ನವದೆಹಲಿ : ಯಾರಿಗಾದರೂ ಆರ್ಥಿಕವಾಗಿ ಹಣದ ಅಗತ್ಯವಿದ್ದರೆ, ನಾವು ಸ್ನೇಹಿತರು ಅಥವಾ ಸಂಬಂಧಿಕರನ್ನ ಕೇಳುತ್ತೇವೆ. ಆದರೆ ಅವರ ಬಳಿ ಹಣವೂ ಇಲ್ಲದಿದ್ದರೆ, ನಾವು ಬ್ಯಾಂಕುಗಳನ್ನು ಸಂಪರ್ಕಿಸುತ್ತೇವೆ. ಬ್ಯಾಂಕುಗಳು ವ್ಯಕ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಕೇಳುತ್ತವೆ.
ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಸಾಲವನ್ನು ಮಂಜೂರು ಮಾಡಲಾಗುತ್ತದೆ. ಇಲ್ಲದಿದ್ದರೆ, ಹೆಚ್ಚಿನ ಬಡ್ಡಿಯೊಂದಿಗೆ ಸಾಲ ಮಂಜೂರು ಮಾಡುವ ಸಾಧ್ಯತೆಗಳಿವೆ. ಇದಕ್ಕಾಗಿ ಯಾವುದೇ ಬ್ಯಾಂಕ್ ಆದ್ರು ಮೊದಲು KYC ಅಗತ್ಯವಿದೆ. ಆಧಾರ್ ಬಯೋಮೆಟ್ರಿಕ್’ನೊಂದಿಗೆ ಲಿಂಕ್ ಮಾಡಿ, ವಿವರಗಳನ್ನು ಪರಿಶೀಲಿಸುತ್ತಾರೆ.
ಆಧಾರ್ ಕಾರ್ಡ್ನೊಂದಿಗೆ ಸುಮಾರು 50,000 ರೂ.ಗಳ ವೈಯಕ್ತಿಕ ಸಾಲವನ್ನ ಪಡೆಯಬಹುದು. ಅದು ಇಲ್ಲಿ ಹೇಗೆ ಎಂದು ತಿಳಿಯೋಣ. ಆಧಾರ್ ಕಾರ್ಡ್ ಮೂಲಕ ಸಾಲ ಪಡೆಯುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯವೆಂದರೆ, ಆ ವ್ಯಕ್ತಿ ಇರಲೇಬೇಕು ಮತ್ತು ಯುಐಡಿಎಐ ನೀಡಿದ ಆಧಾರ್ ಹೊಂದಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 20 ರಿಂದ 60 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಇದರೊಂದಿಗೆ ಅರ್ಜಿದಾರರು ತಿಂಗಳಿಗೆ ಕನಿಷ್ಠ 15,000 ರೂ.ಗಳ ಗಳಿಕೆಯನ್ನ ಹೊಂದಿರಬೇಕು. ಅವರು ಆ ಕೆಲಸದಲ್ಲಿ ಕನಿಷ್ಠ ಒಂದು ವರ್ಷ ಕೆಲಸ ಮಾಡಿರಬೇಕು. ಪೇ ಸ್ಲಿಪ್’ಗಳನ್ನು ಸಹ ಕೇಳಲಾಗುತ್ತದೆ.
600 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಸಹ ವ್ಯಕ್ತಿಗೆ ಸಾಕಾಗುತ್ತದೆ. ಇವುಗಳ ಜೊತೆಗೆ ಆದಾಯ ಪ್ರಮಾಣಪತ್ರ, ಬ್ಯಾಂಕ್ ಸ್ಟೇಟ್ಮೆಂಟ್ಗಳು ಮತ್ತು ಮತದಾರರ ಗುರುತಿನ ಚೀಟಿಯ ಪುರಾವೆಗಳನ್ನ ಸಲ್ಲಿಸಬೇಕು.
ನನ್ನ ಬಂಧಿಸೋಕೆ ‘100 ಸಿದ್ದರಾಮಯ್ಯ’ ಬರಬೇಕು : ಸಿಎಂ ಹೇಳಿಕೆಗೆ ಕೇಂದ್ರ ಸಚಿವ HD ಕುಮಾರಸ್ವಾಮಿ ತಿರುಗೇಟು
ಸ್ಟಾರ್ಬಕ್ಸ್ ಹೊಸ ‘CEO’ ಅಸಾಧಾರಣ ಪ್ರಯಾಣ ; ಕಚೇರಿಗೆ ತೆರಳಲು ಖಾಸಗಿ ಜೆಟ್’ನಲ್ಲಿ 1,600 ಕಿ.ಮೀ ಹಾರಾಟ
Good News: ‘ಮದ್ಯಪ್ರಿಯ’ರಿಗೆ ಸಿಹಿಸುದ್ದಿ: ಶೀಘ್ರವೇ ಕರ್ನಾಟಕದಲ್ಲಿ ಶೇ.15ರಿಂದ 25ರಷ್ಟು ‘ದರ ಇಳಿಕೆ’