Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಕೆ

​’₹370 ಬಿರಿಯಾನಿ’ ವಿವಾದ: ಪ್ರಖ್ಯಾತ ಕಾಮೆಡಿಯನ್ ಪ್ರಣಿತ್ ಮೋರೆ, ಹಿಮಾಂಶು ಜಾಂಗ್ರಾ ಮತ್ತು ಡಾ. ಸೇಜಲ್ ಪವಾರ್ ವಿರುದ್ಧ ಎಫ್‌ಐಆರ್ ದಾಖಲು!

BREAKING: ​ಚೀನಾದಲ್ಲಿ ಭೀಕರ ಸ್ಫೋಟ: 7 ಮಂದಿ ದುರ್ಮರಣ, 17 ಜನರಿಗೆ ಗಂಭೀರ ಗಾಯ | Explosion in China

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಧರಿಸಬಹುದಾದರೆ ಹಿಂದೂಗಳಿಗೆ ನಾನೇ ಕೇಸರಿ ಶಾಲನ್ನು ಕೊಡುತ್ತೇನೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
KARNATAKA

ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಧರಿಸಬಹುದಾದರೆ ಹಿಂದೂಗಳಿಗೆ ನಾನೇ ಕೇಸರಿ ಶಾಲನ್ನು ಕೊಡುತ್ತೇನೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

By kannadanewsnow57

ಬೆಂಗಳೂರು: ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡುವುದಾದರೆ, ಹಿಂದೂ ವಿದ್ಯಾರ್ಥಿಗಳೂ ಕೂಡ ಕೇಸರಿ ಶಾಲು ಧರಿಸಲು ಸರ್ಕಾರ ಅನುಮತಿ ನೀಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

ಹಿಜಾಬ್ ವಿಚಾರವಾಗಿ ರಾಜ್ಯ ಸರ್ಕಾರದ ಇತ್ತೀಚಿನ ನಿಲುವನ್ನು ಕಟುವಾಗಿ ಟೀಕಿಸಿರುವ ಅವರು, ಇದು ಕೇವಲ ಅಲ್ಪಸಂಖ್ಯಾತರ ಓಲೈಕೆ ಮತ್ತು ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ತಂತ್ರ ಎಂದು ಆರೋಪಿಸಿದ್ದಾರೆ.

ಯತ್ನಾಳ್ ಟ್ವೀಟ್ ನಲ್ಲಿ ಏನಿದೆ?
ಸರ್ವೋಚ್ಛ ನ್ಯಾಯಾಲಯದಲ್ಲಿ ಶಾಲಾ ಮಕ್ಕಳು ಹಿಜಾಬ್ ಧರಿಸಬಹುದೇ ಇಲ್ಲವೇ ಎಂಬುವ ವಿಷಯದ ಪ್ರಕರಣ ಬಾಕಿ ಇರುವ ಸಂದರ್ಭದಲ್ಲಿ ಶಾಲಾ ಮಕ್ಕಳು ತಮ್ಮ ಸಮವಸ್ತ್ರದೊಂದಿಗೆ ಹಿಜಾಬ್ ಕೂಡ ಧರಿಸಬಹುದು ಎಂದು ಸುತ್ತೋಲೆ ಹೊರಡಿಸಿರುವ ಕರ್ನಾಟಕ ಸರ್ಕಾರದ ನಿಲುವು ಅಲ್ಪಸಂಖ್ಯಾತರ ಮತ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳುವ ಮತ್ತೊಂದು ಪ್ರಯತ್ನ.

ಸರ್ವೋಚ್ಚ ನ್ಯಾಯಾಲಯದಲ್ಲಿ ಸದರಿ ಪ್ರಕರಣ sub-judice ಇರುವ ಸಂದರ್ಭದಲ್ಲೇ ಸಿದ್ದರಾಮಯ್ಯ ಸಂಪುಟದ ಮುಕುಟಮಣಿಗಳು ಹಿಜಾಬ್ ಧರಿಸಿ ಶಾಲೆಗೆ ಹೋಗಬಹುದು ಎಂಬ ಸುತ್ತೋಲೆ ಹೊರಡಿಸಿದ್ದಾರೆ.

ಸರ್ಕಾರದ ತರ್ಕಾನುಸಾರವೇ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಬಹುದಾದರೆ ಹಿಂದೂಗಳಿಗೆ ಕೇಸರಿ ಶಾಲನ್ನು ಧರಿಸಲು ಅವಕಾಶ ನೀಡಬೇಕು ಹಾಗೂ ಹಿಂದೂ ವಿದ್ಯಾರ್ಥಿ ಸಮೂಹಕ್ಕೆ ನಾನೆ ಸ್ವತಃ ಕೇಸರಿ ಶಾಲನ್ನು ಕೊಡುವ ವ್ಯವಸ್ಥೆಯನ್ನು ಮಾಡುತ್ತೇನೆ. ಮುಸಲ್ಮಾನ ಹೆಣ್ಣುಮಕ್ಕಳು ಹಿಜಾಬ್ ಧರಿಸಿಬಹುದಾದರೆ, ಎಲ್ಲ ಶಾಲಾ ಕಾಲೇಜುಗಳಲ್ಲಿ ಗಣಪತಿಯ ಹಾಗೂ ಸರಸ್ವತಿಯ ಮೂರ್ತಿಯನ್ನಿಟ್ಟು ನಿತ್ಯ ಪೂಜೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ.

