ಬೆಂಗಳೂರು: ನಗರ, ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ವಿಚಾರವಾಗಿ ಹೈಕೋರ್ಟ್ ಮಹತ್ವದ ಎಚ್ಚರಿಕೆ ನೀಡಿದೆ. ರೋಸ್ಟರ್ ಪ್ರಕಟಿಸದೇ ಇದ್ದರೇ, ಹಾಲಿ ರೋಸ್ಟರ್ ನಂತೆ ಚುನಾವಣೆ ನಡೆಸಲು ಆದೇಶಿಸುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಇಂದು ನಗರ, ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿತು. ಮೀಸಲಾತಿ ಪ್ರಕಟಿಸಲು ಕೊನೆಯ ಅವಕಾಶವನ್ನು ಹೈಕೋರ್ಟ್ ನೀಡಿದೆ.
ಮೀಸಲಾತಿ ಪ್ರಕಟಿಸದಿದ್ದರೇ ಹಾಲಿ ರೋಸ್ಟರ್ ಪ್ರಕಾರ ಚುನಾವಣೆ ನಡೆಸಲು ಸೂಚಿಸುವುದಾಗಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಎಚ್ಚರಿಕೆ ನೀಡಿದೆ. ಈ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್.11ಕ್ಕೆ ಮುಂದೂಡಿದೆ.
ಅದ್ಧೂರಿಯಾಗಿ ನೆರವೇರಿದ ಸಾಗರದ ಸುಭಾಷ್ ನಗರ ಯುವಕರ ಸಂಘದ 47ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ
‘ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆಗೆ ನ್ಯಾಯಾಲಯಗಳು ಅಡ್ಡಿಯಾಗಲು ಸಾಧ್ಯವಿಲ್ಲ’: ಕರ್ನಾಟಕ ಹೈಕೋರ್ಟ್ ಗೆ ಕೇಂದ್ರ ಸರ್ಕಾರ