ಕಲಬುರಗಿ: ಜಿಲ್ಲೆಯ ಪೊಲೀಸರು ಅಕ್ರಮ ಮರಳು ದಂಧೆ ಮೇಲೆ‌ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಜಿಲ್ಲೆಯ ಆಫ್ಜಲಪುರ ತಾಲೂಕಿನ ಭೀಮಾ ನದಿ ತೀರದ ಗ್ರಾಮಗಳಲ್ಲಿ ಪ್ರತ್ಯೇಕ‌ ದಾಳಿಗಳನ್ನು ನಡೆಸುವ ಮೂಲಕ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ ಭೀಮಾ ನದಿಯಿಂದ ತೆಗೆದು ಜಮೀನುಗಳಲ್ಲಿ ಸಂಗ್ರಹಿಸಿಟ್ಟಿದ್ದ 565 ಲೋಡ್ ಮರಳನ್ನು ಜಪ್ತಿ ಮಾಡಿದ್ದಾರೆ.

ತನಿಖೆಯನ್ನು ತನಗೆ ಮಾತ್ರ ವಹಿಸಬೇಕು ಎಂದು ‘ಶಿಫಾರಸು’ ಮಾಡುವ ಅಧಿಕಾರ ಲೋಕಾಯುಕ್ತ ಸಂಸ್ಥೆಗೆ ಇಲ್ಲ: ಹೈಕೋರ್ಟ್

ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭೀಮಾ ನದಿ ತೀರದ ದೇಸಾಯಿ ಕಲ್ಲೂರು, ಗುಡ್ಡೆವಾಡಿ ಹಾಗೂ ಘತ್ತರಗಾ ಗ್ರಾಮದ ಜಮೀನುಗಳಲ್ಲಿ ಮರಳು ಸಂಗ್ರಹಿಸಿಟ್ಟಿದ್ದ ಸ್ಥಳಗಳಿಗೆ ಪೊಲೀಸರು ದಾಳಿ ನಡೆಸಿದರು. ಅಂದಾಜು ಏಳೂವರೆ ಲಕ್ಷ ರೂಪಾಯಿ ಮೌಲ್ಯದ 380 ಟ್ರ್ಯಾಕ್ಟರ್ ಟ್ರಾಲಿ ಮರಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ ಏಳು ಜನ ಜಮೀನು ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

BREAKING : ಫೆಮಾ ಪ್ರಕರಣ: ಅರವಿಂದ್ ಕೇಜ್ರಿವಾಲ್ ಪತ್ನಿಯ ಸಂಬಂಧಿಯ ಮನೆ ಮೇಲೆ `ED’ ದಾಳಿ

ಇನ್ನು ಭೀಮಾ ನದಿ ತೀರದ ಶಿವಪೂರ, ಬನ್ನಟ್ಟಿ ಗ್ರಾಮಗಳ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಅಂದಾಜು ಮೂರೂವರೆ ಲಕ್ಷ ರೂಪಾಯಿ ಮೌಲ್ಯದ 185 ಟ್ರ್ಯಾಕ್ಟರ್ ಟ್ರಾಲಿ ಮರಳು ಜಪ್ತಿ ಮಾಡಿದ್ದಾರೆ. ನಾಲ್ವರು ಜಮೀನು ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಎಸ್​ಪಿ ಅಕ್ಷಯ ಹಾಕೆ ಮಾಹಿತಿ ನೀಡಿದ್ದಾರೆ.

Share.
Exit mobile version