ಬೆಂಗಳೂರು: ಕರ್ನಾಟಕ ದ್ವಿತಿಯ ಪಿಯುಸಿ ಪರೀಕ್ಷೆ-2ರ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ. ಈ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ-3ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು,  ದ್ವಿತೀಯ ಪಿಯು ಪರೀಕ್ಷೆ-3 ದಿನಾಂಕ 24-06-2024ರಿಂದ ಆರಂಭಗೊಂಡು, 05-07-2024ರವರೆಗೆ ನಡೆಯಲಿದೆ ಎಂದು ತಿಳಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆ-3ಗೆ ಕಲಾ ವಿಭಾಗದಲ್ಲಿ 19,113 ವಿದ್ಯಾರ್ಥಿಗಳು, 11,698 ವಿದ್ಯಾರ್ಥಿನಿಯರು ಸೇರಿದಂತೆ 30,811 ಮಂದಿ ನೋಂದಾಯಿಸಿಕೊಂಡಿದ್ದಾರೆ ಅಂತ ಹೇಳಿದೆ.

ವಿಜ್ಞಾನ ವಿಭಾಗದಲ್ಲಿ 19,783 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 25,401 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 44,358 ಹುಡುಗರು, 31,637 ಹುಡುಗಿಯರು ಸೇರಿ 75,995 ವಿದ್ಯಾರ್ಥಿಗಳು ಪರೀಕ್ಷೆ-3ಕ್ಕೆ ನೋಂದಾಯಿಸಿಕೊಂಡಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ-3 ರಾಜ್ಯದ 248 ಕೇಂದ್ರಗಳಲ್ಲಿ ನಡೆಯಲಿದೆ. ಈ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ಅಲ್ಲದೇ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ವಿಚಕ್ಷಣದಳಗಳನ್ನು ರಚಿಸಲಾಗಿದೆ ಅಂತ ತಿಳಿಸಿದೆ.

ಹೀಗಿದೆ ದ್ವಿತೀಯ ಪಿಯುಸಿ ಪರೀಕ್ಷೆ-3ರ ವೇಳಾಪಟ್ಟಿ

ದಿನಾಂಕ 24-06-2024ರ ಸೋಮವಾರ- ಕನ್ನಡ, ಅರೇಬಿಕ್

ದಿನಾಂಕ 25-06-2024ರ ಮಂಗಳವಾರ – ಇಂಗ್ಲೀಷ್

ದಿನಾಂಕ 26-06-2024ರ ಬುಧವಾರ – ಸಮಾಜಶಾಸ್ತ್ರ, ಜೀವ ಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ.

ದಿನಾಂಕ 27-06-2024ರ ಗುರುವಾರ – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ

ದಿನಾಂಕ 28-06-2024ರ ಶುಕ್ರವಾರ – ಅರ್ಥ ಶಾಸ್ತ್ರ, ರಾಸಾಯನ ಶಾಸ್ತ್ರ

ದಿನಾಂಕ 29-06-2024ರ ಶನಿವಾರ – ಇತಿಹಾಸ, ಭೌತಶಾಸ್ತ್ರ

ದಿನಾಂಕ 01-07-2024ರ ಸೋಮವಾರ- ಗೃಹ ವಿಜ್ಞಾನ, ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ದಿನಾಂಕ 02-07-2024ರ ಮಂಗಳವಾರ – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ

ದಿನಾಂಕ 03-07-2024ರ ಬುಧವಾರ – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ

ದಿನಾಂಕ 04-07-2024ರ ಗುರುವಾರ – ಹಿಂದಿ

ದಿನಾಂಕ 05-07-2024ರ ಶುಕ್ರವಾರ- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.

BIG NEWS : ಕೇಂದ್ರ ಸಚಿವ ʻHDKʼಗೆ ಬಿಗ್‌ ಶಾಕ್‌ : ʻದೇವದಾರಿ ಮೈನಿಂಗ್‌ʼ ಗೆ ತಡೆ ನೀಡಿ ರಾಜ್ಯ ಸರ್ಕಾರ ಆದೇಶ

BREAKING : ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ : ಪೊಲೀಸರಿಂದ ಸೂರಜ್‌ ರೇವಣ್ಣ ಮೊಬೈಲ್‌ ಸೀಜ್!

Share.
Exit mobile version