Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹಾರಾಷ್ಟ್ರದ ಕನ್ನಡ ಶಿಕ್ಷಕರಿಗೆ ನೆರವಾಗಲು ಕರ್ನಾಟಕ ಮುಖ್ಯ ಕಾರ್ಯದರ್ಶಿಗಳ ಮನವಿ: ಕನ್ನಡದಲ್ಲೂ ‘ಟಿಇಟಿ’ ನಡೆಸಲು ಒತ್ತಾಯ

07/04/2026 8:42 PM

ವಿಧಾನಸಭೆ ಕೇವಲ ಟ್ರೈಲರ್ ಅಷ್ಟೇ, ಸಂಸತ್ ಭವನವೇ ಅಸಲಿ ಟಾರ್ಗೆಟ್!: ದೆಹಲಿ ಭದ್ರತಾ ಲೋಪ ಪ್ರಕರಣದಲ್ಲಿ ಬಯಲಾಯ್ತು ಆರೋಪಿಯ ಭೀಕರ ಸ್ಕೆಚ್!

07/04/2026 8:40 PM

​ಯುಎಇಯ ಶಾರ್ಜಾ ಮೇಲೆ ಇರಾನ್ ಕ್ಷಿಪಣಿ ದಾಳಿ: ಟೆಲಿಕಾಂ ಕೇಂದ್ರಕ್ಕೆ ಹಾನಿ, ಇಬ್ಬರು ಪಾಕಿಸ್ತಾನಿ ಪ್ರಜೆಗಳಿಗೆ ಗಾಯ!

07/04/2026 8:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SC, STಗೆ ಮಂಜೂರಾದ ಜಮೀನಿನ ಮೊದಲ ಮಾರಾಟ ರದ್ದಾದ್ರೆ ನಂತರದ ಎಲ್ಲಾ ವ್ಯವಹಾರಗಳು ಅಸಿಂಧು; ಹೈಕೋರ್ಟ್
KARNATAKA

SC, STಗೆ ಮಂಜೂರಾದ ಜಮೀನಿನ ಮೊದಲ ಮಾರಾಟ ರದ್ದಾದ್ರೆ ನಂತರದ ಎಲ್ಲಾ ವ್ಯವಹಾರಗಳು ಅಸಿಂಧು; ಹೈಕೋರ್ಟ್

By kannadanewsnow0917/03/2026 5:54 AM

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (PTCL) ಕಾಯ್ದೆಯಡಿ ಮಂಜೂರಾದ ಜಮೀನಿನ ಮೊದಲ ಮಾರಾಟ ಪ್ರಕ್ರಿಯೆ ಕಾನೂನುಬಾಹಿರ ಎಂದು ಘೋಷಣೆಯಾದರೆ, ಅದರ ನಂತರ ನಡೆದ ಎಲ್ಲಾ ಸುತ್ತಿನ ಮಾರಾಟ ಪ್ರಕ್ರಿಯೆಗಳೂ ತಾನಾಗಿಯೇ ರದ್ದಾಗಲಿವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿವೆ.

“ತಮ್ಮಲ್ಲಿ ಇಲ್ಲದ್ದನ್ನು ಬೇರೆಯವರಿಗೆ ಕೊಡಲಾಗುವುದಿಲ್ಲ” ಎಂಬ ಪ್ರಸಿದ್ಧ ಕಾನೂನು ತತ್ವವನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠವು, ಹಲವು ದಶಕಗಳ ಕಾಲ ನಡೆದ ಭೂ ವಿವಾದದ ಅರ್ಜಿಯನ್ನು ವಜಾಗೊಳಿಸಿ ಈ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ:

  • ಬೆಂಗಳೂರು ಪೂರ್ವ ತಾಲೂಕಿನ ಖಾಜಿ ಸೋನ್ನೆನಹಳ್ಳಿ ಗ್ರಾಮದಲ್ಲಿ 1947ರಲ್ಲಿ ಟಿ. ಪೂಜಪ್ಪ ಎಂಬುವರಿಗೆ ಸರ್ಕಾರ 3 ಎಕರೆ 26 ಗುಂಟೆ ಜಮೀನು ಮಂಜೂರು ಮಾಡಿತ್ತು.

  • ಪೂಜಪ್ಪ ಅವರ ನಿಧನದ ನಂತರ 1956ರಲ್ಲಿ ಅವರ ಕುಟುಂಬಸ್ಥರು ಈ ಜಮೀನನ್ನು ಬಸಮ್ಮ ಎಂಬುವರಿಗೆ ಮಾರಾಟ ಮಾಡಿದ್ದರು.

  • ನಂತರ ಈ ಜಮೀನು ಹಲವು ಕೈ ಬದಲಾಗಿ, ಅಂತಿಮವಾಗಿ 1988ರಲ್ಲಿ ಎಸ್.ಕೆ. ಜಯರಾಮ್ ಎಂಬುವರು ಪದ್ಮಾವತಿ ಎಂಬುವವರಿಂದ ಖರೀದಿಸಿದ್ದರು.

