ಚಿಕ್ಕಮಗಳೂರು: ನಾನು ಕೊನೆಯವರೆಗೂ ಜನಪರವಾಗಿ ಹೋರಾಟ ಮಾಡುತ್ತೇನೆ. ಸಂವಿಧಾನಿಕ, ಪ್ರಜಾತಂತ್ರ ಹೋರಾಟವನ್ನು ಮುಂದುವರೆಸುವುದಾಗಿ ನಕ್ಸಲ್ ನಾಯಕಿ ಮುಂಡಗಾರು ಲತಾ ತಿಳಿಸಿದ್ದಾರೆ.
ನಾಳೆ ಮೋಸ್ಟ್ ವಾಂಟೆಂಡ್ 6 ನಕ್ಸಲರು ಶರಣಾಗತಿಗೆ ನಿರ್ಧರಿಸಿದ್ದಾರೆ. ಅವರಲ್ಲಿ ನಕ್ಸಲ್ ನಾಯಕಿ ಮುಂಡಗಾರು ಲತಾ ಕೂಡ ಒಬ್ಬರಾಗಿದ್ದಾರೆ. ಅವರು ಶರಣಾಗತಿಗೂ ಮುನ್ನಾ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸೋ ಸಂಬಂಧ ಸರ್ಕಾರಕ್ಕೆ ತಲುಪಿಸಲಾಗಿದೆ. ನಾವು ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದ್ದೇವೆ ಎಂದಿದ್ದಾರೆ.
ನಾನು ಪ್ರಜಾತಂತ್ರ, ಸಾಂವಿಧಾನಿಕ ಹೋರಾಟವನ್ನು ಶರಣಾಗತಿಯ ನಂತ್ರವೂ ಮುಂದುವರೆಸಲಿದ್ದೇನೆ. ಕೊನೆಯವರೆಗೂ ನಾನು ಜನಪರವಾಗಿ ನಿಂತು ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತಿರೋ ಕಾರಣ ಶರಣಾಗತಿ ಆಗುತ್ತಿರೋದಾಗಿ ಹೇಳಿದ್ದಾರೆ.
ನಾನು ಯಾವುದೇ ಕಾರಣಕ್ಕೂ ಜನಪರ ಹೋರಾಟಗಳಿಂದ ಹಿಂದೆ ಸರಿಯೋದಿಲಲ್. ನನ್ನ ಉಸಿರು ಇರೋವರೆಗೂ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.
ಟಿಬೆಟ್ ನಲ್ಲಿ ಪ್ರಭಲ ಭೂಕಂಪ: ಸಾವಿನ ಸಂಖ್ಯೆ 126ಕ್ಕೆ ಏರಿಕೆ | Earthquake Strikes Tibet
GOOD NEWS: ಶೀಘ್ರವೇ ರಾಜ್ಯದ ಆರೋಗ್ಯ ಇಲಾಖೆಯ ‘300 ಹುದ್ದೆ’ಗಳಿಗೆ ಭರ್ತಿ: ಸಿಎಂ ಸಿದ್ಧರಾಮಯ್ಯ