ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸವನ್ನು ಹಾಕಿರುವುದು ಕಂಡುಬರುತ್ತದೆ. ಹಾಸನ ಮಹಾನಗರಪಾಲಿಕೆಯವರು ಪ್ರತಿನಿತ್ಯ ಬೀದಿಗಳನ್ನು ಸ್ವಚ್ಚತೆ ಮಾಡಿದರೂ ಕಸದ ಗುಡ್ಡೆಗಳು ಕಂಡುಬರುತ್ತಿದೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಆಟೋ ಟಿಪ್ಪರ್ ಮತ್ತು ಟ್ರಾಕ್ಟರ್ ಗಳ ಮೂಲಕ ಮನೆ-ಮನೆ, ಬೀದಿ-ಬದಿಗಳ ಕಸ ಸಂಗ್ರಹಣೆ ಮಾಡಲಾಗುತ್ತಿದೆ.
ಆದರೂ ಹಲವು ಬಡಾವಣೆಗಳ ಬೀದಿಗಳಲ್ಲಿ ಮತ್ತು ನಗರಗಳ ಹೊರವಲಯಗಳಲ್ಲಿ ಯಥೇಚ್ಛವಾಗಿ ಕಸವು ಕಂಡುಬಂದಿರುತ್ತದೆ. ಇದರಿಂದಾಗಿ ನಗರಗಳಲ್ಲಿ ನಾಯಿಗಳ ಹಾವಳಿಯು ಜಾಸ್ತಿಯಾಗಿರುತ್ತದೆ. ಮಾಂಸ ಮಾರಾಟ ಅಂಗಡಿ ಮತ್ತು ಹೋಟೆಲ್ಗಳ ತ್ಯಾಜ್ಯವನ್ನು ಹೊರವಲಯದಲ್ಲಿ ಹಾಕುತ್ತಿರುವುದರಿಂದ ನಾಯಿಗಳು ಜಾಸ್ತಿಯಾಗಿದ್ದು, ನಾಗರೀಕರಿಗೆ ತೊಂದರೆಯಾಗಿರುತ್ತದೆ.
ಮಹಾನಗರಪಾಲಿಕೆಯ ಕಸ ಸಂಗ್ರಹಿಸುವ ವಾಹನವು ಬೆಳಗಿನ ಸಮಯದಲ್ಲಿ ಪ್ರತಿ ಬೀದಿಯಲ್ಲಿ ಕಸ ಸಂಗ್ರಹಣೆ ಮಾಡುತ್ತಿದ್ದು, ತಮ್ಮ ಮನೆಯ/ಅಂಗಡಿ/ಹೋಟೆಲ್ಗಳ ಕಸವನ್ನು ಪ್ರತಿನಿತ್ಯ ವಾಹನಕ್ಕೆ ಹಾಕುವುದು ಕಡ್ಡಾಯವಾಗಿರುತ್ತದೆ. ತಾವು ತಮ್ಮ ಮನೆಯ/ಅಂಗಡಿಯ / ಹೋಟೆಲ್ ಗಳ ದಿನ ನಿತ್ಯದ ಕಸವನ್ನು ಸಂಗ್ರಹಿಸಿ, ಮಾರನೆ ದಿನ ಕಸ ಸಂಗ್ರಹಣೆ ವಾಹನದಲ್ಲಿ ಹಾಕುವುದು. ಕಸವು ತಮ್ಮ ಮನಯ/ಅಂಗಡಿಯ/ಹೋಟೆಲ್ಗಳ ಮುಂದೆ ಕಂಡುಬಂದಲ್ಲಿ ಸರ್ಕಾರದ ಆದೇಶದನ್ವಯ ಕ್ರಮಕೈಗೊಳ್ಳಲು ಸೂಚಿಸಿರುವಂತೆ ಈ ಕೆಳಕಂಡಂತೆ ದಂಡವನ್ನು ಸಹ ಹಾಕಲಾಗುವುದು.
ಪಾಲನೆ ಮಾಡದಿರುವಿಕೆ ಮತ್ತು ತ್ಯಾಜ್ಯೋತ್ಪಾದಕರ ವಿಧಿ : ನಿಷೇಧಿತ ಪ್ಲಾಸ್ಟಿಕ್ ಸಾಮಾಗ್ರಿಗಳ ಮಾರಾಟ ಹಾಗೂ ನಿಷೇಧಿತ ಪ್ಲಾಸ್ಟಿಕ್ ಸಾಮಾಗ್ರಿಗಳ ಅಕ್ರಮ ದಾಸ್ತಾನು ಮೊದಲನೇ ಅಪರಾಧಕ್ಕೆ ದಂಡ 500 ಎರಡನೇ ಅಪರಾಧಕ್ಕೆ ದಂಡ 1,000,If< 1Kg ಮೊದಲನೇ ಅಪರಾಧಕ್ಕೆ ದಂಡ 500,ಎರಡನೇ ಅಪರಾಧಕ್ಕೆ ದಂಡ 1,000 ,If > 1upto 10kg ಮೊದಲನೇ ಅಪರಾಧಕ್ಕೆ ದಂಡ 2,000, ಎರಡನೇ ಅಪರಾಧಕ್ಕೆ ದಂಡ 5,000, If> 10 upto 50kg ಮೊದಲನೇ ಅಪರಾಧಕ್ಕೆ ದಂಡ 5,000,ಎರಡನೇ ಅಪರಾಧಕ್ಕೆ ದಂಡ 10,000,
If> 50 upto 100kg ಮೊದಲನೇ ಅಪರಾಧಕ್ಕೆ ದಂಡ 10,000. ಎರಡನೇ ಅಪರಾಧಕ್ಕೆ ದಂಡ 20,000,If> 100kg ಮೊದಲನೇ ಅಪರಾಧಕ್ಕೆ ದಂಡ 40,000 ಎರಡನೇ ಅಪರಾಧಕ್ಕೆ ದಂಡ 50,000 ಮೂರನೇ ಅಪರಾಧಕ್ಕೆ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸುವುದು ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳುವುದು.
ನಿಷೇದಿತ ಪ್ಲಾಸ್ಟಿಕ್ ಸಾಮಾಗ್ರಿಗಳ ಅಕ್ರಮ ಬಳಕೆ ಮೊದಲನೇ ಅಪರಾಧಕ್ಕೆ ದಂಡ 20 ಎರಡನೇ ಅಪರಾಧಕ್ಕೆ ದಂಡ 50 ಮೂರನೇ ಅಪರಾಧಕ್ಕೆ 75 ದಂಡ ವಿಧಿಸಲಾಗುವದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.








