ನವದೆಹಲಿ: ಐಡಿಬಿಐ ಬ್ಯಾಂಕ್ ಸೀಮಿತ ಅವಧಿಗೆ ತನ್ನ ಉತ್ಸವ್ ಫಿಕ್ಸೆಡ್ ಡಿಪಾಸಿಟ್ ಸ್ಕೀಂನ ಹೆಚ್ಚಿಸಿದ ಬಡ್ಡಿದರಗಳನ್ನು ಪ್ರಕಟಿಸಿದೆ. ಈ ಬ್ಯಾಂಕ್ 444 ಮತ್ತು 375 ದಿನಗಳ ವಿಶೇಷ ಅವಧಿಗೆ ಬಡ್ಡಿದರಗಳನ್ನು ಹೆಚ್ಚಿಸಿದ್ದು ಈಗ ಕ್ರಮವಾಗಿ ವಾರ್ಷಿಕ ಶೇ.7.85 ಮತ್ತು ಶೇ.7.75 ಬಡ್ಡಿದರ ನೀಡುತ್ತಿದೆ. ಈ ಹೆಚ್ಚಳದಿಂದ ಉತ್ಸವ್ ಫಿಕ್ಸೆಡ್ ಡಿಪಾಸಿಟ್ ಅನ್ನು ಹೆಚ್ಚಿನ ಗಳಿಕೆ ಬಯಸುವ ಗ್ರಾಹಕರಿಗೆ ಮತ್ತಷ್ಟು ಆಕರ್ಷಕ ಆಯ್ಕೆಯಾಗಿಸಿದೆ.
ಈ ಸೀಮಿತ ಅವಧಿಯ ಕೊಡುಗೆಯು ಸೆಪ್ಟೆಂಬರ್ 30, 2024ರವರೆಗೆ ಮಾತ್ರ ಲಭ್ಯವಿರುತ್ತದೆ. ಗ್ರಾಹಕರು ಬ್ಯಾಂಕಿನ ವೆಬ್ ಸೈಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಅಥವಾ ಐಡಿಬಿಐ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಉತ್ಸವ್ ಫಿಕ್ಸೆಡ್ ಡಿಪಾಸಿಟ್ ಅನ್ನು ತೆರೆಯಬಹುದು.
ಇದಲ್ಲದೆ ಐಡಿಬಿಐ ಬ್ಯಾಂಕ್ ಉತ್ಸವ್ ಫಿಕ್ಸೆಡ್ ಡಿಪಾಸಿಟ್ ಸ್ಕೀಂ ಅಡಿಯಲ್ಲಿ ವಿಶೇಷ ಅವಧಿಗಳಿಗೆ ಸ್ಪರ್ಧಾತ್ಮಕ ಬೆಲೆಗಳನ್ನು ನೀಡುತ್ತಿದೆ. 700 ದಿನಗಳ ಅವಧಿಯು ವಾರ್ಷಿಕ ಶೇ.7.70ರ ಗರಿಷ್ಠ ದರ ನೀಡುತ್ತದೆ, 300-ದಿನಗಳ ಅವಧಿಯು ವಾರ್ಷಿಕ ಶೇ.7.55ರಷ್ಟು ಬಡ್ಡಿ ನೀಡುತ್ತದೆ.
ಈ ಬಡ್ಡಿದರಗಳಲ್ಲಿ ಪರಿಷ್ಕರಣೆಯು ಗ್ರಾಹಕರಿಗೆ ಅವರ ಹಣಕಾಸು ಅಗತ್ಯಗಳನ್ನು ಪೂರೈಸಿಕೊಳ್ಳಲು ಆಕರ್ಷಕ ಹೂಡಿಕೆಯ ಕೊಡುಗೆಗಳನ್ನು ಒದಗಿಸಲು ಐಡಿಬಿಐ ಬ್ಯಾಂಕ್ ಬದ್ಧತೆಯನ್ನು ಪ್ರತಿಫಲಿಸುತ್ತದೆ.
ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ನಿಮಗೆ ಸಿಗಲಿರುವ ಯೋಜನೆಗಳ ಕುರಿತು ಇಲ್ಲಿದೆ ಮಾಹಿತಿ
BIG NEWS : ರಾಜ್ಯದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ್ರೆ 2 ಲಕ್ಷ ದಂಡ ಜೊತೆಗೆ 7 ವರ್ಷ ಜೈಲು ಶಿಕ್ಷೆ ಫಿಕ್ಸ್