ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮಲಬದ್ಧತೆಗೆ ಕಾರಣಗಳು ಅನೇಕ. ಈ ಸಮಸ್ಯೆ ಎದುರಿಸುತ್ತಿರುವವರು ಹೊಟ್ಟೆ ಉಬಾರ. ಎತ್ತೇಚ್ಛವಾಗಿ ಗ್ಯಾಸ್ ರಿಲೀಸ್ ಆಗುವುದು. ಅನಿಯಮಿತ ಕರುಳಿನ ಚಲನೆ ಈ ಎಲ್ಲ ಅನಾರೋಗ್ಯ ಕಾಡುತ್ತಿರುತ್ತದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಊಟದ ವ್ಯವಸ್ಥೆ. ನಮ್ಮ ಆಹಾರದ ಪದ್ಧತಿಯಲ್ಲಿ ಕೆಲ ಬದಲಾವಣೆ ಅಥವಾ ಕೆಲ ಆಹಾರಗಳನ್ನು ಸೇವಿಸುವುದನ್ನು ಬಿಟ್ಟರೆ ಈ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
ಚಾಕೋಲೇಟ್: ಚಾಕೋಲೇಟ್ ಮಲಬದ್ಧತೆಯನ್ನು ಹೆಚ್ಚಿಸುತ್ತದೆ. ಹಾಲಿನ ಚಾಕೋಲೇಟ್‌ನಲ್ಲಿ ಅಪಾರ ಪ್ರಮಾಣದಲ್ಲಿ ಕೊಬ್ಬು ಇದ್ದು, ಇದು ಆಹಾರ ಚಲನೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ಮಲಬದ್ಧತೆ ಉಂಟಾಗುತ್ತದೆ.
ಬಾಳೆ ಕಾಯಿ: ಮಾಗದ ಬಾಳೆ ಹಣ್ಣು ತಿಂದರೆ ಹೊಟ್ಟೆಯ ಆರೋಗ್ಯ ಹಾಳಾಗುತ್ತದೆ. ಬಾಳೆ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳಿವೆ ನಿಜ, ಆದರೆ ಮಾಗದ ಬಾಳೆ ಹಣ್ಣು ಸೇವನೆ ಮಲಬದ್ಧತೆ ಉಂಟು ಮಾಡುತ್ತದೆ. ರಾ ಬನಾನಾದಲ್ಲಿನ ಹೆಚ್ಚಿನ ಪ್ರಮಾಣದ ನಾರಿನಾಂಶ ದೇಹದ ಜೀರ್ಣಕ್ರಿಯೆಯನ್ನು ಹದಗೆಡಿಸುತ್ತದೆ. ಹಾಗಾಗಿ ಮಲಬದ್ಧತೆ ಇದ್ದವರು ಹಸಿರು ಬಾಳೆ ಹಣ್ಣನ್ನು ಸೇವಿಸಬೇಡಿ.
ಸಂಸ್ಕರಿತ ಆಹಾರ: ಇಂದಿನ ವೇಗದ ಜೀವನಶೈಲಿಯಲ್ಲಿ ಸಂಸ್ಕರಿತ ಆಹಾರ ಸೇವನೆ ಹೆಚ್ಚಾಗಿದೆ. ಆದರೆ ಇದು ತುಂಬಾ ಅಪಾಯಕಾರಿ. ಸಲಾಮಿ, ಸಾಸೇಜ್, ಉಳಿದ ಆಹಾರ ಫ್ರಿಡ್ಜ್‌ನಲ್ಲಿಟ್ಟು ತಿನ್ನುವುದು, ಸೋಡಿಯಂ ಅಥವಾ ಸಕ್ಕರೆ ಅಂಶವಿದ್ದ ಸಂಸ್ಕರಿತ ಆಹಾರ ಸೇವನೆ ಜೀರ್ಣಕ್ರಿಯೆಗೆ ಕೊಡಲಿ ಪೆಟ್ಟು ನೀಡುತ್ತದೆ. ಇಂದರಿಂದ ಮಲಬದ್ಧತೆ ಸಮಸ್ಯೆ ಶುರುವಾಗುತ್ತದೆ. ಜೊತೆಗೆ ಇದು ಕರುಳಿನ ಸಮಸ್ಯೆಯನ್ನೂ ಹೆಚ್ಚಿಸುತ್ತದೆ. ಆದಷ್ಟು ತಾಜಾ ಹಣ್ಣು ತರಕಾರಿಗಳನ್ನು ತಿಂದು ಮಲಬದ್ಧತೆಯಿಂದ ದೂರವಿರಿ.
