ಬೆಂಗಳೂರು: ಉತ್ತರಾಖಂಡಕ್ಕೆ ಚಾರಣಕ್ಕೆ ತೆರಳಿದ್ದಂತ ಕರ್ನಾಟಕದ 20ಕ್ಕೂ ಹೆಚ್ಚು ಕನ್ನಡಿಗರು ಹವಾಮಾನ ವೈಪರಿತ್ಯದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಇವರ ರಕ್ಷಣೆ, ನೆರವಿಗಾಗಿ ಹೊಣೆಗಾರಿಕೆಯನ್ನು ಐಎಎಸ್ ಅಧಿಕಾರಿ ವಿಪುಲ್ ಬನ್ಸಾಲ್ ಗೆ ವಹಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.
ಉತ್ತರಾಖಂಡಗೆ ಕರ್ನಾಟಕದಿಂದ 24ಕ್ಕೂ ಹೆಚ್ಚು ಮಂದಿ ಚಾರಣಕ್ಕೆ ತೆರಳಿದ್ದರು. ಆದ್ರೇ ದಿಢೀರ್ ಹವಾಮಾನ ವೈಪರಿತ್ಯದಿಂದಾಗಿ ಮಾರ್ಗಮಧ್ಯೆ ಮಂಜಿನಲ್ಲಿ ಸಿಲುಕಿಕೊಂಡು, ನಾಲ್ವರು ಮೃತಪಟ್ಟಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಇನ್ನೂ ಸಂಕಷ್ಟಕ್ಕೆ ಸಿಲುಕಿದಂತ ಕನ್ನಡಿಗರನ್ನು ರಕ್ಷಣೆ ಮಾಡೋದಕ್ಕಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರೇ ಖುದ್ದು ಉತ್ತರಾಖಂಡದ ಡೆಹ್ರಾಡೂನ್ ಗೆ ತೆರಳಿದ್ದಾರೆ. ತಾವೇ ಮುಂದೆ ನಿಂತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇದರ ಮಧ್ಯೆ ರಾಜ್ಯ ಸರ್ಕಾರದಿಂದ ಕನ್ನಡಿಗರ ರಕ್ಷಣೆ, ನೆರವಿಗಾಗಿ ಐಎಎಸ್ ಅಧಿಕಾರಿ ವಿಪುಲ್ ಬನ್ಸಾಲ್ ಅವರನ್ನು ನೇಮಕ ಮಾಡಿದೆ. ಸಂಕಷ್ಟಕ್ಕೆ ಸಿಲುಕಿರುವಂತ ಕನ್ನಡಿಗರು 9480474949 ಮೊಬೈಲ್ ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ಕಾಂಗ್ರೆಸ್ನವರು ಅಡ್ವಾನ್ಸ್ ಗ್ಯಾರಂಟಿ ಕೊಟ್ಟು ಮೋಸದಿಂದ 9 ಸ್ಥಾನ ಗೆದ್ದಿದ್ದಾರೆ : ನೂತನ ಸದಸ್ಯ ಗೋವಿಂದ್ ಕಾರಜೋಳ
Watch Video : ಒಂದೇ ವಿಮಾಣದಲ್ಲಿ ಒಟ್ಟಿಗೆ ಪ್ರಯಾಣಿಸಿದ ನಿತೀಶ್ ಕುಮಾರ್-ತೇಜಸ್ವಿ ಯಾದವ್! ವಿಡಿಯೋ ವೈರಲ್