ಬೆಂಗಳೂರು: ಈಶ್ವರಪ್ಪ ಅವರ ಮನೆಗೆ ನಾನೇ ಹೋಗ್ತೀನಿ. ಅವರೇ ನನಗೆ ಗುಂಡು ಹೊಡೆಯಲಿ ಅಂತ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಅವರು ತಿರುಗೇಟು ನೀಡಿದ್ದಾರೆ.ೃ
ಅವರು ಇಂದು ನಗರದಲ್ಲಿ ಸುದ್ದಿಗಾರರ ಜತೊಎಗೆ ಮಾತನಾಡುತ್ತ ಮಹಾತ್ಮ ಗಾಂಧಿ ಅವರನ್ನು ಕೊಂದ ಪಕ್ಷ ಅವರದ್ದು. ನಾನೊಬ್ಬ ಸಣ್ಣ ವ್ಯಕ್ತಿ. ಕನ್ನಡಿಗರ ಪರ ಮಾತನಾಡಿದ್ದಕ್ಕೆ ಹೀಗೆ ಹೇಳಿರಬಹುದು. ಬಡವರ ಮಕ್ಕಳನ್ನು ಯಾಕೆ ಬಾವಿಗೆ ತಳ್ಳಬೇಕು?. ಬಡವರ ಮಕ್ಕಳನ್ನು ಯಾಕೆ ರೊಚ್ಚಿಗೆ ಎಬ್ಬಿಸ್ತಿರಾ?. ಪಕ್ಷದಲ್ಲಿ ಅವರನ್ನು ಮೂಲೆ ಗುಂಪು ಮಾಡಿದ್ದಾರೆ ಅಂತ ವ್ಯಂಗ್ಯವಾಡಿದರು. ಇನ್ನೂ ನಾನೇ ಸಮಯ ಕೊಡ್ತೀನಿ. ಒಂದು ವಾರದಲ್ಲಿ ಯಾವಾಗ ಅಂತಲೂ ಹೇಳುವೆ. ನಾನೇ ಈಶ್ವರಪ್ಪ ಅವರ ಮನೆಗೆ ಹೋಗ್ತೀನಿ. ಅವರೇ ನನಗೆ ಗುಂಡು ಹೊಡೆಯಲಿ. ಹೇಳಿಕೆ ಮೂಲಕ ಬಡವರ ಮಕ್ಕಳನ್ನು ರೊಚ್ಚಿಗೆಬ್ಬಿಸುವುದು ಬೇಡ. ಅವರೇ ಆ ಕೆಲಸ ಮಾಡಲಿ ಎಂದು ಹೇಳಿದರು.