ನ್ಯಾಯಾಲಯದ ಪ್ರಮುಖ ಅವಲೋಕನಗಳು:

  1. ಮೂಲ ಮಾರಾಟವೇ ಅಮಾನ್ಯ: 1956ರಲ್ಲಿ ಬಸಮ್ಮ ಅವರಿಗೆ ಮಾಡಿದ್ದ ಮೊದಲ ಮಾರಾಟವೇ ಸರ್ಕಾರದ ಷರತ್ತುಗಳ ಉಲ್ಲಂಘನೆಯಾಗಿರುವುದರಿಂದ ಅದು ಅಸಿಂಧು. ಮೂಲ ಮಾರಾಟಗಾರನಿಗೇ ಹಕ್ಕು ಇಲ್ಲದಿದ್ದಾಗ, ಅವರಿಂದ ಜಮೀನು ಕೊಂಡವರು ಮುಂದೆ ಅದನ್ನು ಯಾರಿಗೂ ಕಾನೂನುಬದ್ಧವಾಗಿ ವರ್ಗಾಯಿಸಲು ಸಾಧ್ಯವಿಲ್ಲ.

  2. ಸರಣಿ ಮಾರಾಟಗಳಿಗೆ ಬೆಲೆಯಿಲ್ಲ: ಮೊದಲ ವ್ಯವಹಾರವೇ ‘ಶೂನ್ಯ’ (Void) ಎಂದಾದ ಮೇಲೆ, ನಂತರ ನಡೆದ ಎಲ್ಲಾ ಮಾರಾಟಗಳು ಕಾನೂನಿನ ದೃಷ್ಟಿಯಲ್ಲಿ ಅಸ್ತಿತ್ವದಲ್ಲಿರುವುದಿಲ್ಲ. ಆದ್ದರಿಂದ 1988ರಲ್ಲಿ ಜಯರಾಮ್ ಅವರು ಮಾಡಿಕೊಂಡ ಖರೀದಿಯೂ ರದ್ದಾಗುತ್ತದೆ.

  3. ಪಿಟಿಸಿಎಲ್ ಕಾಯ್ದೆ ಸೆಕ್ಷನ್ 4(1): ಈ ಕಾಯ್ದೆಯ ಪ್ರಕಾರ ಮಂಜೂರಾದ ಜಮೀನನ್ನು ಷರತ್ತು ಉಲ್ಲಂಘಿಸಿ ಮಾರಾಟ ಮಾಡಿದರೆ, ಅದು ಸ್ವಯಂ ಅಮಾನ್ಯವಾಗುತ್ತದೆ. ಆ ವ್ಯವಹಾರದಿಂದ ಯಾವುದೇ ಕಾನೂನುಬದ್ಧ ಮಾಲೀಕತ್ವ ಸೃಷ್ಟಿಯಾಗುವುದಿಲ್ಲ.

ತೀರ್ಪಿನ ಪರಿಣಾಮ:

ಜಮೀನು ಮಾರಾಟವನ್ನು ರದ್ದುಪಡಿಸಿ ಉಪ ವಿಭಾಗಾಧಿಕಾರಿಗಳು ಈ ಹಿಂದೆ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇದರೊಂದಿಗೆ, 1947ರಲ್ಲಿ ಜಮೀನು ಮಂಜೂರು ಪಡೆದಿದ್ದ ಪೂಜಪ್ಪ ಅವರ ಕುಟುಂಬಕ್ಕೆ ಜಮೀನು ಮರಳುವ ಹಾದಿ ಸುಗಮವಾಗಿದೆ. ಅರ್ಜಿದಾರ ಜಯರಾಮ್ ಅವರ ವಾದವನ್ನು ತಳ್ಳಿಹಾಕಿರುವ ಪೀಠವು, ಉಪ ವಿಭಾಗಾಧಿಕಾರಿಗಳ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ತಿಳಿಸಿದೆ.

ಈ ತೀರ್ಪು ಪಿಟಿಸಿಎಲ್ ಜಮೀನುಗಳನ್ನು ಖರೀದಿಸಿ ಹಕ್ಕು ಸಾಧಿಸಲು ಹವಣಿಸುವವರಿಗೆ ದೊಡ್ಡ ಎಚ್ಚರಿಕೆಯ ಸಂದೇಶ ನೀಡಿದೆ.

