ಬೆಂಗಳೂರು: ರಾಜ್ಯದ ಅಲ್ಲಲ್ಲಿ ವನ್ಯ ಜೀವಿಗಳ ಹಾವಳಿ ಹೆಚ್ಚಾಗಿದೆ. ಕೆಲವೆಡೆ ದಾಳಿ ನಡೆಸಿ ಮಾನವ ಜೀವ ಹಾನಿಯಾಗಿದ್ದರೇ, ಮತ್ತೆ ಕೆಲವೆಡೆ ಬೆಳೆ ನಾಶಗೊಂಡು ರೈತ ಕಂಗಾಲಾಗಿದ್ದಾನೆ. ಇದೇ ಸಂದರ್ಭದಲ್ಲಿ ಅರಣ್ಯ ಪ್ರದೇಶದ ಹೊರಗೆ ವನ್ಯ ಜೀವಿಗಳು ಕಂಡು ಬಂದರೇ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ಇಲಾಖೆ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಅರಣ್ಯ ಪ್ರದೇಶದ ಹೊರಗೆ ಎಲ್ಲೇ ವನ್ಯಜೀವಿಗಳು ಕಂಡರೆ ಸಾರ್ವಜನಿಕರು 1926 ಸಹಾಯವಾಣಿಗೆ ಕರೆ ಮಾಡಿದರೆ ಸಾಕು. ಸ್ವಯಂ ಚಾಲಿತವಾಗಿ ಕೇಂದ್ರ ಮತ್ತು ಸಂಬಂಧಿತ ವಲಯ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ರವಾನೆಯಾಗಲಿದೆ. ದೂರು ದಾಖಲಾದ ಕೂಡಲೇ ಕ್ರಮ ವಹಿಸಲಾಗುವುದು.
ಅರಣ್ಯ ಪ್ರದೇಶದ ಹೊರಗೆ ಎಲ್ಲೇ ವನ್ಯಜೀವಿಗಳು ಕಂಡರೆ ಸಾರ್ವಜನಿಕರು 1926 ಸಹಾಯವಾಣಿಗೆ ಕರೆ ಮಾಡಿದರೆ ಸಾಕು. ಸ್ವಯಂ ಚಾಲಿತವಾಗಿ ಕೇಂದ್ರ ಮತ್ತು ಸಂಬಂಧಿತ ವಲಯ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ರವಾನೆಯಾಗಲಿದೆ. ದೂರು ದಾಖಲಾದ ಕೂಡಲೇ ಕ್ರಮ ವಹಿಸಲಾಗುವುದು. pic.twitter.com/IVvUskrB6u
— DIPR Karnataka (@KarnatakaVarthe) January 5, 2026
ವೈದ್ಯಕೀಯ ಶಿಕ್ಷಣ ಇಲಾಖೆ ಸಿಬ್ಬಂದಿಗೆ ‘ಟರ್ಮ್ ಇನ್ ಶ್ಯೂರೆನ್ಸ್’ ಕಡ್ಡಾಯ








