ಬೆಂಗಳೂರು : ಆತ್ಮಹತ್ಯೆಯ ಯೋಚನೆ ಬಂದವರಿಗೆ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವ ಹೊಸ ಇಂಜೆಕ್ಷನ್ ಕಂಡುಹಿಡಿಯಲಾಗಿದೆ.
ಹೌದು, ಆತ್ಮಹತ್ಯೆ ತಡೆಗೆ ಇಂಜೆಕ್ಷನ್ ಕಂಡುಹಿಡಿಯಲಾಗಿದ್ದು, ಸದ್ಯ ರಾಜ್ಯ ವಿವಿಧ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಬರುವ ರೋಗಿಗಳನ್ನ ವಿವಿಧ ಮಾನಸಿಕ ಮತ್ತು ದೈಹಿಕ ಪ್ರಯೋಗ, ಚಿಕಿತ್ಸೆಗಳಿಗೆ ಒಳಡಿಸಿದ ಬಳಿಕ ಈ ಇಂಜೆಕ್ಷನ್ ನಿಡಲಾಗುತ್ತದೆ. ಒಮ್ಮೆ ಈ ಇಂಜೆಕ್ಷನ್ ತೆಗೆದುಕೊಂಡವರು ಮತ್ತೊಮ್ಮೆ ಆತ್ಮಹತ್ಯೆ ಯೋಚನೆ ಮಾಡವುದಿಲ್ಲ ಎಂದು ಡಾ ರೂಪೇಶ್ ಕುಮಾರ್ ಹೇಳಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಬಂದವರಿಗೆಲ್ಲಾ ಇಂಜೆಕ್ಷನ್ ಕೊಡಲ್ಲ, ಬದಲಿಗೆ ಅವರಿಗೆ ಪರೀಕ್ಷೆ ಮಾಡಿದ ಬಳಿಕ ಅವರಿಗೆ ಇಂಜೆಕ್ಷನ್ ಅಗತ್ಯವಿದ್ರೆ ಮಾತ್ರ ಅವರಿಗೆ ಗೊತ್ತಾಗದ ಹಾಗೆ ಗ್ಲೂಕೋಸ್ ಮೂಲಕ ಇದನ್ನ ನೀಡಲಾಗುತ್ತದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಬೆಲೆ 15-20 ಸಾವಿರ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತವಾಗಿ ನೀಡಲಾಗುತ್ತದೆಯಂತೆ.