Share. Facebook Twitter LinkedIn WhatsApp Email

Related Posts

ಮಹಾರಾಷ್ಟ್ರದ ಕನ್ನಡ ಶಿಕ್ಷಕರಿಗೆ ನೆರವಾಗಲು ಕರ್ನಾಟಕ ಮುಖ್ಯ ಕಾರ್ಯದರ್ಶಿಗಳ ಮನವಿ: ಕನ್ನಡದಲ್ಲೂ ‘ಟಿಇಟಿ’ ನಡೆಸಲು ಒತ್ತಾಯ

07/04/2026 8:42 PM2 Mins Read

ಕೆಎಸ್‌ಆರ್‌ಟಿಸಿ ನೌಕರರಿಗೆ ಬಿಗ್ ರಿಲೀಫ್: ಮುಷ್ಕರದ ಅವಧಿಯ ಶಿಸ್ತು ಪ್ರಕರಣಗಳ ನಿಯಮ ಬದಲು, ಶಿಕ್ಷೆ ಪ್ರಮಾಣ ಇಳಿಕೆ

07/04/2026 8:30 PM1 Min Read

ಕಲಬುರ್ಗಿಯಲ್ಲಿ ಭೀಕರ ರಸ್ತೆ ಅಪಘಾತ; ಸಿಮೆಂಟ್ ಮಿಕ್ಸರ್ ವಾಹನ ಡಿಕ್ಕಿಯಾಗಿ ತಂದೆ-ಮಗಳು ಸ್ಥಳದಲ್ಲೇ ಸಾವು

07/04/2026 8:21 PM1 Min Read
Recent News

ಮಹಾರಾಷ್ಟ್ರದ ಕನ್ನಡ ಶಿಕ್ಷಕರಿಗೆ ನೆರವಾಗಲು ಕರ್ನಾಟಕ ಮುಖ್ಯ ಕಾರ್ಯದರ್ಶಿಗಳ ಮನವಿ: ಕನ್ನಡದಲ್ಲೂ ‘ಟಿಇಟಿ’ ನಡೆಸಲು ಒತ್ತಾಯ

07/04/2026 8:42 PM

ವಿಧಾನಸಭೆ ಕೇವಲ ಟ್ರೈಲರ್ ಅಷ್ಟೇ, ಸಂಸತ್ ಭವನವೇ ಅಸಲಿ ಟಾರ್ಗೆಟ್!: ದೆಹಲಿ ಭದ್ರತಾ ಲೋಪ ಪ್ರಕರಣದಲ್ಲಿ ಬಯಲಾಯ್ತು ಆರೋಪಿಯ ಭೀಕರ ಸ್ಕೆಚ್!

07/04/2026 8:40 PM

​ಯುಎಇಯ ಶಾರ್ಜಾ ಮೇಲೆ ಇರಾನ್ ಕ್ಷಿಪಣಿ ದಾಳಿ: ಟೆಲಿಕಾಂ ಕೇಂದ್ರಕ್ಕೆ ಹಾನಿ, ಇಬ್ಬರು ಪಾಕಿಸ್ತಾನಿ ಪ್ರಜೆಗಳಿಗೆ ಗಾಯ!

07/04/2026 8:30 PM

ಕೆಎಸ್‌ಆರ್‌ಟಿಸಿ ನೌಕರರಿಗೆ ಬಿಗ್ ರಿಲೀಫ್: ಮುಷ್ಕರದ ಅವಧಿಯ ಶಿಸ್ತು ಪ್ರಕರಣಗಳ ನಿಯಮ ಬದಲು, ಶಿಕ್ಷೆ ಪ್ರಮಾಣ ಇಳಿಕೆ

07/04/2026 8:30 PM
State News
KARNATAKA

ಮಹಾರಾಷ್ಟ್ರದ ಕನ್ನಡ ಶಿಕ್ಷಕರಿಗೆ ನೆರವಾಗಲು ಕರ್ನಾಟಕ ಮುಖ್ಯ ಕಾರ್ಯದರ್ಶಿಗಳ ಮನವಿ: ಕನ್ನಡದಲ್ಲೂ ‘ಟಿಇಟಿ’ ನಡೆಸಲು ಒತ್ತಾಯ

By kannadanewsnow0907/04/2026 8:42 PM KARNATAKA 2 Mins Read

ಬೆಂಗಳೂರು: ಮಹಾರಾಷ್ಟ್ರ ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಹಿತರಕ್ಷಣೆಗಾಗಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ…

ಕೆಎಸ್‌ಆರ್‌ಟಿಸಿ ನೌಕರರಿಗೆ ಬಿಗ್ ರಿಲೀಫ್: ಮುಷ್ಕರದ ಅವಧಿಯ ಶಿಸ್ತು ಪ್ರಕರಣಗಳ ನಿಯಮ ಬದಲು, ಶಿಕ್ಷೆ ಪ್ರಮಾಣ ಇಳಿಕೆ

07/04/2026 8:30 PM

ಕಲಬುರ್ಗಿಯಲ್ಲಿ ಭೀಕರ ರಸ್ತೆ ಅಪಘಾತ; ಸಿಮೆಂಟ್ ಮಿಕ್ಸರ್ ವಾಹನ ಡಿಕ್ಕಿಯಾಗಿ ತಂದೆ-ಮಗಳು ಸ್ಥಳದಲ್ಲೇ ಸಾವು

07/04/2026 8:21 PM

CRIME NEWS: ಬೆಂಗಳೂರಲ್ಲಿ ರಾಪಿಡೋ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಆರೋಪಿಯ ಬಂಧನ!

07/04/2026 7:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.