ಬೆಂಗಳೂರು: ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದ ನಂತ್ರ ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೂ ವಹಿಸಿ ಆದೇಶಿಸಿದೆ. ಈ ಪ್ರಕರಣದ ಬಗ್ಗೆ  ಹೆಚ್.ಡಿ ರೇವಣ್ಣ ಏನು ಹೇಳಿದ್ರು ಅಂತ ಮುಂದೆ ಓದಿ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಹೆಚ್.ಡಿ ರೇವಣ್ಣ ಅವರು ನಮ್ಮ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಸೂರಜ್ ರೇವಣ್ಣ ಅವರನ್ನು ಬಂಧಿಸಿದ ನಂತ್ರ ಹಾಸನದಲ್ಲಿ ಮೆಡಿಕಲ್ ಟೆಸ್ಟ್ ಮಾಡದೇ ಯಾಕೆ ಬೆಂಗಳೂರಿಗೆ ಕರೆತಂದ್ರ.? ಇದೆಲ್ಲ ನಮ್ಮನ್ನು ಹೆದರಿಸೋಕೆ ಮಾಡ್ತಿದ್ದಾರೆ ಅಂತ ಕಿಡಿಕಾರಿದರು.

ಸೂರಜ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗೋ ಮೊದಲೇ ಅವರೇ ಸಂತ್ರಸ್ತ ವ್ಯಕ್ತಿಯ ವಿರುದ್ಧ ದೂರು ಕೊಟ್ಟಿದ್ದಾರೆ. ತಪ್ಪು ಮಾಡಿದ್ರೆ ಸೂರಜ್ ರೇವಣ್ಣ ಯಾಕೆ ದೂರು ಕೊಡೋಕೆ ಹೋಗ್ತಾ ಇದ್ದರು? ನಾನು ಈಗ ಏನೂ ಹೇಳಲ್ಲ. ಟೈಂ ಬಂದಾಗ ಹೇಳ್ತೀನಿ. ನಾವೇನು ತಪ್ಪು ಮಾಡಿ ಓಡಿ ಹೋಗಿಲ್ಲ ಎಂಬುದಾಗಿ ಗುಡುಗಿದರು.

BIG NEWS : ಕೇಂದ್ರ ಸಚಿವ ʻHDKʼಗೆ ಬಿಗ್‌ ಶಾಕ್‌ : ʻದೇವದಾರಿ ಮೈನಿಂಗ್‌ʼ ಗೆ ತಡೆ ನೀಡಿ ರಾಜ್ಯ ಸರ್ಕಾರ ಆದೇಶ

BREAKING : ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ : ಪೊಲೀಸರಿಂದ ಸೂರಜ್‌ ರೇವಣ್ಣ ಮೊಬೈಲ್‌ ಸೀಜ್!

Share.
Exit mobile version