ಬೆಂಗಳೂರು: ಇಂದು ರಾಜ್ಯಾಧ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ-2ರ ಇತಿಹಾಸ ಮತ್ತು ಫಿಜಿಕ್ಸ್ ಪರೀಕ್ಷೆ ನಡೆಯಿತು. ಈ ಪರೀಕ್ಷೆಗೆ 55,402 ವಿದ್ಯಾರ್ಥಿಗಳು ಹಾಜರಾಗಿದ್ರೇ, 6,878 ಮಂದಿ ಗೈರಾಗಿದ್ದಾರೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಬೆಂಗಳೂರು ನಾರ್ಥನಲ್ಲಿ ಪರೀಕ್ಷೆಗೆ 5555 ಮಂದಿ ನೋಂದಾಯಿಸಿಕೊಂಡಿದ್ದರು. ಇವರಲ್ಲಿ 5035 ಮಂದಿ ಹಾಜರಾಗಿದ್ದಾರೆ. 520 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದಿದೆ.
ಇನ್ನೂ ಬೆಂಗಳೂರು ನಾರ್ಥ್ ನಲ್ಲಿ 7498 ಮಂದಿಯಲ್ಲಿ 6743 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ 592, ರಾಮನಗರ 542, ಬಳ್ಳಾರಿಯಲ್ಲಿ 1848, ಬಾಗಲಕೋಟೆ 1346, ವಿಜಯಪುರ 383, ಬೀದರ್ 1577, ಚಿತ್ರದುರ್ಗ 1694, ಚಿಕ್ಕಮಗಳೂರು 530 ವಿದ್ಯಾರ್ಥಿಗಳು ಇಂದು ನಡೆದಂತ ಇತಿಹಾಸ ಮತ್ತು ಫಿಜಿಕ್ಸ್ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ತಿಳಿಸಿದೆ.
ಇಂದಿನ ಇತಿಹಾಸ ಮತ್ತು ಭೌತಶಾಸ್ತ್ರ ಪರೀಕ್ಷೆಗೆ 62,280 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 55,402 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 6,878 ಮಂದಿ ಗೈರಾಗಿದ್ದಾರೆ. ಇಂದು ಶೇ.88.96ರಷ್ಟು ಹಾಜರಾತಿ ಇದೆ ಎಂದು ಹೇಳಿದೆ.
ಪ್ರಜ್ವಲ್ ಪ್ರಕರಣ; ಪ್ರಧಾನಿ ಮೋದಿ, ದೇವೇಗೌಡರ ಕುಟುಂಬವೇ ನೇರ ಹೊಣೆ: ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