ಸಾಗರದ ‘ನಗರಸಭೆ ಜಾಗ’ ಅಕ್ರಮ ಒತ್ತುವರಿ; ಬೆಲೆಬಾಳುವ ಆಸ್ತಿ ರಕ್ಷಣೆಯಲ್ಲಿ ‘ನಗರಾಡಳಿತ’ ತೀವ್ರ ನಿರ್ಲಕ್ಷ್ಯ

ಶಿವಮೊಗ್ಗ: ಸಾಗರ ನಗರದ ಹೃದಯಭಾಗದಲ್ಲಿರುವ ನಗರಸಭೆಯ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವೊಂದು ಅಕ್ರಮ ಒತ್ತುವರಿಯಾಗುತ್ತಿದ್ದರೂ, ನಗರಸಭೆ ಆಡಳಿತ ಮಂಡಳಿ ಮಾತ್ರ ಕಣ್ಣಿದ್ದೂ ಕುರುಡಾದಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಹಿನ್ನೆಲೆ: ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಅಗ್ರಹಾರ ಸರ್ಕಲ್‌ಗೆ ಹೊಂದಿಕೊಂಡಿರುವ ರಾಘವೇಂದ್ರ ಸ್ವಾಮಿ ಮಠದ ಪಕ್ಕದಲ್ಲಿ ಸುಮಾರು 100 ರಿಂದ 200 ಅಡಿ ವಿಸ್ತೀರ್ಣದ ನಗರಸಭೆಗೆ ಸೇರಿದ ಜಾಗವಿದೆ. ಇತ್ತೀಚೆಗಷ್ಟೇ ಇಲ್ಲಿ ಬಿದ್ದಿದ್ದ ಮಾವಿನ ಮರಕ್ಕೆ ಬೆಂಕಿ ಹೊತ್ತಿಕೊಂಡಾಗ, ಅಗ್ನಿಶಾಮಕ ದಳದವರು ಮೂರು ಬಾರಿ ಕಾರ್ಯಾಚರಣೆ ನಡೆಸಿ … Continue reading ಸಾಗರದ ‘ನಗರಸಭೆ ಜಾಗ’ ಅಕ್ರಮ ಒತ್ತುವರಿ; ಬೆಲೆಬಾಳುವ ಆಸ್ತಿ ರಕ್ಷಣೆಯಲ್ಲಿ ‘ನಗರಾಡಳಿತ’ ತೀವ್ರ ನಿರ್ಲಕ್ಷ್ಯ