ಮೈಸೂರು: ಸಂಸದ ಪ್ರತಾಪ್ ಸಿಂಹ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಕೈ ತಪ್ಪಿದೆ. ಅವರ ಬದಲಾಗಿ ಮೈಸೂರಿನ ಯಧುವೀರ್ ಒಡೆಯರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲಾಗಿದೆ. ಈ ನಡುವೆ ನಾನು ಮಾಡಿಯಾದರೂ ಏನಾದ್ರೂ ನಿಮ್ಮ ಕೆಲಸ ಆಗ್ಬೇಕಾ.? ಮರೆಯದೇ ಕಾಲ್ ಮಾಡಿ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರು-ಕೊಡಗು ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಗೆದ್ದಿದ್ದಂತ ಪ್ರತಾಪ್ ಸಿಂಹ ಅವರಿಗೆ 2024ರ ಲೋಕಸಭಾ ಚುನಾವಣೆಗೆ ಟಿಕೆಟ್ ಕೈತಪ್ಪಿತ್ತು. ಪ್ರತಾಪ್ ಸಿಂಹ ಬದಲಾಗಿ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರಿಗೆ ಟಿಕೆಟ್ ನೀಡಲಾಗಿತ್ತು. ಈ ಬಗ್ಗೆ ನಿನ್ನೆ ಬಿಜೆಪಿಯಿಂದ ಅಧಿಕೃತವಾಗಿ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗಿತ್ತು.

ಟಿಕೆಟ್ ಘೋಷಣೆಯ ಬೆನ್ನಲ್ಲೇ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಪ್ರಚಾರ ಕೂಡ ಆರಂಭಿಸಿದ್ದಾರೆ. ಮೈಸೂರಿನ ವಿವಿಧ ಬಿಜೆಪಿ ಗಣ್ಯರನ್ನು ಭೇಟಿಯಾಗುತ್ತಿದ್ದಾರೆ. ಇಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಕೆಲ ಕಾಲ ಚರ್ಚೆ ನಡೆಸಿ ಬಂದಿದ್ದರು.

ಈ ನಡುವೆ ಸಂಸದ ಪ್ರತಾಪ್ ಸಿಂಹ ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವಂತ ಪೋಸ್ಟ್ ಒಂದು ವೈರಲ್ ಆಗಿದೆ. ಅದೇನು ಅಂತ ಹಾಕಿದ್ದಾರೆ ಅಂದ್ರೆ ನನ್ನ ಪ್ರೀತಿಯ ಕಾರ್ಯಕರ್ತರೇ ಮತ್ತು ಕೊಡಗು-ಮೈಸೂರಿನ ಬಂಧುಗಳೇ, ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ ಕರೆ ಮಾಡುವುದು ಎಂದು ಅಂಜಬೇಡಿ, ಈಗಲೂ ಮತ್ತು ಮಾಜಿಯಾದ ಮೇಲೂ ಕೈಲಾದ ಕೆಲಸ ಮಾಡಿಕೊಡುತ್ತೇನೆ. ಸೋಮವಾರದಿಂದ ಪ್ರಚಾರ ಕಾರ್ಯಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ.

‘ಮಾರುವೇಷ’ದಲ್ಲಿ ರೋಗಿಯಂತೆ ‘ಸರ್ಕಾರಿ ಆಸ್ಪತ್ರೆ’ಗೆ ತೆರಳಿ ಅವ್ಯವಸ್ಥೆ ಬಹಿರಂಗ ಪಡಿಸಿದ ‘IAS ಅಧಿಕಾರಿ’: ವೀಡಿಯೋ ವೈರಲ್

BREAKING: ಶಿವಮೊಗ್ಗದಲ್ಲಿ ‘ಬಿ.ವೈ ರಾಘವೇಂದ್ರ’ ವಿರುದ್ಧವೇ ‘ಲೋಕಸಭಾ ಚುನಾವಣೆ’ಗೆ ಸ್ಪರ್ಧೆ: ‘ಕೆ.ಎಸ್ ಈಶ್ವರಪ್ಪ’ ಘೋಷಣೆ

Share.
Exit mobile version