ಬೆಂಗಳೂರು: ಭಾರತವನ್ನೇ ಸ್ಪೋಟಿಸುವುದಾಗಿ ಬೆಂಗಳೂರಲ್ಲಿ ಗೋಡೆಯ ಮೇಲೆ ಶಾಕಿಂಗ್ ಬರಹವೊಂದು ಬರೆದಿರುವುದು ತಿಳಿದು ಬಂದಿದೆ. ದೇಶ ವಿರೋಧಿ ಬರಹವನ್ನು ಪರಿಶೀಲಿಸಿರುವಂತ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಶುರು ಮಾಡಿದ್ದಾರೆ.
ಉಡುಪಿ, ರಾಮನಗರದ ಬೆನ್ನಲ್ಲೇ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ದೇಶ ವಿರೋಧಿ ಗೋಡೆ ಬರಹ ಬರೆದಿರುವುದು ಪತ್ತೆಯಾಗಿದೆ.
ಬೆಂಗಳೂರಿನ ಕೋಡಿಗೇಹಳ್ಳಿಯಲ್ಲಿರುವಂತ ಅಪಾರ್ಟ್ಮೆಂಟ್ ಒಂದರ ಗೋಡೆಯ ಮೇಲೆ ದೇಶ ವಿರೋಧಿ ಬರಹವನ್ನು ಬರೆಯಲಾಗಿದೆ. ನಾನು ಭಾರತವನ್ನು ಸ್ಪೋಟಿಸುತ್ತೇನೆ ಎಂಬುದಾಗಿ ಇಂಗ್ಲೀಷ್ ನಲ್ಲಿ ದೇಶ ವಿರೋಧಿ ಬರಹವನ್ನು ಬರೆಯಲಾಗಿದೆ.
ಈ ದೇಶ ವಿರೋಧಿ ಗೋಡೆ ಬರಹದ ಸುದ್ದಿ ತಿಳಿಯುತ್ತಿದ್ದಂತೇ ಸ್ಥಳಕ್ಕೆ ಕೋಡಿಗೇಹಳ್ಳಿ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ದೇಶ ವಿರೋಧಿ ಗೋಡೆ ಬರಹ ಬರೆದಂತ ಆರೋಪಿಯ ಪತ್ತೆಗಾಗಿ ಅಪಾರ್ಟ್ಮೆಂಟ್ ನಲ್ಲಿ ಇರುವಂತ ಸಿಸಿಟಿವಿ ಕ್ಯಾಮರಾಗಳನ್ನು ಜಾಲಾಡುತ್ತಿದ್ದಾರೆ. ಆ ಮೂಲಕ ಸುಳಿವು ಪತ್ತೆ ಕಾರ್ಯವನ್ನು ನಡೆಸುತ್ತಿದ್ದಾರೆ.
BREAKING: ಇಸ್ರೋ-ನಾಸಾ ಜಂಟಿ ಭೂ ವೀಕ್ಷಣಾ ಉಪಗ್ರಹ ‘ನಿಸಾರ್’ ಉಡಾವಣೆ ಯಶಸ್ವಿ | NASA-ISRO NISAR satellite
ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