ನವದೆಹಲಿ: ಇಂಟರ್ನ್ಯಾಷನಲ್ ಬಿಸಿನೆಸ್ ಮೆಷಿನ್ಸ್ ಕಾರ್ಪೊರೇಷನ್ (ಐಬಿಎಂ) ನಿರ್ದಿಷ್ಟ ಸಂಖ್ಯೆಯ ಉದ್ಯೋಗ ಕಡಿತದ ಬಗ್ಗೆ ಮಾಹಿತಿ ನೀಡದೆ ವಜಾಗೊಳಿಸುವುದಾಗಿ ಘೋಷಿಸಿದೆ ಎಂದು ವರದಿಯಾಗಿದೆ.
ಐಬಿಎಂ ಕಂಪನಿಯ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಐಬಿಎಂನ ಮುಖ್ಯ ಸಂವಹನ ಅಧಿಕಾರಿ ಜೊನಾಥನ್ ಅಡಾಶೆಕ್ ಅವರು ಇಲಾಖೆಯ ಉದ್ಯೋಗಿಗಳೊಂದಿಗೆ ಏಳು ನಿಮಿಷಗಳ ಸಭೆಯಲ್ಲಿ ವಜಾಗೊಳಿಸುವ ನಿರ್ಧಾರವನ್ನು ಬಹಿರಂಗಪಡಿಸಿದರಂತೆ. ಕಂಪನಿಯು ಅಧಿಕೃತವಾಗಿ ಮಾಹಿತಿಯನ್ನು ಬಿಡುಗಡೆ ಮಾಡದಿದ್ದರೂ, ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಐಬಿಎಂ ವಜಾಗೊಳಿಸಿದೆ ಎಂದು CNBC ವರದಿ ಮಾಡಿದೆ.
2024ರಲ್ಲಿ ಟೆಕ್ ಉದ್ಯೋಗಿಗಳ ವಜಾ : ಐಬಿಎಂ ಸೇರಿದಂತೆ ಕನಿಷ್ಠ 204 ಕಂಪನಿಗಳು 2024 ರಲ್ಲಿ ಉದ್ಯೋಗ ಕಡಿತವನ್ನು ಘೋಷಿಸಿವೆ ಎಂದು layoffs.fy iವೆಬ್ಸೈಟ್ ತಿಳಿಸಿದೆ. ಈ ವಜಾಗಳು 49,978 ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
12 ತಿಂಗಳ ಕಾಲ ನೇಮಕಗೊಂಡ ಕಾರ್ಮಿಕರನ್ನು ಗುತ್ತಿಗೆ ನೌಕರರೆಂದು ಪರಿಗಣಿಸಲಾಗುವುದಿಲ್ಲ: ಸುಪ್ರೀಂ ಕೋರ್ಟ್
ಮುಂಬರುವ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಯೊಂದಿಗೆ ಬದಲಾಯಿಸಬಹುದಾದ ಪಾತ್ರಗಳಿಗೆ ನೇಮಕಾತಿಯನ್ನು ಸ್ಥಗಿತಗೊಳಿಸುವ ನಿರೀಕ್ಷೆಯಿದೆ ಎಂದು ಕಂಪನಿಯ ಸಿಇಒ ಅರವಿಂದ್ ಕೃಷ್ಣ ಕಳೆದ ವರ್ಷ ಹೇಳಿದ್ದರು. ಮಾನವ ಸಂಪನ್ಮೂಲದಂತಹ ಬ್ಯಾಕ್ ಆಫೀಸ್ ಕಾರ್ಯಗಳಲ್ಲಿ ನೇಮಕಾತಿಯನ್ನು ಸ್ಥಗಿತಗೊಳಿಸಲಾಗುವುದು ಅಥವಾ ನಿಧಾನಗೊಳಿಸಲಾಗುವುದು ಎಂದು ಅರವಿಂದ್ ಕೃಷ್ಣ ಹೇಳಿದರು. “ಐದು ವರ್ಷಗಳ ಅವಧಿಯಲ್ಲಿ ಅದರಲ್ಲಿ 30% ಅನ್ನು ಎಐ ಮತ್ತು ಆಟೋಮೇಷನ್ನಿಂದ ಬದಲಾಯಿಸುವುದನ್ನು ನಾನು ಸುಲಭವಾಗಿ ನೋಡಬಹುದು ಅಂತ ತಿಳಿಸಿದ್ದಾರೆ.