ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (AAP) ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಮೋದಿ ಎಂದಿಗೂ ತನಗಾಗಿ ಮನೆ ನಿರ್ಮಿಸಿಕೊಂಡಿಲ್ಲ, ಆದರೆ ಬಡವರಿಗಾಗಿ 4 ಕೋಟಿಗೂ ಹೆಚ್ಚು ಮನೆಗಳನ್ನ ನಿರ್ಮಿಸಿದ್ದಾರೆ ಎಂದು ದೇಶಕ್ಕೆ ಚೆನ್ನಾಗಿ ತಿಳಿದಿದೆ” ಎಂದು ಪ್ರಧಾನಿ ಹೇಳಿದರು.
ಇದಲ್ಲದೆ, ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಮೈ ಭೀ ಕೋಯಿ ‘ಶೀಶ್ಮಹಲ್’ ಬನಾ ಸಕ್ತಾ ಅದು. ನಾನು ಶೀಶ್ ಮಹಲ್’ನ್ನ ಸಹ ನಿರ್ಮಿಸಬಹುದಿತ್ತು, ಆದರೆ ನನ್ನ ದೇಶವಾಸಿಗಳಿಗೆ ಶಾಶ್ವತ ಮನೆಗಳು ಸಿಗಬೇಕು ಎಂಬುದು ನನ್ನ ಕನಸಾಗಿತ್ತು” ಎಂದರು.
ದೆಹಲಿಯಲ್ಲಿ ಜುಗ್ಗಿ ಜೋಪ್ರಿ (ಜೆಜೆ) ಕ್ಲಸ್ಟರ್ಗಳು ಮತ್ತು ವಿಶ್ವ ವ್ಯಾಪಾರ ಕೇಂದ್ರದ ನಿವಾಸಿಗಳಿಗೆ 1,675 ಫ್ಲ್ಯಾಟ್ಗಳು ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನ ಉದ್ಘಾಟಿಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಅಶೋಕ್ ವಿಹಾರ್ ಪ್ರದೇಶದ ಸ್ವಾಭಿಮಾನ್ ಅಪಾರ್ಟ್ಮೆಂಟ್ನಲ್ಲಿ ಇಡಬ್ಲ್ಯೂಎಸ್ ಫ್ಲ್ಯಾಟ್ಗಳ ಅರ್ಹ ಫಲಾನುಭವಿಗಳಿಗೆ ಮೋದಿ ಕೀಲಿಗಳನ್ನು ಹಸ್ತಾಂತರಿಸಿದರು.
ಶಿವಮೊಗ್ಗ ಜಿಲ್ಲೆಯ ಜನತೆ ಗಮನಕ್ಕೆ: ನೀರಿನ ಕಂದಾಯ ಕಟ್ಟಲು ಭಾನುವಾರ ವಿಶೇಷ ಕೌಂಟರ್ ಓಪನ್
JOB ALERT: ಉದ್ಯೋಗ ವಾರ್ತೆ: ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 32,438 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
BREAKING : ರಾಮನಗರದಲ್ಲಿ ಭೀಕರ ಕೊಲೆ : ‘ನ್ಯೂ ಇಯರ್’ ಪಾರ್ಟಿ ವೇಳೆ ವ್ಯಕ್ತಿಯನ್ನು ಕೊಂದು ಬಾವಿಗೆ ಎಸೆದ ದುರುಳರು!