ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್-12 ಗ್ರ್ಯಾಂಡ್ ಫಿನಾಲೆ ಆರಂಭಗೊಂಡಿದೆ. ಈ ಬಾರಿ ಗಿಲ್ಲಿ ನಟ ಗೆಲ್ಲಲಿದ್ದಾನೆ ಎನ್ನಲಾಗುತ್ತಿದೆ. ಇಂತಹ ಗಿಲ್ಲಿ ನಟ ಕನ್ನಡ ಬಿಗ್ ಬಾಸ್ ಸೀಸನ್-12 ಗೆದ್ದರೇ 20 ಲಕ್ಷ ನೀಡುವುದಾಗಿ ಎಂಎಲ್ಸಿ ಟಿ.ಎ ಶರವಣ ಘೋಷಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಗ್ ಬಾಸ್ ಸೀಸನ್-12ರಲ್ಲಿ ಭಾಗಿಯಾಗಿರುವಂತ ಗಿಲ್ಲಿ ನಟ ರೈತನ ಮಗನಾಗಿದ್ದಾನೆ. ರೈತನ ಮಗನೊಬ್ಬ ಗೆಲ್ಲ ಬೇಕು. ನನಗೆ ಗಿಲ್ಲಿ ನಟ ವಿನ್ನರ್ ಆಗುತ್ತಾನೆ ಎನ್ನುವಂತ ವಿಶ್ವಾಸವಿದೆ. ನಾನು ಕೂಡ ಪ್ರತಿ ದಿನ ಬಿಗ್ ಬಾಸ್ ಶೋ ನೋಡುವುದಾಗಿ ತಿಳಿಸಿದರು.
ಬಿಗ್ ಬಾಸ್ ಸೀಸನ್-12 ಗ್ರ್ಯಾಂಡ್ ಫಿನಾಲೆ ಆರಂಭಗೊಂಡಿದೆ. ಈಗಾಗಲೇ ಟಾಪ್ 6 ಸ್ಪರ್ಧಿಗಳಲ್ಲಿ ಧನುಷ್ ಹೊರ ಬಂದಿದ್ದಾರೆ. ರಕ್ಷಿತಾ ಅಥವಾ ಅಶ್ವಿನಿ ರನ್ನರ್ ಆಗುವ ಸಾಧ್ಯತೆ ಇದೆ. ಈ ಎಲ್ಲದರ ನಡುವೆ ವಿನ್ನರ್ ಯಾರು ಆಗಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
MNREGA ಪುನಃ ಸ್ಥಾಪನೆಯಾಗುವವರೆಗೆ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಕರೆ: ಎಲ್ಲರ ಸಹಕಾರಕ್ಕೆ ಮನವಿ








