ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಮತೋಲನ ಆರೋಗ್ಯಕ್ಕೆ ದೇಹಕ್ಕೆ ಕಬ್ಬಿನಾಂಶ ತುಂಬಾ ಮುಖ್ಯ. ಆದರೆ ಕೆಲ ಕಾರಣಗಳಿಂದ ದೇಹದಲ್ಲಿ ಕಬ್ಬಿನಾಂಶ ಕೊರತೆ ಉಂಟಾಗಿಬಿಡುತ್ತದೆ. ಅಂತ ಸಂದರ್ಭದಲ್ಲಿ ಈ ಕೆಳಗಿನ ಆಹಾರಗಳನ್ನು ಸೇವನೆ ಹೆಚ್ಚು ಮಾಡಬೇಕು.
ಇನ್ನು ದೇಹಕ್ಕೆ ಕಬ್ಬಿನಾಂಶ ಕೊರತೆ ಉಂಟಾದರೆ ಅನಿಮಿಯಾ, ರಕ್ತಹೀನತೆ ಇಂತ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಇವುಗಳಿಂದ ಪಾರಾಗಲು ಈ ಆಹಾರಗಳನ್ನು ಸೇವಿಸಲು ಮರೆಯಬೇಡಿ.
ಅವಲಕ್ಕಿ: ದೇಹಕ್ಕೆ ಕಬ್ಬಿನಾಂಶ ಒದಗಿಸುವಲ್ಲಿ ಅವಲಕ್ಕಿ ತುಂಬಾ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಇದರಲ್ಲಿ ಅತ್ಯಂತ ಹೇರಳ ಪ್ರಮಾಣದ ಕಬ್ಬಿನಾಂಶ ಇದೆ. ಅವಲಕ್ಕಿಯನ್ನು ನೆನಸಿಟ್ಟು ಒಗ್ಗರಣೆ ಹಾಕಿ ತಿನ್ನಬಹುದು ಅಥವಾ ಮೊಸರು ಅವಲಕ್ಕಿ ಸಹ ಮಾಡಿ ತಿನ್ನಬಹುದು. ಹೀಗೆ ನೆನಸಿಟ್ಟ ಅವಲಕ್ಕಿ ಸೇವನೆ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನಾಂಶ ನೀಡುತ್ತದೆ. ಅವಲಕ್ಕಿ ಜೊತೆ ನಿಂಬೆ ರಸ ಸೇವಿಸಿದರೆ ಇನ್ನೂ ಉತ್ತಮ.
ಗೋಡಂಬಿ: ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಗೋಡಂಬಿಯನ್ನು ತಪ್ಪದೇ ತಿನ್ನಿ. ಆಗಾಗ ಸಿಹಿ ಪದಾರ್ಥಗಳನ್ನು ಮಾಡಿದಾಗ ಗೋಡಂಬಿ ಬೀಜಗಳನ್ನು ಸೇರಿಸಿ ತಿನ್ನಿ .ದೇಹಕ್ಕೆ ಕಬ್ಬಿನಾಂಶ ಒದಗಿದಂತಾಗುತ್ತದೆ. ಅಧ್ಯಯನ ಪ್ರಕಾರ ಪ್ರತಿ ಮೂವತ್ತು ಗ್ರಾಂ ಗೋಡಂಬಿಯಲ್ಲಿ ಸುಮಾರು ಎರಡು ಮಿಲಿ ಕಬ್ಬಿನಾಂಶ ಇದೆ ಎಂದು ಹೇಳಲಾಗುತ್ತದೆ. ನಿಯಮಿತವಾಗಿ ಗೋಡಂಬಿ ಸೇವಿಸಿ ಅನಿಮಿಯಾದಂತಹ ರೋಗದಿಂದ ದೂರವಿರಿ.
