ಬೆಂಗಳೂರು: ರಾಜ್ಯದಲ್ಲಿ 1ನೇ ತರಗತಿಗೆ ಮಕ್ಕಳ ದಾಖಲಾತಿಗೆ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಇನ್ಮುಂದೆ 5 ವರ್ಷ 5 ತಿಂಗಳು ತುಂಬಿದ್ದರೇ 1ನೇ ತರಗತಿಗೆ ದಾಖಲಾತಿ ಮಾಡಬಹುದು ಅಂತ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, 1ನೇ ತರಗತಿಗೆ ಮಕ್ಕಳನ್ನು ಸೇರಿಸುವ ವಯೋಮಿತಿಯನ್ನು ಸಡಿಲಿಕೆ ಮಾಡಲಾಗಿದೆ. ಈ ಮೂಲಕ ಪೋಷಕರು ವಯೋಮಿತಿ ಬಗ್ಗೆ ಹೊಂದಿದ್ದಂತ ಗೊಂದಲಕ್ಕೆ ತೆರೆ ಎಳೆಯಲಾಗಿದೆ ಎಂದರು.
ದೇಶಾಧ್ಯಂತ 1ನೇ ತರಗತಿಗೆ ಮಕ್ಕಳ ದಾಖಲಾಗಿತೆ 6 ವರ್ಷ ಕಡ್ಡಾಯವಿದೆ. ಆದರೇ ಈ ವರ್ಷ ಮಾತ್ರ ಕರ್ನಾಟಕದಲ್ಲಿ ವಯಸ್ಸಿನ ಮಿತಿಯನ್ನು ಸಡಿಲಿಕೆ ಮಾಡಲಾಗುತ್ತಿದೆ. ಈ ವರ್ಷ ಮಾತ್ರ 5 ವರ್ಷ 5 ತಿಂಗಳು ತುಂಬಿದ್ದಂತ ಮಕ್ಕಳನ್ನು 1ನೇ ತರಗತಿಗೆ ದಾಖಲಾತಿ ಮಾಡಬಹುದು ಎಂಬುದಾಗಿ ತಿಳಿಸಿದರು.
ಮುಂದಿನ ವರ್ಷದಿಂದ 1ನೇ ತರಗತಿಗೆ ದಾಖಲಾತಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ದೇಶದಲ್ಲಿ ಇರುವಂತೆಯೇ 1ನೇ ತರಗತಿಗೆ ಶಾಲಾ ಮಕ್ಕಳ ದಾಖಲಾತಿಗೆ 6 ವರ್ಷ ಕಡ್ಡಾಯವೆಂಬ ನಿಯಮ ಜಾರಿಯಲ್ಲಿ ಇರಲಿದೆ ಎಂದರು.
ಕರ್ನಾಟಕದಲ್ಲಿ 1ನೇ ತರಗತಿಗೆ ಮಕ್ಕಳ ದಾಖಲಾತಿಯ ವಯಸ್ಸಿನ ಮಿತಿಯ ಸಂಬಂಧ ಎನ್ ಇ ಪಿ ಅವರಿಂದ ವರದಿ ಕೇಳಿದ್ವಿ. ಅಲ್ಲದೇ ಇಲಾಖೆಯವರೊಂದಿಗೂ ಮಾತನಾಡಲಾಗಿತ್ತು. ಎನ್ ಇ ಪಿ ಸೂಚನೆ ಮೇರೆಗೆ ಈ ವರ್ಷ ಮಾತ್ರ 1ನೇ ತರಗತಿ ದಾಖಲಾತಿಗೆ 5 ವರ್ಷ 5 ತಿಂಗಳ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ ಎಂಬುದಾಗಿ ತಿಳಿಸಿದರು.
BIG NEWS: ಹುಬ್ಬಳ್ಳಿ ಎನ್‌ಕೌಂಟರ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ: ಗೃಹ ಸಚಿವ ಡಾ.ಜಿ ಪರಮೇಶ್ವರ್
ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂದಿದ್ದ ಮೋದಿ ದೇಶದ ಯುವ ಜನತೆಗೆ ವಂಚಿಸಿದರು: ಸಿಎಂ ಸಿದ್ದರಾಮಯ್ಯ