ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಎಷ್ಟೋ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಸ್ಯೆ ಇದ್ದೇ ಇರುತ್ತದೆ. ಸರಿಯಾದ ಸಮಯಕ್ಕೆ ಪೀರೇಡ್ಸ್ ಆಗದೇ ಇರುವವರಿಗೆ ಇಲ್ಲಿ ಕೆಲ ಆಹಾರ ಪದಾರ್ಥಗಳನ್ನು ಸೂಚಿಸುತ್ತೇವೆ. ಇವುಗಳನ್ನು ನಿಯಮಿತವಾಗಿ ಸೇವಿಸಿದರೆ ನಿಮ್ಮ ಮುಟ್ಟಿನ ಎಲ್ಲಾ ಬಗೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇವುಗಳ ಸೇವನೆ ಹೊರೆತಾಗಿಯೂ ನಿಮ್ಮ ಪೀರೇಡ್ಸ್‌ನಲ್ಲಿ ತೊಂದರೆ ಉಂಟಾಗುತ್ತಿದ್ದರೆ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ ಸುಕ್ತ ಚಿಕಿತ್ಸೆ ಪಡೆದುಕೊಳ್ಳಿ.
ಅರಿಶಿನ: ಅರಿಶಿನ ಸರ್ವ ರೋಗಕ್ಕೂ ಮದ್ದು ಎಂದರೆ ತಪ್ಪಿಲ್ಲ. ಫಿರೇಡ್ಸ್‌ಗೂ ಅರಿಶಿನ ಉತ್ತಮ ಮನೆಮದ್ದಾಗಿದೆ. ರಾತ್ರಿ ಹಾಲಿನೊಂದಿಗೆ ಚಿಟಿಕೆ ಅರಿಶಿನ ಬೆರಸಿ ನಿತ್ಯವೂ ಸೇವಿಸಿದರೆ ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗು ಅರಿಶಿನ ಮಿಶ್ರಿತ ಹಾಲು ದೇಹಕ್ಕೆ ರೋಗ ನಿರೋಧಕ ಶಕ್ತಿ ನೀಡುತ್ತದೆ.
ಬೀಟ್ರೂಟ್: ಇದರಲ್ಲಿ ಕಬ್ಬಿನಾಂಶ ಅತ್ಯಂತ ಅಧೀಕ ಪ್ರಮಾಣದಲ್ಲಿ ಇದೆ. ಮುಟ್ಟಿನ ಸಮಯದಲ್ಲಿ ಕಿರಿಕಿರಿ, ಮಾನಸಿಕ ಒತ್ತಡ ಹೀಗೆ ತೊಂದರೆಗಳಾದರೆ ಇದರ ಜ್ಯೂಸ್ ಸೇವಿಸಿದರೆ ಆ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಫೋಲಿಕ್ ಆಸಿಡ್, ಐರನ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇದೆ. ಹಾಗಾಗಿ ಮುಟ್ಟಿನ ಸಮಯದಲ್ಲಿ ಬೀಟ್ರೂಟ್ ಸಲಾಡ್ ಅಥವಾ ಜ್ಯೂಸ್ ಸೇವಿಸಿದರೆ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಇದು ಒದಗಿಸುತ್ತದೆ.
ದಾಳಿಂಬೆ ಜ್ಯೂಸ್: ತುಂಬಾ ದಿನಗಳಿಂದ ಮುಟ್ಟು ಆಗಿಲ್ಲವೆಂದರೆ ಚಿಂತೆ ಬೇಡ. ಸತತವಾಗಿ ದಿನಕ್ಕೆ ಎರಡರಿಂದ ಮೂರು ಬಾರಿ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಸೇವಿಸುತ್ತಾ ಬನ್ನಿ ಹೀಗೆ ಮಾಡಿ ಹದಿನೈದು ದಿನಗಳ ಒಳಗೆ ನಿಮಗೆ ಮುಟ್ಟು ಆಗುತ್ತದೆ. ಇದರ ನಡುವೆ ಆಗಾಗ ಕಬ್ಬಿನ ಜ್ಯೂಸ್ ಕೂಡ ಸೇವಿಸಿದರೆ ಉತ್ತಮ. ಆದರೆ ಮುಂದಿನ ಮುಟ್ಟು ಹೀಗೆ ತಡವಾಗಿ ಆಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ. ಜೊತೆಗೆ ದಾಳಿಂಬೆ ಜ್ಯೂಸ್ ಸೇವಿಸುವುದನ್ನು ಮುಂದುವರೆಸಿ.
ದನಿಯಾ ಹಾಗು ಜೀರಿಗೆ ನೀರು: ಇವೆರಡನ್ನೂ ಸಮಪ್ರಮಾಣದಲ್ಲಿ ನೀರಿನಲ್ಲಿ ಸೇರಿಸಿ ಚೆನ್ನಾಗಿ ಕುದಿಸಿ ಆರಿದ ನಂತರ ಸೋಸಿ ಸೇವಿಸಿ. ಹೀಗೆ ಮಾಡಿದರೆ ಅನಿಯಮಿತವಾಗಿ ಆಗುವ ಮುಟ್ಟು ಕಾಲ ಕಾಲಕ್ಕೆ ಸರಿಯಾಗಿ ಆಗುತ್ತದೆ. ನೆನಪಿರಲಿ ಇದರ ಸೇವನೆ ನಿಯಮಿತವಾಗಿರಬೇಕು.
ಶುಂಠಿ ಹಾಗು ಲವಂಗ ಟೀ: ಇವೆರಡನ್ನೂ ನೀರಿನಲ್ಲಿ ಕುದಿಸಿ ಸೋಸಿ ಕುಡಿಯಿರಿ. ಶುಂಠಿ ಹಾಗು ಲವಂಗ ದೇಹದಲ್ಲಿ ಊಷ್ಣ ಹೆಚ್ಚಿಸುತ್ತದೆ. ದೇಹದಲ್ಲಿ ಊಷ್ಣ ಹೆಚ್ಚಾದರೆ ಮುಟ್ಟು ಬೇಗನೇ ಆಗುತ್ತದೆ. ಆದರೆ ಹೆಚ್ಚು ಊಷ್ಣ ಮೈ ಇದ್ದವರು ವೈದ್ಯರ ಸಲಹೆ ಮೇಲೆ ಈ ನೀರನ್ನು ಸೇವಿಸಿ.
ಪಪ್ಪಾಯ: ಪಪ್ಪಾಯ ಹಣ್ಣು ಸೇವನೆ ದೇಹಕ್ಕೆ ಹೆಚ್ಚು ಊಷ್ಣವನ್ನು ಒದಗಿಸುತ್ತದೆ. ಪ್ರತಿದಿನ ನಿಯಮಿತವಾಗಿ ಈ ಹಣ್ಣು ಸೇವಿಸಿದರೆ ಪೀರೇಡ್ಸ್ ಸೈಕಲ್ ಸರಿಯಾಗಿ ಆಗುತ್ತದೆ. ಹಾಗು ಈ ಹಣ್ಣಿನ ಸೇವನೆ ತೂಕ ಇಳಿಸಲು ಹಾಗು ಚರ್ಮದ ಕಾಂತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.