ಶಿವಮೊಗ್ಗ: ಕಳೆದ ಕೆಲವು ದಿನಗಳ ಹಿಂದೆ ಸಾಗರದಲ್ಲಿ ಪತ್ರಕರ್ತರೊಬ್ಬರಿಗೆ ಕೆಲವರು ಅವಾಚ್ಯ ನಿಂದನೆ ಹಾಗೂ ಬೆದರಿಕೆ ಹಾಕಿರುವ ಘಟನೆ ಅತ್ಯಂತ ಖಂಡನೀಯವಾಗಿದೆ. ಪತ್ರಕರ್ತರನ್ನು ಬೆದರಿಸುವ ಯಾರೇ ಆಗಿರಲಿ ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಒಳಪಡಿಸುತ್ತೇವೆ. ನನ್ನ ಅಧಿಕಾರದ ಅವಧಿಯಲ್ಲಿ ಬೆದರಿಕೆ ಹಲ್ಲೆಯಂತಹ ಘಟನೆಗೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘ,ಸಾಗರ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪತ್ರಕರ್ತರುಗಳಿಗೆ ಗುರುತಿನ ಚೀಟಿ ಹಾಗೂ ಪತ್ರಕರ್ತರು, ಪತ್ರಿಕಾ ವಿತರಕರುಗಳಿಗೆ 15 ಲಕ್ಷ ರೂಗಳ ವಿಮಾ ಬಾಂಡ್‌ಗಳ ವಿತರಿಸಿ, ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿದರು.
ಪ್ರೆಸ್ ಟ್ರಸ್ಟ್ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ವರ್ಷ ಪತ್ರಿಕಾ ವಿತರಕರುಗಳಿಗೆ ಸೈಕಲ್‌ಗಳು ಮತ್ತು ರಿಪ್ಲೆಕ್ಟ್ ಆಗುವಂತಹ ಸುರಕ್ಷತೆಯ ಉದ್ದೇಶಿತ ಜಾಕೇಟ್‌ಗಳ ವಿತರಿಸುವ ಮೂಲಕ ಉತ್ತಮ ಕಾರ್ಯ ಮಾಡಿದ್ದರು.ಇಂದು ಪತ್ರಕರ್ತರ ಹಾಗೂ ವಿತರಕರುಗಳ ಜೀವನ ಭದ್ರತೆಯ ಹಿನ್ನೆಲೆಯಲ್ಲಿ ತಲಾ 15 ಲಕ್ಷ ರೂಗಳ ವೆಮಾ ಸುರಕ್ಷತೆಯ ವೆಮೆ ಮಾಡಿಸುತ್ತಿರುವುದು ಇಲ್ಲಿನ ಸಂಘಟನೆಯ ಮಾನವೀಯ ಮೌಲ್ಯಯುತ ಕಾರ್ಯ ಶ್ಲಾಘನೀಯ ಎಂದರು.
ಪತ್ರಕರ್ತರು ನಿರಂತರ ಸಮಾಜದ ಸ್ವಾಸ್ತ್ಯಕ್ಕಾಗಿ ರಾಜಕೀಯ,ಸಾಮಾಜಿಕ,ಆಡಳಿತಾತ್ಮಕ ಲೋಪಗಳ ವಿರುದ್ಧ ಬೆಳಕು ಚೆಲ್ಲುವಂತಹ ವರದಿಗಾರಿಕೆಯಿಂದ ಜನಜಾಗೃತಿಗೆ ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜಕೀಯವಾಗಿ ಆಡಳಿತಾತ್ಮಕವಾಗಿ ಎಲ್ಲಾ ವರದಿಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಸುಧಾರಣೆಯುತ ನಡವಳಿಕೆಯಿಂದ ಜವಾಬ್ದಾರಿಯುತ ನಾವುಗಳು ಕಾರ್ಯನಿರ್ವಹಿಸಬೇಕು ಎಂದರು.
ನಗರಸಭೆ ಅಧ್ಯಕ್ಷೆ ಮೈತ್ರಿ ವೀರೇಂದ್ರ ಪಾಟೀಲ್ ಮಾತನಾಡಿ ಸಮಾಜದಲ್ಲಿ ಜನಜಾಗೃತಿ ಮೂಡಿಸುವ ಜನಪರ ಕಾಳಜಿಯುತ ವರದಿಗಳ ಮೂಲಕ ಆಡಳಿತಾತ್ಮಕ ಕ್ರಿಯಾಶೀಲತೆಗೆ ಉತ್ತೇಜನ ನೀಡುತ್ತಿರುವ ಪತ್ರಕರ್ತರುಗಳ ಕಾರ್ಯ ಅಬಿನಂದನೀಯವಾಗಿದೆ ಎಂದರು.