ಖರ್ಜೂರ: ಉತ್ತಮ ಆರೋಗ್ಯಕ್ಕೆ ಖರ್ಜೂರ ಸೇವನೆ ಅತ್ಯಗತ್ಯ. ರಕ್ತ ಹೀನತೆ ಇದ್ದರೆ ಆಯಾಸ ಸುಸ್ತು. ದೇಹಕ್ಕೆ ನಿತ್ರಾಣ ಹೀಗೆಲ್ಲಾ ತೊಂದರೆ ಆಗುತ್ತದೆ. ಇಂತಹ ಸಮಸ್ಯೆ ಇದ್ದವರು ಪ್ರತಿನಿತ್ಯ ಎರಡು ಖರ್ಜೂರ ಸೇವಿಸಿ. ಇದರಿಂದ ದೇಹಕ್ಕೆ ಕಬ್ಬಿನಾಂಶ ಪೂರೈಕೆಯಾಗಿ ರಕ್ತ ಹೀನತೆ ಸಮಸ್ಯೆ ಕಡಿಮೆಯಾಗುತ್ತದೆ. ಖರ್ಜೂರ ಮುಖ್ಯವಾಗಿ ಕೆಂಪುರಕ್ತ ಕಣಗಳ ಸಂತತಿಯನ್ನು ಹೆಚ್ಚು ಮಾಡುತ್ತದೆ ಹಾಗು ದೇಹಕ್ಕೆ ಸಮ ಪ್ರಮಾಣದಲ್ಲಿ ಆಮ್ಲಜನಕ ಪ್ರಮಾಣವನ್ನು ಪೂರೈಸುತ್ತದೆ.
ಆಲೂಗಡ್ಡೆ: ಇದನ್ನು ವಾತ ಎಂದು ಹೇಳಿ ಎಷ್ಟೋ ಜನ ಸೇವಿಸುವುದೇ ಇಲ್ಲ. ಆದರೆ ದೇಹಕ್ಕೆ ಕಬ್ಬಿನಾಂಶ ಒದಗಿಸುವಲ್ಲಿ ಆಲೂಗಡ್ಡೆ ಸಹ ಉತ್ತಮ ತರಕಾರಿ. ಇದನ್ನು ನಿಯಮಿತವಾಗಿ ಊಟದೊಂದಿಗೆ ಸೇವಿಸಿದರೆ ರಕ್ತ ಹೀನತೆ ಸಮಸ್ಯೆ ಕಾಡುವುದಿಲ್ಲ. ಸಂಶೋಧನೆ ಪ್ರಕಾರ ಈ ಆಲೂಗಡ್ಡೆ ದೇಹಕ್ಕೆ ಕಬ್ಬಿನಾಂಶ ನೀಡಿ ಹೃದಯವನ್ನೂ ಆರೋಗ್ಯವಾಗಿರಿಸುತ್ತದೆ.
ಬೇಬಿಕಾರ್ನ್: ಇದರಲ್ಲಿ ಕಬ್ಬಿನಾಂಶ ಪ್ರಮಾಣ ಸಮೃದ್ಧವಾಗಿದೆ. ಈ ಮುಂಚೆ ರಕ್ತ ಹೀನತೆ ಸಮಸ್ಯೆ ಇದ್ದವರು ಪ್ರತಿನಿತ್ಯ ಬೇಬಿಕಾರ್ನ್‌ನ ಅಡುಗೆಯಲ್ಲಿ ಬಳಸಿ ಊಟ ಮಾಡಬಹುದು. ಇದನ್ನು ಸೇವಿಸಿದರೆ ರಕ್ತ ಸಂಬಂಧಿಸಿದ ಯಾವುದೇ ಕಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.
ಸಾವಯವ ಬೆಲ್ಲ: ಸಾವಯವ ಬೆಲ್ಲದಲ್ಲಿ ಕಬ್ಬಿನಾಂಶ ಹೇರಳವಾಗಿದ್ದು, ಇದು ದೇಹದಲ್ಲಿ ರಕ್ತದ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತದೆ. ಹಾಗಾಗಿ ಹಾಲು ಅಥವಾ ಟೀ ಕಾಫಿಗೆ ಸಾವಯವ ಬೆಲ್ಲ ಸೇರಿಸಿ ಕುಡಿಯಿರಿ.