ನವದೆಹಲಿ : ಏಪ್ರೀಲ್ ತಿಂಗಳು ಆರಂಭವಾಗಿದ್ದು, ನಾಳೆಯಿಂದ ಬ್ಯಾಂಕುಗಳಿಗೆ ಸಾಲು ಸಾಲು ರಜೆಗಳಿದ್ದು, ಬ್ಯಾಂಕ್ ಕೆಲಸಗಳಿದ್ದರೇ ಇಂದೇ ಮುಗಿಸಿಕೊಳ್ಳಿ.
ಹೌದು, ಏಪ್ರಿಲ್ 10 ರಂದು ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ. ಏಪ್ರಿಲ್ 12 ಎರಡನೇ ಶನಿವಾರ ಹಾಗೂ ಏಪ್ರಿಲ್ 13 ಭಾನುವಾರ, ಏಪ್ರಿಲ್ 14 ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ಸಾಲು ಸಾಲು ರಜೆ ಇರಲಿದೆ.
ಬ್ಯಾಂಕ್ ರಜಾದಿನಗಳ ಪಟ್ಟಿ
ಏಪ್ರಿಲ್ 10: ಮಹಾವೀರ್ ಜಯಂತಿ (ಹೆಚ್ಚಿನ ರಾಜ್ಯಗಳು)
ಏಪ್ರಿಲ್ 12: ಎರಡನೇ ಶನಿವಾರ (ಭಾರತದಾದ್ಯಂತ)
ಏಪ್ರಿಲ್ 13: ಸಾಪ್ತಾಹಿಕ ರಜಾದಿನ (ಭಾರತದಾದ್ಯಂತ)
ಏಪ್ರಿಲ್ 14: ಡಾ.ಭೀಮರಾವ್ ಅಂಬೇಡ್ಕರ್ ಜಯಂತಿ ಮತ್ತು ಪ್ರಾದೇಶಿಕ ಹಬ್ಬಗಳು (ಕೆಲವು ರಾಜ್ಯಗಳು)
ಏಪ್ರಿಲ್ 15: ಬಂಗಾಳಿ ಹೊಸ ವರ್ಷ, ಬೋಹಾಗ್ ಬಿಹು, ಹಿಮಾಚಲ ದಿನ (ಕೆಲವು ರಾಜ್ಯಗಳು)
ಏಪ್ರಿಲ್ 16: ಬೋಹಾಗ್ ಬಿಹು (ಗುವಾಹಟಿ)
ಏಪ್ರಿಲ್ 18: ಗುಡ್ ಫ್ರೈಡೆ (ಹೆಚ್ಚಿನ ರಾಜ್ಯಗಳು)
ಏಪ್ರಿಲ್ 20: ಸಾಪ್ತಾಹಿಕ ರಜಾದಿನ (ಭಾರತದಾದ್ಯಂತ)
ಏಪ್ರಿಲ್ 21: ಗರಿಯಾ ಪೂಜಾ (ಅಗರ್ತಲಾ)
ಏಪ್ರಿಲ್ 26: ನಾಲ್ಕನೇ ಶನಿವಾರ (ಭಾರತದಾದ್ಯಂತ)
ಏಪ್ರಿಲ್ 27: ಸಾಪ್ತಾಹಿಕ ರಜಾದಿನ (ಭಾರತದಾದ್ಯಂತ)
ಏಪ್ರಿಲ್ 29: ಭಗವಾನ್ ಪರಶುರಾಮ ಜಯಂತಿ (ಶಿಮ್ಲಾ)
ಏಪ್ರಿಲ್ 30: ಬಸವ ಜಯಂತಿ, ಅಕ್ಷಯ ತೃತೀಯ (ಬೆಂಗಳೂರು)