ಬೆಂಗಳೂರು: ನಮ್ಮ ಸರ್ಕಾರವು 2028ರಲ್ಲಿ ಬಂದ್ರೆ ಈಗ ಗೃಹ ಲಕ್ಷ್ಮೀ ಯೋಜನೆಯಡಿ ಯಜಮಾನಿ ಮಹಿಳೆಯರಿ ನೀಡಲಾಗುತ್ತಿರುವಂತ 2000 ಹಣವನ್ನು 4000ಕ್ಕೆ ಏರಿಕೆ ಮಾಡುವುದಾಗಿ ಸದನದಲ್ಲೇ ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಘೋಷಿಸಿದರು.
ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಿದಂತ ಅವರು, ನಾನು ಡಿಕೆ ಶಿವಕುಮಾರ್ ಪದಗ್ರಹಣದಂದೇ ಬಡವರಿಗೆ ಹೇಗಾದರೂ ಸಹಾಯ ಮಾಡಬೇಕು ಅಂತ ಹೇಳಿದ್ದೆ. ರಾಜ್ಯದಲ್ಲಿ ಯಜಮಾನಿ ಮಹಿಳೆಯರಿಗೆ ಜಾರಿಗೊಳಿಸಿರುವಂತ ಗೃಹ ಲಕ್ಷ್ಮೀ ಯೋಜನೆಯೂ ವಿಶೇಷವಾದಂತ ಹಣಕಾಸು ಯೋಜನೆಯಾಗಿದೆ ಎಂದರು.
ಇಂದು ಗೃಹ ಲಕ್ಷ್ಮೀ ಯೋಜನೆಯಿಂದಾಗಿ ಲಕ್ಷಾಂತರ ಮಹಿಳೆಯ ನೆಮ್ಮದಿಯ ಜೀವನ ನಡೆಸುವಂತೆ ಆಗಿದೆ. ಈ ಯೋಜನೆ ಆರಂಭದಲ್ಲಿ ಬಹಳಷ್ಟು ಜನರು 2000 ಬರುತ್ತಾ? ಕೊಡುತ್ತಾ ಈ ಸರ್ಕಾರ ಅಂತ ಟೀಕೆ ಮಾಡಿದ್ರು. ಆದರೇ 2000 ಕೊಟ್ಟಿದ್ದು ಕಣ್ಣಾರೆಯೇ ನೋಡುತ್ತಿದ್ದೇವೆ ಎಂದರು.
ಯಾರಾದರೂ ಗೃಹ ಲಕ್ಷ್ಮೀ ಯೋಜನೆಯ ಬಗ್ಗೆ ವಿರೋಧ ಮಾಡಿದರೇ ಅವರಿಗೆ ರಾಜ್ಯದ ಯಜಮಾನಿ ಮಹಿಳೆಯರ ಶಾಪ ತಟ್ಟುತ್ತೆ. ಮುಂದಿನ ಬಾರಿಗೆ ನಮ್ಮ ಕಾಂಗ್ರೆಸ್ ಸರ್ಕಾರವೇ ಬಂದ್ರೇ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದ್ರೆ 2000 ಗೃಹ ಲಕ್ಷ್ಮೀ ಹಣವನ್ನು 4000ಕ್ಕೆ ಏರಿಕೆ ಮಾಡಲು ನಾವು ತಯಾರಿದ್ದೇವೆ ಎಂಬುದಾಗಿ ತಿಳಿಸಿದರು.
ಯಜುವೇಂದ್ರ ಚಾಹಲ್-ಧನಶ್ರೀ ವರ್ಮಾ ವಿಚ್ಛೇದನ: 4.75 ಕೋಟಿ ಜೀವನಾಂಶ ನೀಡಲು ಕ್ರಿಕೆಟಿಗ ಒಪ್ಪಿಗೆ
BIG NEWS: ಪೋಷಕರನ್ನು ಮಕ್ಕಳು ನೋಡಿಕೊಳ್ಳಲು ವಿಫಲವಾದರೆ ‘ಉಡುಗೊರೆ ಪತ್ರ’ ರದ್ದು: ಹೈಕೋರ್ಟ್ ಮಹತ್ವದ ತೀರ್ಪು