ಹಾಸನ : ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಅರೆಸ್ಟ್‌ ಆಗಿರುವ ಎಂಎಲ್‌ ಸಿ ಸೂರಜ್‌ ರೇವಣ್ಣ ಅವರ ಮೊಬೈಲ್‌ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇಂದು ಪೊಲೀಸ್‌ ಠಾಣೆಯಲ್ಲಿ ಸೂರಜ್‌ ರೇವಣ್ಣ ಮೊಬೈಲ್‌ ಜಪ್ತಿ ಮಾಡಿರುವ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬ್ಲ್ಯಾಕ್‌ ಮೇಲ್‌ ವಿಚಾರದ ಕುರಿತು ಸೂರಜ್‌ ರೇವಣ್ಣ ಸಾಕ್ಷ್ಯ ನೀಡಲು ಹೋದಾಗ ಅರೆಸ್ಟ್‌ ಆಗಿದ್ದರು. ಇದೀಗ ಪೊಲೀಸರು ಮೊಬೈಲ್‌ ವಶಕ್ಕೆ ಪಡೆದುಕೊಂಡಿದ್ದು, ಮೆಸೇಜ್‌, ವಾಟ್ಸಪ್‌ ಕರೆ, ಫೋನ್‌ ಕರೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನೂ ಸೂರಜ್‌ ರೇವಣ್ಣ ವಿರುದ್ಧದ ಯುವಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Share.
Exit mobile version