ರಾಜಕೀಯ ಪ್ರತಿನಿಧಿಗಳ ಎಚ್ಚರಿಸುತ್ತಲೇ ಅಧಿಕಾರಿ ಸಿಬ್ಬಂದಿಗಳಿಗೆ ಚುರುಕುಮುಟ್ಟಿಸುವ ಪತ್ರಕರ್ತರುಗಳ ವರದಿಗಳು ಅಭಿವೃದ್ಧಿ ಕಾರ್ಯಗಳಿಗೆ ವೇಗ ಕಲ್ಪಿಸುತ್ತಿವೆ.ಪೂರಕ ಮತ್ತು ಪ್ರೋತ್ಸಾಹದಾಯಕ ಪತ್ರಕರ್ತರ ಕಾರ್ಯಗಳಿಂದ ಆರೋಗ್ಯಕರ ಅಬಿವೃದ್ಧಿ ಕಾರ್ಯಗಳ ಸುಧಾರಣೆ ಪ್ರಗತಿಗೆ ಮಾರ್ಗದರ್ಶಕವಾಗಿದೆ.ಪತ್ರಕರ್ತರುಗಳಿಗೆ ಆಡಳಿತದಿಂದ ಕಲ್ಪಿಸಬಹುದಾದ ಸವಲಭ್ಯಗಳ ಕಲ್ಪಿಸಲು ನಮ್ಮ ಆಡಳಿತ ಬದ್ಧವಾಗಿದೆ ಎಂದರು.
ಹಿರಿಯ ಪತ್ರಕರ್ತ ಲಕ್ಷ್ಮೀನಾರಾಯಣ ಕಲಗಾರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
“ಮಾದ್ಯಮಗಳ ಪ್ರಸ್ತುತತೆ” ವಿಚಾರ ಕುರಿತು ಪತ್ರಕರ್ತ ಹಿತಕರ್ ಜೈನ್ ಉಪನ್ಯಾಸ ನೀಡಿ ಅಂತರ್ಜಾಲವು ಸಮೂಹ ಮಾಧ್ಯಮದ ಸ್ವರೂಪವನ್ನೇ ಬದಲಾಯಿಸಿದೆ ಎಂದರು.
ಇಲ್ಲಿ ಯಾವುದೇ ಸಂಸ್ಥೆ ಅಥವಾ ತರಬೇತಿಯಿರುವ ಅರ್ಹತೆಯ ಅಗತ್ಯವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಗಳು ಸ್ವತಂತ್ರವಾಗಿ ಅಬಿಪ್ರಾಯ ರೂಪಿಸುವಲ್ಲಿ ರಾಜಕೀಯ ಸಾಮಾಜಿಕ,ಶೈಕ್ಷಣಿಕ,ಅಥವಾ ಪ್ರಚಲಿತ ಎಲ್ಲಾ ಘಟನೆಗಳ ಹಂಚಿಕೊಳ್ಳಲು ಅತ್ಯಂತ ಸುಲಭ ಹಾಗೂ ಪರಿಣಾಮಕಾರಿಯಾಗಿ ಜನಸಮೂಹವನ್ನೇ ಸನ್ನಿಯಂತೆ ಸಾಮಾಜಿಕ ಜಾಲತಾಣ ಆವರಿಸಿಕೊಂಡಿದೆ ಎಂದರು.
ಮಾಧ್ಯಮಗಳ ವಿಚಾರದಲ್ಲಿ ಪ್ರಪಂಚದ ಎಲ್ಲಾ ದೇಶಗಳಿಗಿಂತ ಭಾರತದಲ್ಲಿ ಮಾದ್ಯಮಗಳು ಮುಖ್ಯವಾಹಿನಿಗಳಾಗಿವೆ.ಇತರೆ ದೇಶಗಳಲ್ಲಿ ಮಾದ್ಯಮಗಳ ಉದ್ಯಮದ ಶಕ್ತಿ ವಿಪರೀತವಾಗಿ ಕುಸಿದಿರುವುದು ಆರೋಗ್ಯಕರ ಬೆಳವಣಿಗೆಯಲ್ಲ.ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ದೇಶ ಭಾರತದಲ್ಲಿ ಮಾಧ್ಯಮಗಳ ಕಾರ್ಯನಿರ್ವಹಣೆ ತೃಪ್ತಿಕರವಾಗಿದೆ ಎಂದರು.
