ಬೆಂಗಳೂರು: ರಾಜ್ಯ ಸರ್ಕಾರದಿಂದ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಅಕ್ರಂ ಪಾಷಾ ನೇಮಕ ಮಾಡಿ, ಅನ್ಬುಕುಮಾರ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಇಂದು ಕೆ ಎಸ್ ಆರ್ ಟಿ ಸಿ ನೂತನ ಎಂಡಿಯಾಗಿ ಐಎಎಸ್ ಅಧಿಕಾರಿ ಅಕ್ರಂ ಪಾಷಾ ಅಧಿಕಾರ ಸ್ವೀಕರಿಸಿದರು.
ಇಂದು ಅಕ್ರಂ ಪಾಷ, ಭಾ.ಆ.ಸೇ., ರವರು ಕರಾರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯಭಾರವನ್ನು ವಹಿಸಿಕೊಂಡಿರುತ್ತಾರೆ. ನಿಗಮದ ಸಮವರ್ತಿತ ಕಾರ್ಯಭಾರವನ್ನು ವಹಿಸಿಕೊಂಡಿದ್ದ ರಾಮಚಂದ್ರನ್ ಆರ್. ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಬೆಂ.ಮ.ಸಾ.ಸಂಸ್ಥೆ ರವರು ಅಧಿಕಾರ ಹಸ್ತಾಂತರ ಮಾಡಿದರು.
ಐಎಎಸ್ ಅಧಿಕಾರಿ ಅಕ್ರಂ ಪಾಷ ಅವರು ಈ ಹಿಂದೆ ಕರ್ನಾಟಕ ಗೃಹ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯ ಆಯುಕ್ತರಾಗಿ ಮತ್ತು ಹಾಸನ ಹಾಗೂ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿರುತ್ತಾರೆ.
ಕೇರಳ ಮೃಗಾಲಯಕ್ಕೆ ತಾಂತ್ರಿಕ ನೈಪುಣ್ಯತೆಯ ವಿನಿಮಯಕ್ಕೆ ಸಮ್ಮತಿ: ಸಚಿವ ಈಶ್ವರ್ ಖಂಡ್ರೆ