ಪಶ್ಚಿಮ ಬಂಗಾಲ, ಅಸ್ಸಾಂ ನಲ್ಲಿ ಆದ ಹಿಂದೂ ಮತಗಳ ಕ್ರೋಡೀಕರಣದಿಂದ ಕಾಂಗ್ರೆಸ್ ಪಕ್ಷದ ಧುರೀಣರ ನಿದ್ದೆಗೆಡಿಸಿದೆ. ಶಾಲಾ ಮೂಲಸೌಕರ್ಯ, ಶಿಕ್ಷಣದ ಗುಣಮಟ್ಟ, ಶಿಕ್ಷಕರ ನೇಮಕಾತಿ, ಸಕಾಲದಲ್ಲಿ ಶೂ-ಸಾಕ್ಸ್, ಪಠ್ಯಪುಸ್ತಕ ವಿತರಿಸಬೇಕಾಗಿದ್ದ ಸರ್ಕಾರ ತನ್ನ ಆದ್ಯತೆಗಳನ್ನು ಬದಿಗಿಟ್ಟು ಹಿಜಾಬ್ ಧರಿಸುವುದಕ್ಕೆ ಅನುಮತಿ ನೀಡಿರುವುದು ಇವರ ಖುರ್ಚಿಯ ಕಾಲುಗಳು ನಡುಗುತ್ತಿವೆ ಎಂಬುದಕ್ಕೆ ಸಾಕ್ಷಿ. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಯುವ ಮತದಾರರು ಬುದ್ದಿ ಕಲಿಸುವುದು ನಿಶ್ಚಿತ.

ಸರ್ವೋಚ್ಛ ನ್ಯಾಯಾಲಯದಲ್ಲಿ ಶಾಲಾ ಮಕ್ಕಳು ಹಿಜಾಬ್ ಧರಿಸಬಹುದೇ ಇಲ್ಲವೇ ಎಂಬುವ ವಿಷಯದ ಪ್ರಕರಣ ಬಾಕಿ ಇರುವ ಸಂದರ್ಭದಲ್ಲಿ ಶಾಲಾ ಮಕ್ಕಳು ತಮ್ಮ ಸಮವಸ್ತ್ರದೊಂದಿಗೆ ಹಿಜಾಬ್ ಕೂಡ ಧರಿಸಬಹುದು ಎಂದು ಸುತ್ತೋಲೆ ಹೊರಡಿಸಿರುವ ಕರ್ನಾಟಕ ಸರ್ಕಾರದ ನಿಲುವು ಅಲ್ಪಸಂಖ್ಯಾತರ ಮತ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳುವ ಮತ್ತೊಂದು ಪ್ರಯತ್ನ.

ಸರ್ವೋಚ್ಚ… pic.twitter.com/1hn6vSQ2yV

— Basanagouda R Patil (Yatnal) (@BasanagoudaBJP) May 13, 2026

I will give saffron shawls to Hindus: MLA Basanagouda Patil Yatnal If hijab can be worn in state schools
Share. Facebook Twitter LinkedIn WhatsApp Email

Related Posts

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಕೆ

1 Min Read

GOOD NEWS: ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: ಇನ್ನೆರಡು ದಿನದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆ ಆರಂಭ

1 Min Read

ಪ್ರಧಾನಿ ಮೋದಿ ಭೇಟಿಯಾದ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್: ಕರ್ನಾಟಕದ ಅಭಿವೃದ್ಧಿ ಕುರಿತು ಮಹತ್ವದ ಚರ್ಚೆ

1 Min Read
Recent News

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಕೆ

​’₹370 ಬಿರಿಯಾನಿ’ ವಿವಾದ: ಪ್ರಖ್ಯಾತ ಕಾಮೆಡಿಯನ್ ಪ್ರಣಿತ್ ಮೋರೆ, ಹಿಮಾಂಶು ಜಾಂಗ್ರಾ ಮತ್ತು ಡಾ. ಸೇಜಲ್ ಪವಾರ್ ವಿರುದ್ಧ ಎಫ್‌ಐಆರ್ ದಾಖಲು!

BREAKING: ​ಚೀನಾದಲ್ಲಿ ಭೀಕರ ಸ್ಫೋಟ: 7 ಮಂದಿ ದುರ್ಮರಣ, 17 ಜನರಿಗೆ ಗಂಭೀರ ಗಾಯ | Explosion in China

‘ಈ ದಾಳಿಗಳು ತಕ್ಷಣ ನಿಲ್ಲಬೇಕು!’: ಅಮೆರಿಕ ರಾಯಭಾರಿಗೆ ಭಾರತದ ‘ಸಮನ್ಸ್ : ಪಶ್ಚಿಮ ಏಷ್ಯಾ ಹಡಗು ದಾಳಿ ವಿರುದ್ಧ ತೀವ್ರ ಆಕ್ರೋಶ!

State News
KARNATAKA

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಕೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ದಾವಣಗೆರೆ: ಹರಿಹರ ತಾಲೂಕಿನ ರಾಜನಹಳ್ಳಿಯ ಜಗದ್ಗುರು ಹರಿಹರ ಬ್ರಹ್ಮಾನಂದ ಮಹಾಸಂಸ್ಥಾನದ ಪೀಠಾಧಿಪತಿಯಾದ ವಚನಾನಂದ ಸ್ವಾಮೀಜಿ (Vachanananda Swamiji) ಅವರ ವಿರುದ್ಧ…

GOOD NEWS: ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: ಇನ್ನೆರಡು ದಿನದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆ ಆರಂಭ

ಪ್ರಧಾನಿ ಮೋದಿ ಭೇಟಿಯಾದ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್: ಕರ್ನಾಟಕದ ಅಭಿವೃದ್ಧಿ ಕುರಿತು ಮಹತ್ವದ ಚರ್ಚೆ

ದೆಹಲಿಯಲ್ಲಿ ತಿಪಟೂರು ಶಾಸಕ ಕೆ. ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ವಿಚಾರಿಸಿದ ಡಿಸಿಎಂ ಜಿ. ಪರಮೇಶ್ವರ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.