ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಮಿಂಗಿಲ ಯಾರೆಂದು ಹೇಳಿದ್ರೇ, ಪ್ರಕರಮವೇ ಮುಗಿಯುತ್ತದೆ ಎಂಬುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ರೇವಣ್ಣ ಪ್ರಕರಣ ರಾಜಕೀಯ ಪ್ರೇರಿತ, ಇದರ ಹಿಂದೆ ದೊಡ್ಡ ತಿಮಿಂಗಿಲ ಇದೆ ಅನ್ನೋ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದಂತ ಅವರು, ಕುಮಾರಸ್ವಾಮಿ ಆ ತಿಮಿಂಗಿಲ ಯಾರು ಅಂತ ಹೇಳಿದ್ರೆ ಒಳ್ಳೇದು. ಅವರು ಪ್ರತಿ ದಿನ ಒಂದೊಂದು ಹೇಳಿಕೆ ಕೊಡೋದು ಬಿಟ್ಟು, ದಾಖಲೆ ಕೊಟ್ಟು ತನಿಖೆ ಮಾಡಲಿಲ್ಲ ಅಂತ ಹೇಳಲಿ ಎಂದರು.
ಇದೇ ಸಂದರ್ಭದಲ್ಲಿ ಸಾಹಿತಿಗಳು ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದಂತ ಅವರು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಾಹಿತಿಗಳು ಸಮಾಜದ ಬಗ್ಗೆ ಕಳಕಳಿ ಇರೋರು. ಅನೇಕ ವಿಷಯಗಳನ್ನು ನಿತ್ಯ ಗಮನಿಸುತ್ತಿರುತ್ತಾರೆ. ಅವರು ಬರೆದಿರುವಂತ ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ಎಸ್ಐಟಿ ಪರಿಶೀಲಿಸುತ್ತಿದೆ ಎಂದು ಹೇಳಿದರು.
ಸಂಸದ ಪ್ರಜ್ವಲ್ ರೇವಣ್ಣ ಇಂದು ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದಂತ ಅವರು, ನಿಮಗೆ ಇದರ ಬಗ್ಗೆ ಮಾಹಿತಿ ಇದ್ಯಾ? ಆ ಬಗ್ಗೆ ಹೇಳಿ ಎಂದು ಕೇಳಿದರು. ಅಲ್ಲದೇ ಟಿಕೆಟ್ ಬುಕ್ ಆಗಿರೋ ಮಾಹಿತಿ ನಿಮಗೆ ಏನಾದ್ರೂ ತಿಳಿದಿದ್ಯಾ? ಎಂದು ಪ್ರಶ್ನಿಸಿದರು. ಈ ಮಾಹಿತಿ ಗೃಹ ಇಲಾಖೆಗೆ ಗೊತ್ತಿರುತ್ತದೆ. ನಿಮ್ಗೆ ಹೇಳೋಕೆ ಆಗಲ್ಲ. ನಿಮ್ಗೆ ಆ ವಿಷಯ ಗೊತ್ತಿದ್ರೆ ಹೇಳಿ ಎಸ್ಐಟಿ ತನಿಖೆಗೆ ಸಹಾಯ ಆಗಲಿದೆ ಎಂದರು.
BREAKING: ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ‘ವಿವೇಕಾನಂದ.ಕೆ’ ಘೋಷಣೆ
BREAKING : ಗುಂಡು ಹಾರಿಸಿಕೊಂಡು `ಸಚಿನ್ ತೆಂಡೂಲ್ಕರ್’ ಸೆಕ್ಯುರಿಟಿ ಗಾರ್ಡ್ `ಪ್ರಕಾಶ್ ಕಪಾಡೆ’ ಆತ್ಮಹತ್ಯೆ