ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಗರ್ಭಿಣಿಯರು ತಮ್ಮ ಆರೋಗ್ಯವನ್ನು ತುಂಬಾ ನಾಜೂಕಾಗಿ ಇಟ್ಟುಕೊಳ್ಳಬೇಕು. ಕೆಲವೊಂದು ಆಹಾರಗಳನ್ನು ಸೇವಿಸಲೇಬಾರದು, ಇನ್ನು ಕೆಲ ಆಹಾರಗಳನ್ನು ಅವರು ಸೇವಿಸಲೇಬೇಕು. ಜ್ಯೂಸ್‌ಗಳ ವಿಷಯಕ್ಕೆ ಬಂದರೆ ಗರ್ಭಿಣಿಯರು ಸೇವಿಸಲೇಬೇಕಾದ ಜ್ಯೂಸ್‌ಗಳಾವವು ಹಾಗು ಅದರಿಂದ ಏನು ಪ್ರಯೋಜನ ಎಂದು ತಿಳಿದುಕೊಳ್ಳೋಣ.
ಬೀಟ್‌ರೂಟ್ ಜ್ಯೂಸ್: ಇದರಲ್ಲಿ ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಗರ್ಭಿಣಿಯರಿಗೆ ಬಳಲಿಕೆ ಸುಸ್ತು ಕಡಿಮೆ ಮಾಡುತ್ತದೆ ಹಾಗು ದೇಹಕ್ಕೆ ನಿಶ್ಯಕ್ತಿ ಉಂಟಾದರೆ ಅದನ್ನು ಕಡಿಮೆ ಮಾಡಿ ದೇಹಕ್ಕೆ ಶಕ್ತಿ ನೀಡುತ್ತದೆ.
ದಾಳಿಂಬೆ ಜ್ಯೂಸ್: ಇದರಲ್ಲಿ ಹೆಚ್ಚಿನ ನಾರಿನಾಂಶ ಹಾಗು ವಿಟಮಿನ್ ಸಿ ಮತ್ತು ಕೆ ಇರುತ್ತದೆ. ಇದು ದೇಹವು ಹೆಚ್ಚಿನ ಪ್ರಮಾಣದ ಕಬ್ಬಿನಾಂಶವನ್ನು ಹೀರಿಕೊಳ್ಳಲು ನೆರವಾಗುತ್ತದೆ. ಇದು ದೇಹವನ್ನು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುತ್ತದೆ. ಹಾಗು ದಾಳಿಂಬೆ ಜ್ಯೂಸ್ ಮಲಬದ್ಧತೆಯನ್ನೂ ನಿವಾರಿಸುತ್ತದೆ.
ಸ್ಟ್ರಾಬೆರಿ ಜ್ಯೂಸ್: ಗರ್ಭಿಣಿಯರು ಈ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸಿದರೆ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಹಾಗು ಇದರಲ್ಲಿರುವ ಫಾಲಟೆ ಅಂಶವು ಪ್ರತಿರೋಧಕ ಶಕ್ತಿಯನ್ನು ವೃದ್ಧಿ ಮಾಡುತ್ತದೆ.
ಕ್ಯಾರೆಟ್ ಜ್ಯೂಸ್: ಗರ್ಭಿಣಿಯರು ಈ ಜ್ಯೂಸ್ ಅನ್ನು ತಪ್ಪದೇ ನಿಯಮಿತವಾಗಿ ಸೇವಿಸಬೇಕು. ಇದರಲ್ಲಿ ಉತ್ತಮ ಪ್ರಮಾಣದ ಕ್ಯಾಲಿಸಿಯಂ ಇದ್ದು, ಮಗುವಿನ ಮೂಳೆ ಹಾಗು ಹಲ್ಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಇದು ದೇಹಕ್ಕೆ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಮತ್ತು ಇದು ಫ್ರೀ ರ್ಯಾಡಿಕಲ್‌ನಿಂದ ತಾಯಿಯ ಆರೋಗ್ಯಕ್ಕೆ ರಕ್ಷಾಕವಚದಂತೆ ಕೆಲಸ ಮಾಡುತ್ತದೆ.
ಪೇರಳೆ ಜ್ಯೂಸ್: ಇದು ಗರ್ಭಿಣಿಯರಿಗೆ ತಂಬಾ ಒಳ್ಳೆಯದು. ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ರಕ್ತ ಹೀನತೆ ನಿವಾರಿಸಿವ ಶಕ್ತಿ ಇದಕ್ಕಿದೆ. ಹಿಮೋಗ್ಲೋಬಿನ್ ಮಟ್ಟವನ್ನು ವೃದ್ಧಿಸುತ್ತದೆ. ಇದರಲ್ಲಿರುವ ವಿಟಮಿನ ಸಿ ಅಂಶವು ದೇಹಕ್ಕೆ ಪ್ರತಿರೋಧಕ ಶಕ್ತಿಯನ್ನು ನೀಡುತ್ತದೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.