ನವದೆಹಲಿ: ಮಹಾ ಕುಂಭದಲ್ಲಿ ಜನಪ್ರಿಯರಾದ ‘ಐಐಟಿ ಬಾಬಾ’ ಅಲಿಯಾಸ್ ಅಭಯ್ ಸಿಂಗ್ ಅವರು ಶುಕ್ರವಾರ ನೋಯ್ಡಾದಲ್ಲಿ ಖಾಸಗಿ ಚಾನೆಲ್ನ ಸುದ್ದಿ ಚರ್ಚಾ ಕಾರ್ಯಕ್ರಮದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಕೇಸರಿ ಬಟ್ಟೆ ಧರಿಸಿದ ಕೆಲವು ಜನರು ಸುದ್ದಿಮನೆಗೆ ಬಂದು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಕೋಲುಗಳಿಂದ ಥಳಿಸಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
‘ಐಐಟಿ ಬಾಬಾ’ ಸೆಕ್ಟರ್ ೧೨೬ ರ ಪೊಲೀಸ್ ಹೊರಠಾಣೆಯ ಹೊರಗೆ ಕುಳಿತಿದ್ದರು. ಆದಾಗ್ಯೂ, ನಂತರ ಪೊಲೀಸರು ಮನವೊಲಿಸಿದ ನಂತರ ಅವರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಸೆಕ್ಟರ್ 126 ಪೊಲೀಸ್ ಠಾಣೆಯ ಎಸ್ಎಚ್ಒ ಭೂಪೇಂದ್ರ ಸಿಂಗ್ ‘ಅವರನ್ನು ಮನವೊಲಿಸಲಾಯಿತು, ಹೆಚ್ಚಿನ ದೂರು ದಾಖಲಿಸಲಿಲ್ಲ’ ಎಂದು ಹೇಳಿದರು.