬಂಕ್‍ ಗಳಲ್ಲಿ ಗ್ಯಾಸ್ ದರ, ದಾಸ್ತಾನು ಕುರಿತು ಮಾಹಿತಿ ಫಲಕ ಅಳವಡಿಕೆ ಕಡ್ಡಾಯ.!

11/04/2026 1:10 PM

BREAKING : ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಉದ್ಯಮಿಗೆ 15 ಕೋಟಿ ವಂಚನೆ : ಬೆಳಗಾವಿಯಲ್ಲಿ ಇಬ್ಬರು ಸೈಬರ್ ವಂಚಕರು ಅರೆಸ್ಟ್!

11/04/2026 1:04 PM

BREAKING : ಕಲಬುರ್ಗಿಯಲ್ಲಿ IPL ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡ ವ್ಯಕ್ತಿ, ಡ್ಯಾಮ್‌ಗೆ ಹಾರಿ ಆತ್ಮಹತ್ಯೆ!

11/04/2026 12:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.