ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ನಿಮ್ಮ ಮೊಬೈಲ್ ಅಪ್ಪಿತಪ್ಪಿ, ಕೈಜಾರಿ ನೀರನಲ್ಲಿ ಬಿದ್ದರೆ ಅಥವಾ ಬಾತ್‌ರೂಮ್‌ನಲ್ಲಿ ಬಿದ್ದರೆ ಮೊಬೈಲ್ ಹಾಳಾಗಿಹೋಯಿತು ಎಂದು ನೀವೇ ನಿರ್ಧಾರ ಮಾಡಬೇಡಿ. ಬದಲಾಗಿ ನಾವು ಹೇಳು ಈ ಒಂದು ಟಿಪ್ಸ್ ಫಾಲೋ ಮಾಡಿ ನೋಡಿ, ನಿಮ್ಮ ಮೊಬೈಲ್ ಮತ್ತೆ ಮೊದಲಿನಂತೆ ರೆಡಿಯಾಗಿಬಿಡುತ್ತದೆ. ಅಂದಹಾಗೆ ನಾವು ಹೇಳುವ ಈ ಕೆಲಸ ಮೊಬೈಲ್ ನೀರಿಗೆ ಬಿದ್ದ ತಕ್ಷಣವೇ ಮಾಡಬೇಕು. ತಡಮಾದೇ ಹೀಗೆ ಮಾಡಿದರೆ ಮತ್ತೆ ಎಂದಿನಂತೆ ಬಳಸಬಹುದು.
ಮೊಬೈಲ್ ನೀರಿಗೆ ಬಿದ್ದ ತಕ್ಷಣ ಅದನ್ನು ಸ್ವಿಚ್ ಆಫ್ ಮಾಡಿ. ಮೊಬೈಲ್‌ನ ಬ್ಯಾಟರಿ, ಬ್ಯಾಕ್ ಕ್ಯಾಪ್ ಹೀಗೆ ಎಲ್ಲ ಬಿಡಿಭಾಗಗಳನ್ನು ಬೇರ್ಪಡಿಸಿ. ನಂತರ ಒಂದು ತೆಳುವಾದ ಒಣಗಿದ ಬಟ್ಟೆಯಿಂದ ಎಷ್ಟು ಸಾಧ್ಯವೋ ಅಷ್ಟು ಒಣಗುವಂತೆ ಮೊಬೈಲ್ ಅನ್ನು ಒರೆಸಿ, ನೀರು ಹೋಗುವವರೆಗೂ ಒರೆಸಿ.
ಮೊಬೈಲ್‌ನ ಹೆಡ್ ಫೋನ್ ರಂದ್ರ ಹಾಗು ಸ್ಪೀಕರ್, ಚಾರ್ಜಿಂಗ್ ರಂದ್ರದಲ್ಲಿ ನೀರು ಸೇರಿದ್ದರೂ ಊದಿ ಊದಿ ಒರೆಸಿಕೊಳ್ಳಿ. ಇಷ್ಟೆಲ್ಲ ಮಾಡಿದ ನಂತರ ಅಡುಗೆಮನೆಯಲ್ಲಿರುವ ಅಕ್ಕಿಡಬ್ಬದಲ್ಲಿ ಮೊಬೈಲ್‌ಅನ್ನು ಎರಡು ದಿನಗಳ ಕಾಲ ಇಟ್ಟುಬಿಡಿ. ಅಕ್ಕಿಯಲ್ಲಿ ನೀರು ಹೀರುವ ಗುಣವಿದ್ದು ನಿಮ್ಮ ಮೊಬೈಲ್‌ನಲ್ಲಿ ಸೇರಿಕೊಂಡ ನೀರನ್ನೆಲ್ಲಾ ಅಕ್ಕಿ ಹೀರಿಕೊಳ್ಳುತ್ತದೆ. ಎರಡು ದಿನಗಳವರೆಗೂ ಇದನ್ನು ಆಚೆ ತೆಗೆಯಬೇಡಿ. ನಂತರ ಮೊಬೈಲ್ ಬಿಡಿಭಾಗಗಳನ್ನು ಜೋಡಿಸಿ ಸ್ವಿಚ್ ಆನ್ ಮಾಡಿ. ಶೇಕಡಾ ತೊಂಬತ್ತರಷ್ಟು ಮೊಬೈಲ್‌ಗಳು ಹೀಗೆ ಮಾಡಿ ಪುನಃ ಬಳಕೆಗೆ ಯೋಗ್ಯವಾಗಿವೆ. ಕೆವೊಮ್ಮೆ ಮೊಬೈಲ್‌ಗೆ ತುಂಬಾ ಡ್ಯಾಮೇಜ್ ಆಗಿದ್ದರೆ ಈ ಟಿಪ್ಸ್ ಕೆಲಸ ಮಾಡುವುದಿಲ್ಲ ಎಂದು ಸಹ ನಾವು ಹೇಳುತ್ತೇವೆ. ಆದರೆ ಎಷ್ಟೋ ಮೊಬೈಲ್‌ಗಳು ಹೀಗೆಯೇ ಸರಿಯಾದ ಉದಾರಣೆಗಳಿವೆ.