ಬೆಂಗಳೂರು: 2015-16ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ರಾಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ 17 ಆರೋಪಿಗಳನ್ನು ಖುಲಾಸೆಗೊಳಿಸಿ ಕೋರ್ಟ್ ಆದೇಶಿಸಿದೆ.
ಇಡೀ ರಾಜ್ಯದಲ್ಲೇ ಸಖತ್ತು ಸದ್ದು ಮಾಡಿದ್ದಂತ 2015-16ರ ದ್ವಿತೀಯ ಪಿಯುಸಿ ರಾಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿತ್ತು. ತನಿಖೆ ನಡೆಸಿ, ನ್ಯಾಯಾಲಯಕ್ಕೂ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳೂರಿನ ಸೆಷನ್ಸ್ ಕೋರ್ಟ್, ಇಂದು ತನ್ನ ತೀರ್ಪು ಪ್ರಕಟಿಸಿದೆ. 2015-16ರಲ್ಲಿ ನಡೆದಿದ್ದಂತ ದ್ವಿತೀಯ ಪಿಯುಸಿ ರಾಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ 17 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ.
ಅಂದಹಾಗೇ 2016ರ ಮಾರ್ಚ್ 21ರಂದು ದ್ವಿತೀಯ ಪಿಯುಸಿ ರಾಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮುನ್ನವೇ ಬೆಳಿಗ್ಗೆ 7.30ಕ್ಕೆ ವಾಟ್ಸಾಪ್ ನಲ್ಲಿ ವೈರಲ್ ಆಗಿ, ಸೋರಿಕೆಯಾಗಿತ್ತು. ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೂ ವಹಿಸಿತ್ತು.
ಕೇಂದ್ರದ ಅಸಹಕಾರದ ನಡುವೆಯೂ ಅನ್ನಭಾಗ್ಯ ಯೋಜನೆ ಜಾರಿ- ಸಚಿವ ಪ್ರಿಯಾಂಕ್ ಖರ್ಗೆ
ಏ.28ರಂದು ಬೆಂಗಳೂರಲ್ಲಿ TCS ವರ್ಲ್ಡ್ 10K ಓಟ ಸ್ಪರ್ಧೆ: ಬೆಳಿಗ್ಗೆ 3.35ಕ್ಕೆ ಮೆಟ್ರೋ ಸಂಚಾರ ಆರಂಭ