ಹಾವೇರಿ: ಜಿಲ್ಲೆಯಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ದಾಸ್ತಾನು ಮಾಡಿದ್ದಲ್ಲೇ, ಕಾಳ ಸಂಜೆಯಲ್ಲೇ ನ್ಯಾಯಬೇಲೆ ಅಂಗಡಿ ಸಮೀಪವೇ ಮಾರಾಟ ಮಾಡುತ್ತಿರುವಂತ ದೊಡ್ಡ ದಂಧೆಯೇ ಪತ್ತೆಯಾಗಿದೆ. ಈ ದಂಧೆಯ ಬಗ್ಗೆ ವರದಿ ಮಾಡಲು ತೆರಳಿದಂತ ಮಾಧ್ಯಮದವರಿಗೆ ಧಮ್ಕಿ ಹಾಕಿರೋದಾಗಿಯೂ ತಿಳಿದು ಬಂದಿದೆ.
ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅಕ್ಕಿಪೇಟೆಯಲ್ಲಿ ಅನ್ನಭಾಗ್ಯ ಅಕ್ರಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದಲ್ಲದೇ, ನ್ಯಾಯಬೆಲೆ ಅಂಗಡಿ ಸಮೀಪವೇ ಕಾಳಸಂಜೆಯಲ್ಲಿ ಮಾರಾಟ ಮಾಡುತ್ತಿರುವಂತ ಜಾಲವೊಂದು ಪತ್ತೆಯಾಗಿದೆ.
ಈ ಹಿನ್ನಲೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ್ದಂತ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಈ ವೇಳೆಯಲ್ಲಿ ಸ್ಥಳಕ್ಕೆ ಬಂದಂತ ವ್ಯಕ್ತಿಯೊಬ್ಬರು ಮಾಧ್ಯಮದವರ ಮೇಲೆಯೇ ಗೂಂಡಾಗಿರಿ ಪ್ರದರ್ಶಿಸಿದ್ದಾರೆ.
ಅಕ್ಕಿ ದಂಧೆಕೋರ ಕಿಂಗ್ ಪಿನ್ ಸಚಿನ್ ಕಬ್ಬೂರ್ ಎಂಬಾತ ಐಶಾರಾಮಿ ಆಡಿ ಕಾರಿನಲ್ಲಿ ಸ್ಥಳಕ್ಕೆ ಬಂದು ಧಮ್ಕಿ ಹಾಕಿದ್ದಲ್ಲ, ವರದಿ ಮಾಡುತ್ತಿದ್ದಂತ ಮಾಧ್ಯಮದವರ ಮೇಲೆಯೇ ಹಲ್ಲೆ ಮಾಡಿದಂತ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹಾವೇರಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರವಾಸಿಗರ ಗಮನಕ್ಕೆ: ನಾಳೆಯಿಂದ ವಿಶ್ವವಿಖ್ಯಾತ ‘ನಂದಿ ಗಿರಿಧಾಮ’ 1 ತಿಂಗಳು ಬಂದ್ | Nandi Hills
ಬೆಂಗಳೂರಲ್ಲಿ ‘IPL 2025’ ಪಂದ್ಯಾವಳಿ: ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸಂಚಾರದ ವ್ಯವಸ್ಥೆ | BMTC Bus Service