ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೊಸ ಸಂಸತ್ ಕಟ್ಟಡದ ಕ್ಯಾಂಟೀನ್ನಲ್ಲಿ ಸಹ ಸಂಸದರೊಂದಿಗೆ ಊಟ ಮಾಡಿದರು. ಅಂದ್ಹಾಗೆ, ಪಿಎಂಒ ಪರವಾಗಿ, ವಿವಿಧ ಪಕ್ಷಗಳ 8 ಸಂಸದರಿಗೆ ಪ್ರಧಾನಿ ನಿಮ್ಮನ್ನು ಭೇಟಿಯಾಗಲು ಬಯಸಿದ್ದಾರೆ ಎಂದು ಕರೆ ಬಂದಿತ್ತು. ಆದ್ರೆ, ಅವರನ್ನ ಕರೆದ ಕಾರಣವೇನು ಅನ್ನೋದು ಯಾರಿಗೂ ತಿಳಿದಿರಲಿಲ್ಲ.
ನಂತ್ರ ಎಂಟು ಸಂಸದರು ಪ್ರಧಾನಿ ಕಚೇರಿಯನ್ನ ತಲುಪಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಆ ಸಂಸದರಿಗೆ, “ನಾನು ಇಂದು ನಿಮಗೆ ಶಿಕ್ಷೆ ನೀಡುತ್ತೇನೆ” ಎಂದು ತಮಾಷೆ ಮಾಡಿದರು.
Delhi | Prime Minister Narendra Modi had lunch with MPs at Parliament Canteen today. pic.twitter.com/98F0IAa3dt
— ANI (@ANI) February 9, 2024
ಆ ಚರ್ಚೆ ಏನಾಗಿತ್ತು.?
ಪ್ರಧಾನಿ ಮೋದಿ ಅವರೊಂದಿಗೆ ಎಂಟು ಸಂಸದರು ಸುಮಾರು ಒಂದು ಗಂಟೆ ಕಾಲ ಕ್ಯಾಂಟೀನ್ ನಲ್ಲಿದ್ದರು. ಈ ಸಮಯದಲ್ಲಿ, ಈ ಸಂಸದರು ಪ್ರಧಾನಿಯನ್ನು ಅವರ ಅನುಭವಗಳ ಬಗ್ಗೆ ಕೇಳಿದ್ದು, ನಂತ್ರ ಪಿಎಂ ಮೋದಿ ತಮ್ಮ ವೈಯಕ್ತಿಕ ಅನುಭವಗಳು ಮತ್ತು ಸಲಹೆಗಳನ್ನ ಹಂಚಿಕೊಂಡರು. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಹೇಳಿದ್ದೇನು.?
ಸಂಸದರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, “ನಾನು ಕೂಡ ಸಾಮಾನ್ಯ ಮನುಷ್ಯ ಅಲ್ವಾ. ನಾನು ಯಾವಾಗಲೂ ಪ್ರಧಾನಿಯಂತೆ ಇರೋದಿಲ್ಲ, ಜನರೊಂದಿಗೆ ಬೆರೆಯಲು ಬಯಸುತ್ತೇನೆ. ಇನ್ನು ಇಂದು ನಾನು ನಿಮ್ಮೊಂದಿಗೆ ಚರ್ಚಿಸಲು ಮತ್ತು ಆಹಾರ ಸವಿಯಲು ಬಯಸುತ್ತೇನೆ. ಹೀಗಾಗಿ ನಿಮ್ಮೆಲ್ಲರನ್ನೂ ಕರೆದಿದ್ದೇನೆ ಎಂದರು” ಎನ್ನಲಾಗ್ತಿದೆ.
ಸಂಸತ್ ಭವನದ ಕ್ಯಾಂಟೀನ್‌ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಊಟ ಮಾಡಿದ 8 ಸಂಸದರಲ್ಲಿ ಎಲ್ ಮುರುಗನ್ (ಬಿಜೆಪಿ), ರಿತೇಶ್ ಪಾಂಡೆ (ಬಿಎಸ್‌ಪಿ), ಹಿನಾ ಗವಿತ್ (ಬಿಜೆಪಿ), ಕೊನ್ಯಾಕ್ (ಬಿಜೆಪಿ), ಎನ್ ಪ್ರೇಮಚಂದ್ರನ್ (ಕ್ರಾಂತಿಕಾರಿ ಸಮಾಜವಾದಿ ಪಕ್ಷ), ಸಸ್ಮಿತ್ ಪಾತ್ರ (ಬಿಜೆಡಿ) ಸೇರಿದ್ದಾರೆ. ), ರಾಮ್ ಮೋಹನ್ ನಾಯ್ಡು (ಟಿಡಿಪಿ) ಮತ್ತು ಲಡಾಖ್ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್.
ಲೋಕಸಭಾ ಚುನಾವಣೆ 2024 : ‘96.88 ಕೋಟಿ ಜನರು’ ಮತ ಚಲಾವಣೆಗೆ ನೋಂದಣಿ : ಚುನಾವಣಾ ಆಯೋಗ ಘೋಷಣೆ
ಗೂಗಲ್ ಕ್ರೋಮ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ : ತಕ್ಷಣವೇ ‘Update’ ಮಾಡಲು ಸೂಚನೆ