ಮಾಧ್ಯಮಗಳು ವೃತ್ತಿ ಧರ್ಮ ಮರೆಯಬಾರದು.ಕಾರಣ ಮಾಧ್ಯಮ ಪ್ರಜಾಪ್ರಭುತ್ವದ 4ನೇ ಸ್ತಂಭ ಎಂಬುದು ಪಾರಂಪರಿಕ ವ್ಯಾಖ್ಯಾನವಾಗಿದೆ.ಆದರೇ ಇಂತಹ ವ್ಯಾಖ್ಯಾನಗಳು ಇಂದು ಅರ್ಥ ಕಳೆದುಕೊಳ್ಳುಬಾರದು.ಈ ನಿಟ್ಟಿನಲ್ಲಿ ಪತ್ರಕರ್ತರು ಸಮಾಜಮುಖಿಯಾಗಿ ಮಾಧ್ಯಮಗಳ ಮೌಲ್ಯ ಹೆಚ್ಚಿಸುವ ಮಾದರಿ ಕಾರ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮಾಧ್ಯಮಗಳು ಎಂದರೇ ಪ್ರಮುಖವಾಗಿ 2 ವಿದಗಳನ್ನಾಗಿ ನೋಡಬಹುದು.ಮಾಧ್ಯಮ ಅಥವಾ ಸಮೂಹ ಮಾಧ್ಯಮ, ಅವುಗಳಲ್ಲಿ ಪತ್ರಿಕೆಗಳು(ಪ್ರಿಂಟ್ ಮೀಡಿಯಾ) ಇಂದು ರೇಡಿಯೋ ಸ್ಥಾನವನ್ನು ದೂರದರ್ಶನಗಳು ಆಕ್ರಮಿಸಿಕೊಂಡು ಪೈಪೋಟಿಯಲ್ಲಿ ಸುದ್ದಿ ಬಿತ್ತರಿಸುತ್ತಿವೆ.ಇವುಗಳನ್ನು ಸಮೂಹ ಮಾಧ್ಯಮ ಎಂದು ಕರೆಯುಲಾಗುತ್ತಿದೆ ಎಂದರು.
ಸಮೂಹ ಮಾಧ್ಯಮಗಳ ಉಗಮ ಮತ್ತು ವಿಕಾಸವು ಮುದ್ರಣ ತಂತ್ರಜ್ಞಾನದ ಅವಿಷ್ಕಾರದಿಂದ ಆರಂಭವಾಗಿ ರೇಡಿಯೋ,ದೂರದರ್ಶನ, ಪ್ರಸ್ತುತ ಅಂತರ್ಜಾಲದವರೆಗೂ ವಿಕಾಸವಾಗಿದೆ. 15 ನೇ ಶತಮಾನದಲ್ಲಿ ಗುಟೆನ್‌ಬರ್ಗ್ನ ಮುದ್ರಣಾಲಯವು ಸಮೂಹ ಮಾಧ್ಯಮಗಳ ಬೆಳವಣಿಗೆಗೆ ನಾಂದಿಯಾಯಿತು.ವೃತ್ತಪತ್ರಿಕೆಗಳು,ಪುಸ್ತಕಗಳ ಮೂಲಕ ಮಾಹಿತಿ ಸಾಮೂಹಿಕವಾಗಿ ಹಂಚಿಕೊಳ್ಳಲು ಸಾಧ್ಯವಾಯಿತು. 20ನೇ ಶತಮಾನದಲ್ಲಿ ರೇಡಿಯೋಜನಪ್ರಿಯವಾಯಿತು.ತ್ವರಿತ ಮಾಹಿತಿ ಹರಡುವ ಹೊಸ ಮಾಧ್ಯಮವಾಗಿ ಜನಮನದಲ್ಲಿ ನೆಲೆಯೂರಿತ್ತು. ಆಕಾಶದಿಂದ ಬರುವ ಶಬ್ದಕ್ಕೆ ಆಕಾಶವಾಣಿ ಎಂದು ಕರೆಯುತ್ತಾರೆ.1930 ರಲ್ಲಿ ರವೀಂದ್ರನಾಥ ಠಾಗೂರ್ ಅವರು ರೇಡಿಯೋ ಎಂಬ ಪದಕ್ಕೆ ಆಕಾಶವಾಣಿ ಎಂಬುದನ್ನು ಚಲಾವಣೆಗೆ ತಂದಿದ್ದಾರೆ.ಮೈಸೂರಲ್ಲಿ ರೇಡಿಯೋ ಕೇಂದ್ರ 1938 ರ ಸೆಪ್ಟೆಂಬರ್ 10 ರಂದು ಮೊದಲ ರೇಡಿಯೋ ಮೈಸೂರಿನಲ್ಲಿ ಪ್ರಸಾರ ಆಗುತ್ತದೆ.ಮಹಾರಾಜರು ಕುತೂಹಲದಿಂದ ಆಕಾಶವಾಣಿ ಆಲಿಸುವ ಮೂಲಕ ಹೊಸ ಸಂಚಲನ ಸೃಷ್ಟಿಯಾಗಿತ್ತು ಎಂದರು.
