ಕಾಶಿಗೆ ಹೋದರೇ , ತರಕಾರಿ ಅಥವಾ ಹಣ್ಣನ್ನು ತ್ಯಾಗ ಮಾಡಬೇಕು ಎಂದು ಅನಾದಿ ಕಾಲದಿಂದಲೂ ಹೇಳುತ್ತಾ ಬಂದಿದ್ದಾರೆ.
ಅದರ ನಿಜಾರ್ಥವು ಇಂತಿದೆ:
ಕಾಶಿಗೆ ಹೋದಾಗ,ಕಾಯನ್ನೋ,ಫಲವನ್ನೋ ಬಿಡಬೇಕು ಎಂದು ನಮ್ಮ ಹಿರಿಯರು ಏಕೆ ಹೇಳುತ್ತಾರೆ? ಅದರ ಮರ್ಮವೇನು,ಅಂದರೆ,ರಹಸ್ಯವೇನು?
ಹಾಗೆ,ಅಧ್ಯಯನ ಮಾಡಿದರೆ, ನಮ್ಮ ಶಾಸ್ತ್ರಗಳಲ್ಲಿ,ಅಂದರೆ,ವೇದ,ಉಪನಿಷತ್ತು,ಪುರಾಣ,ಸ್ಮೃತಿಗಳಲ್ಲಿ ಎಲ್ಲೂ ಈ ಸಂಗತಿ(ಅಂದರೆ,ಒಂದು ಕಾಯನ್ನು ಮತ್ತು ಒಂದು ಹಣ್ಣನ್ನು ಬಿಡಬೇಕು,ಎಂಬುದನ್ನು) ಹೇಳಿಲ್ಲವಲ್ಲ ಎಂಬುದನ್ನು ಕಂಡುಕೊಂಡೆವು ನಾವು.
ಶಾಸ್ತ್ರವು ಹೇಳಿದ ವಿಷಯವನ್ನು,ಆಡುಭಾಷೆಯಲ್ಲಿ,ತಿರುಚಿ ಆದ ಪ್ರಮಾದ ನೋಡಿ ಹೀಗಿದೆ:
ಕಾಶೀ ಕ್ಷೇತ್ರದ ವಿಷಯದಲ್ಲಿ ಶಾಸ್ತ್ರಗಳು ಹೇಳುತ್ತಿರುವುದು – ಕಾಶೀ ಕ್ಷೇತ್ರಕ್ಕೆ ಹೋಗಿ,ಗಂಗಾ ಸ್ನಾನ ಮಾಡಿ,ಅಲ್ಲಿ,ಅಂದರೆ,ಆ ಗಂಗೆಯಲ್ಲಿ,ಕಾಯಾಪೇಕ್ಷೆ ಮತ್ತು ಫಲಾಪೇಕ್ಷೆಯನ್ನು ತ್ಯಾಗ ಮಾಡಿ,ಅಂದರೆ,ತೊರೆದು,ನಂತರ,ಭಕ್ತಿಯಿಂದ ವಿಶ್ವನಾಥನ ದರುಶನ ಮಾಡಬೇಕು ಎಂದು.
ಇಲ್ಲಿ ಕಾಯಾಪೇಕ್ಷೆ ಅಂತರ ತನ್ನ ಅಥವ ಇತರರ ದೇಹದ ಮೇಲಿನ ಅಪೇಕ್ಷೆ ಹಾಗು ಫಲಾಪೇಕ್ಷೆ ಅಂದರೆ,ಮಾಡಿದ ಕರ್ಮಂಗಳಿಂದ ಉಂಟಾಗುವ ಫಲಗಳ ಅಪೇಕ್ಷೆ ಬಿಡಬೇಕು ಎಂಬುದು ಶಾಸ್ತ್ರವಚನಾರ್ಥವು.
ಇವೆರಡನ್ನೂ ಮಾಡಿದ ಕ್ಷಣವೇ,ಜೀವನ್ಮುಕ್ತಿಯು ದೊರೆಯುವುದು ನಿಶ್ಚಿತವಾಗುವುದು,ಆಗ ಕಾಶಿಯ ವಿಶ್ವನಾಥನ ದರುಶನದಿಂದ, ನಿಜಫಲವು (ಅಂದರೆ,ಮುಕ್ತಿಯೇ) ಸಿಗುವುದು ಎಂದರ್ಥವು.
ಕಾಲ ಕಳೆದಂತೆ,ಈ ಶಾಸ್ತ್ರವಚನವು,ಅಪಭ್ರಂಶಗೊಂಡು,ಅಂದರೆ ಕಾಶಿಗೆ ಹೋದಾಗ,ಒಂದು ಕಾಯಿ ಅಂದರೆ ತರಕಾರಿಯನ್ನೋ ಮತ್ತು ಒಂದು ಫಲ ಅಂದರೆ,ಯಾವುದೋ ಇಷ್ಟದ ತಿಂಡಿಯನ್ನೋ,ಹಣ್ಣನ್ನೋ,ಒಣಹಣ್ಣನ್ನೋ ಬಿಡುವುದು ಸಂಪ್ರದಾಯ ಆಯಿತು.
ಇದು ಸುಲಭ ಸಾಧ್ಯವಾದುದರಿಂದ ಜನರೆಲ್ಲಾ ಇದನ್ನೇ ಪುರಸ್ಕರಿಸಿದರು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಕಾಯ ಅಪೇಕ್ಷೆ ಅಂದರೆ ಶರೀರದ ಬಯಕೆಗಳನ್ನು ಮತ್ತು ಫಲ ಅಂದರೆ ಕರ್ಮಫಲಂಗಳ ಬಯಕೆ ಬಿಡುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಗೊತ್ತು.









