ಬೆಂಗಳೂರು: ಸೈಬರ್ ವಂಚನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ತಡೆಗೆ ಪೊಲೀಸರು ಎಷ್ಟೇ ಕ್ರಮ ವಹಿಸಿದ್ರೂ ವಂಚಕರು ಮಾತ್ರ ಮಗದೊಂದು ದಾರಿಯನ್ನು ಹಿಡಿಯುವ ಮೂಲಕ ಬ್ಯಾಂಕ್ ಗ್ರಾಹಕರ ಖಾತೆಗೆ ಕನ್ನ ಹಾಕಲಾಗುತ್ತಿದೆ. ಇದರ ನಡುವೆ ನೀವು ಈ ಆನ್ ಲೈನ್ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದೇ ಆದ್ರೇ, ನೀವು ವಂಚನೆಗೆ ಒಳಗಾಗೋಕೆ ಸಾಧ್ಯವೇ ಇಲ್ಲ. ಅವು ಏನು ಅಂತ ಮುಂದೆ ಓದಿ.
ಸೋಷಿಯಲ್ ಮೀಡಿಯಾಗಳ ಬಳಕೆ ಹೆಚ್ಚಾದಂತೆ, ನಮ್ಮ ವೈಯಕ್ತಿಕ ಮಾಹಿತಿಗಳನ್ನು ಅಲ್ಲಿ ಹಂಚಿಕೊಂಡು, ಆನ್ ಲೈನ್ ವಂಚಕರಿಗೆ ನಾವೇ ಅವಕಾಶ ಮಾಡಿಕೊಡುವಂತ ನಡೆಯನ್ನು ತೋರಿ ಬಿಡುತ್ತೇವೆ. ಆದರೇ ಹೀಗೆ ಮಾಡೋದನ್ನು ತಪ್ಪಿಸಿದ್ರೇ, ಅಗತ್ಯವಿರುವ, ಗೌಪ್ಯತೆಗೆ ಧಕ್ಕೆ ಆಗದಂತ ವಿಷಯಗಳನ್ನು ಅಷ್ಟೇ ಹಂಚಿಕೊಳ್ಳುವುದರಿಂದ ನೀವು ಆನ್ ಲೈನ್ ವಂಚನೆಯನ್ನು ತಡೆಯಬಹುದಾಗಿದೆ.
5 ಆನ್ ಲೈನ್ ಸುರಕ್ಷಾ ಕ್ರಮಗಳು
- ಯಾವುದೇ ಕಾರಣಕ್ಕೂ ನಿಮ್ಮ ಮಾಹಿತಿಗಳಾದ ಪೂರ್ಣ ಹೆಸರು, ಮನೆಯ ವಿಳಾಸ ಮತ್ತು ನಿಮ್ಮ ಮಕ್ಕಳ ಶಾಲೆಯ ಹೆಸರನ್ನು ಇಂಟರ್ನೆಟ್ ನಲ್ಲಿ ಹಂಚಿಕೊಳ್ಳಬೇಡಿ.
- ಯಾವಾಗಲೂ ನಿಮ್ಮ ಕಂಪ್ಯೂಟರ್ ನಿಂದ ನಿಮ್ಮ ಸೋಷಿಯಲ್ ಮೀಡಿಯಾ ಖಾತೆಗಳನ್ನು ಲಾಗ್ ಆಫ್ ಮಾಡಿ.
- ನಿಮ್ಮ ಪಾಸ್ ವರ್ಡ್ ಗಳನ್ನು ಯಾವ ಕಾರಣಕ್ಕೂ ಯಾರೊಂದಿಗೂ ಹಂಚಿಕೊಳ್ಳಬೇಡಿ.
- ಆನ್ ಲೈನ್ ನಲ್ಲಿ ಅಪರಿಚಿತರೊಂದಿಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
- ಸಾಮಾಜಿಕ ಜಾಲತಾಣಗಳ ಬಳಕೆಗೆ ಸೂಕ್ತ ವಯಸ್ಸಿನ ಮಿತಿಗಳನ್ನು ಅನುಸರಿಸಿ ಬಳಸುವುದು ಅವಶ್ಯಕ.
#CyberSecurityAwareness #cybersecuritytips pic.twitter.com/O0nkLrnBOO
— ಕರ್ನಾಟಕ ರಾಜ್ಯ ಪೊಲೀಸ್ Karnataka State Police (@KarnatakaCops) August 27, 2024