ವಿಷಯಗಳು ಸುದ್ದಿಯಾಗುವ ಮೂಲಕ ಸದ್ದುಮಾಡಬೇಕೇ ಹೊರತು ಸುದ್ದಿಗಾರ ಸದ್ದು ಗದ್ದಲ ಮಾಡಬಾರದು.ಗೌಪ್ಯತೆಯಿಂದ ಸಂಚರಿಸುವ ಸರಳ ಸಜ್ಜನಿಕೆಯಿಂದ ಸಮಾಜದಲ್ಲಿ ಸುದ್ದಿಗಳ ಸಂಗ್ರಹಿಸಿ ಪ್ರಕಟಿಸುವ ಮೂಲಕ ಸುಧಾರಣೆಗೆ ನಾಂದಿಯಾಗಬೇಕು ಎಂದರು.
ಮಲ್ಲಿಗೆ, ಕನಕಾಂಬರ ಹೂವುಗಳ ಪೂಣಿಸಿ ಮಾಲೆ ನಿರ್ಮಿಸಿದಂತೆ ಅಕ್ಷರಗಳ ಜೋಡಿಸಿ ಶಬ್ದಗಳ ಕೂಡಿಸಿ ಓದುವ ಓದಿಸಿಕೊಂಡು ಹೋಗುವ ಆಕರ್ಷಕವಾಗಿ ರೂಪಿಸುವ ವರದಿಗಳೇ ಇಂದಿಗೂ ಮುದ್ರಣ ಮಾಧ್ಯಮಗಳು ಓದುಗರ ನಿರಂತರ ಸೆಳೆಯುವಲ್ಲಿ ಸಹಕಾರಿಯಾಗಿದೆ ಎಂದರು.
ಪತ್ರಿಕಾದಿನಾಚರಣೆಯ ಮೂಲಕ ಪ್ರತಿ ವರ್ಷ ಪತ್ರಕರ್ತರುಗಳು ಆತ್ಮಾವಲೋಕನ ಮಾಡಿಕೊಳ್ಳುವ ಅತ್ಯಂತ ಮಹತ್ವದ ದಿನವಾಗಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅದ್ಯಕ್ಷ ಗಣಪತಿ ಶಿರಳಗಿ ವಹಿಸಿದ್ದರು. ವೇದಿಕೆಯಲ್ಲಿ ನಗರಸಭಾ ಉಪಾಧ್ಯಕ್ಷೆ ಸವಿತಾವಾಸು, ಸದಸ್ಯ ಆರ್.ಶ್ರಿನಿವಾಸ್, ಗಣಪತಿಮಂಡಗಳಲೆ, ಅರವಿಂದರಾಯ್ಕರ್, ನಾಗರತ್ನ, ಎಲ್.ಚಂದ್ರಪ್ಪ , ಪತ್ರಿಕಾ ವಿತರಕರುಗಳ ಸಂಘದ ಅಧ್ಯಕ್ಷ ರಮೇಶ್ ಎನ್ ಉಪಸ್ಥಿತರಿದ್ದರು.
ಪತ್ರಕರ್ತ ಅಂತೋನಿನಜರತ್ ಗಣೇಶನ ಪ್ರಾರ್ಥಿಸಿದರೇ, ಸ್ವಾಭಿಮಾನಿ ನ್ಯೂಸ್ ನ ಧರ್ಮರಾಜ್ ಸ್ವಾಗತಿಸಿದರು. ಹಿತಕರ್ ಜೈನ್ ನಿರೂಪಿಸಿ, ಶೈಲೇಂದ್ರ ಎ.ಆರ್ ವಂದಿಸಿದರು.
ಕಡಿಮೆ ಅವಧಿಯಲ್ಲಿ ಹೆಚ್ಚಿನ ರೈಲುಗಳ ಮಂಜೂರು: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ
ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