ಕೆಂಪು ಮಾಂಸ: ನಾನ್‌ವೆಜ್ ಸೇವಿಸುವವರಿಗೆ ಈ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಕೆಂಪು ಮಾಂಸ ನಾಲಿಗೆಗೆ ರುಚಿಕೊಟ್ಟರೂ ದೇಹಕ್ಕೆ ಅಷ್ಟಾಗಿ ಒಗ್ಗುವುದಿಲ್ಲ. ಕೆಂಪು ಮಾಂಸ್ ಬೇಗ ಜೀರ್ಣವಾಗುವುದಿಲ್ಲ. ಇನ್ನು ನಿತ್ಯವೂ ಕೆಂಪು ಮಾಂಸ ಊಟ ಸೇವಿಸಿದರೆ ಜೀರ್ಣಕ್ರಿಯೆ ಸುಗಮವಾಗಿ ಆಗದೇ ಮಲಬದ್ಧತೆ ಉಂಟಾಗುತ್ತದೆ.
ಮಧ್ಯಪಾನ: ಮಧ್ಯಪಾನ ಚಟವಿದ್ದರೆ ಮಲಬದ್ಧತೆ ಸರ್ವೇ ಸಾಮಾನ್ಯ. ಮಧ್ಯಪಾನ ಸೇವಿಸಿದರೆ ದೇಹ ನಿರ್ಜಲೀಕರಣವಾಗುತ್ತದೆ. ದೇಹದಲ್ಲಿ ನೀರಿನ ಕೊರೆ ಉಂಟಾದರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಲ್ಲ. ಹಾಗಾಗಿ ಮಧ್ಯಪಾನ ಮಾಡುತ್ತಿದ್ದರೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸುವುದು ತುಂಬಾ ಮುಖ್ಯವಾಗುತ್ತದೆ.
ಕರಿದ ಪದಾರ್ಥಗಳು: ಕರಿದ ಹಾಗು ಜಂಕ್‌ಫುಡ್‌ಗಳಲ್ಲಿ ಸೋಡಿಯಂ ಹಾಗು ಅನೇಕ ಕೃತಕ ಪದಾರ್ಥಗಳಿರುತ್ತವೆ. ಇವ್ಯಾವು ದೇಹದ ಆರೋಗ್ಯಕ್ಕೆ ಹೊಂದಾಣಿಕೆಯಾಗುವುದಿಲ್ಲ. ಕೃತಕ ಆಹಾರ ಪದಾರ್ಥಗಳು ಕೊಲೊನ್ ಮೂಲಕ ಆಹಾರವನ್ನು ಸಾಗಿಸುವುದನ್ನು ನಿಧಾನಗೊಳಿಸುತ್ತದೆ. ಇದು ಮಲಬದ್ಧತೆಗೆ ಕಾರಣವಾಗುತ್ತದೆ.
ಕೆಫೀನ್: ಕೆಫೀನ್ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಎನರ್ಜಿ ಡ್ರಿಂಕ್, ಬ್ಲ್ಯಾಕ್ ಕಾಫಿ, ಕ್ರೀಮ್ ಕಾಫಿ, ಹಾಟ್ ಚಾಕೋಲೇಟ್, ಸೋಡಾ, ಇನ್ಸ್‌ಟಂಟ್ ಕಾಫಿಗಳಲ್ಲಿ ಕೆಫೀನ್ ಪ್ರಮಾಣ ಹೇರಳವಾಗಿರುತ್ತದೆ. ಇವುಗಳನ್ನು ಹೆಚ್ಚು ಸೇವಿಸದರೆ ಮಲಬದ್ಧತೆ ಬರುತ್ತದೆ. ರೆಡಿಮೇಡ್ ಪಾನೀಯಗಳನ್ನು ಕುಡಿಯುವಾಗ ಕೆಫೀನ್ ಪ್ರಮಾಣದ ಬಗ್ಗೆ ಗಮನ ಇರಲಿ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.