ಮೈಸೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ ನೀಡಬಾರದು. ಅವರು ಜೈಲಿಗೆ ಹೋದರೂ ಅಲ್ಲಿಂದಲೇ ಕೆಲಸ ಮಾಡಬೇಕು. ಒಂದು ವೇಳೆ ಜೈಲಿಗೆ ಹೋಗಿದ್ದೇ ಆದಲ್ಲಿ ನಾನು ಸೇರಿದಂತೆ 1 ಕೋಟಿ ಜನರು ಜೈಲಿಗೆ ಹೋಗ್ತೀವಿ ಎಂಬುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿದ್ದರಾಮಯ್ಯ ರಾಜೀನಾಮೆಯನ್ನು ಯಾವುದೇ ಸಂದರ್ಭದಲ್ಲೂ ನೀಡಬಾರದು. ಏನಾದರೂ ಜೈಲಿಗೆ ಹೋದ್ರೆ ನಾನು ಸೇರಿದಂತೆ 1 ಕೋಟಿ ಜನರು ಜೈಲಿಗೆ ಹೋಗಲು ಸಿದ್ಧರಾಗಿದ್ದೇವೆ ಎಂದರು.
ಸಿಎಂ ಸಿದ್ಧರಾಮಯ್ಯ ಜೈರಿಗೆ ಹೋದರೂ ಅಲ್ಲಿಂದಲೇ ಅಧಿಕಾರ ಮಾಡಲಿ. ಸಿಎಂ ಸಿದ್ಧರಾಮಯ್ಯ ಅವರು ನೂರಾರು ನಾಗರಹಾವುಗಳ ಮಧ್ಯೆ ಇದ್ದಾರೆ. ಹಿತಶತ್ರುಗಳ ಕಾಟ ಇದೆ. ವಿಪಕ್ಷಕ್ಕಿಂತ ಕಾಂಗ್ರೆಸ್ ಪಕ್ಷದವರೇ ಹಿತಶತ್ರುಗಳಾಗಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದವರು ಬಾಯಿ ಮುಚ್ಚಿಕೊಂಡು ಇರಬೇಕು. ವಿರೋಧ ಪಕ್ಷದವರು ಅವರ ಮನೆ ಮೊದಲು ನೋಡಿಕೊಳ್ಳಲಿ. ಸಿಎಂ ಸ್ಥಾನಕ್ಕೆ ಡೆಡ್ ಲೈನ್ ಇಲ್ಲ. ಅದೊಂದು ಜೋಕ್ ಆಗಿದೆ. 5 ವರ್ಷ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂಬುದಾಗಿ ತಿಳಿಸಿದರು.
SHOCKING : ಈ `ಎಣ್ಣೆ’ ಸೇವನೆಯಿಂದ ಮಧುಮೇಹ, ಕ್ಯಾನ್ಸರ್, ಹೃದಯಾಘಾತದ ಅಪಾಯ ಹೆಚ್ಚಳ.!