ಬೆಂಗಳೂರು: ಆಗಸ್ಟ್.4ರಂದು ಬೆಂಗಳೂರಲ್ಲಿ ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ನೀಡಿದರೇ, ಇದನ್ನು ಖಂಡಿಸಿ ಬಿಜೆಪಿಯಿಂದ ಪ್ರತಿಭಟನಾ Rally ನಡೆಸುವುದಾಗಿ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಆಗಸ್ಟ್ 4 ಕ್ಕೆ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ, ಕಾಂಗ್ರೆಸ್ ನೇತಾರರಾದ ರಾಹುಲ್ ಗಾಂಧಿಯವರು ಬೆಂಗಳೂರಿನ ಮಹದೇವಪುರ ಕ್ಷೇತ್ರದಿಂದ ಮುಖ್ಯ ಚುನಾವಣಾ ಅಧಿಕಾರಿಗಳ (ಸಿ ಇ ಓ ) ಕಚೇರಿಯವರೆಗೆ ವಿರುದ್ಧ ಪ್ರತಿಭಟನೆಯನ್ನು ಪಾದಯಾತ್ರೆ ಮೆರವಣಿಗೆ ಯ ಮೂಲಕ ಮಾಡಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಉದ್ಯಾನವನ ( ಫ್ರೀಡಂ ಪಾರ್ಕ್ ) ಹೊರತುಪಡಿಸಿ, ಯಾರಿಗೂ ಬೇರೆಲ್ಲೂ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂಬುದು ಎಲ್ಲರ ಅನುಭವಕ್ಕೆ ಬಂದಿರುವ ಸಂಗತಿ. ರಾಹುಲ್ ಗಾಂಧಿಯವರ ಸುಮಾರು 15-20 ಕಿಲೋ ಮೀಟರ್ ದೂರದ ಈ ಪ್ರತಿಭಟನಾ ಪಾದಯಾತ್ರೆಗೆ ಬೆಂಗಳೂರು ಪೊಲೀಸರು ಅವಕಾಶ ನೀಡುವರೆ? ಆಗ ವಿಪರೀತ ವಾಹನ ಬಾಹುಳ್ಯ ವಿರುವ ಆ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುವುದಿಲ್ಲವೇ? ಎಂದು ಕೇಳಿದ್ದಾರೆ.
ಒಂದೊಮ್ಮೆ ನೀಡಿದಲ್ಲಿ Rahul Gandhi ಮತ್ತು Ruling Party are more equal in the eyes of Law enforcement Authorities ಎಂದಂತಾಗುತ್ತದೆ. ಒಂದೊಮ್ಮೆ ರಾಹುಲ್ ಗಾಂಧಿಯವರ ಈ ಪ್ರತಿಭಟನಾ ಪಾದಯಾತ್ರ ಮೆರವಣಿಗೆಗೆ ಅವಕಾಶ ಕೊಟ್ಟರೆ, ಬಿಜೆಪಿಯೂ ಸಹ ಪ್ರತಿಭಟನಾ ರ್ಯಾಲಿ ಮಾಡಲು ನಿಶ್ಚಯಿಸಿದರೆ ನಮಗೂ ಅವಕಾಶ ಕೊಡಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.
BREAKING: ಅಲಾಸ್ಕಾ, ಹವಾಯಿಯಲ್ಲಿ ಸುನಾಮಿ: 10 ಅಡಿ ಎತ್ತರದ ಅಲೆಗಳ ಅಬ್ಬರ !