ಬೆಂಗಳೂರು: ಅಧಿಕಾರ ಹಂಚಿಕೆ ಚರ್ಚೆ ಮಧ್ಯೆ ಸದನದಲ್ಲೇ ಸಿಎಂ ಸಿದ್ದರಾಮಯ್ಯ ಅವರು ಹೇಳಿರುವ ಹೇಳಿಕೆಯೊಂದು ಈಗ ಕಾಂಗ್ರೆಸ್ ನಾಯಕರಿಗೆ ಅದರಲ್ಲೂ ಸಿಎಂ ಆಗೋ ಕನಸು ಕಂಡಿದ್ದ ಹಲವು ಮಂದಿಗೆ ನಿದ್ದೆ ಕೆಡಿಸಿರುವುದು ಸುಳ್ಳಲ್ಲ.
ಹೌದು, ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್ ಸದಸ್ಯರ ನೇಮಕಕ್ಕೆ ಆಕ್ಷೇಪಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ‘ಕಳೆದ ಅವಧಿಯಲ್ಲಿ (2013-18) ಸಿದ್ದರಾಮಯ್ಯ ಅವರು ಹೇಯ್…. ಆಶೋಕ ಬರೆದುಕೊ ಆ್ಯಪ್ಪ, ನಾನೇ ಪರ್ಮನೆಂಟು ಅಂತ ಹೇಳಿದ್ದರು. ಇದೇ ವೇಳೆ ರಾಜ್ಯದಲ್ಲಿ ಪವರ್‌ಶೇರಿಂಗ್ (ಅಧಿಕಾರ ಹಂಚಿಕೆ) ವಿಚಾರವಾಗಿ ಅನೇಕ ಕಾಂಗ್ರೆಸ್ ನಾಯಕರೇ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಐದೂ ವರ್ಷ ಪೂರೈಸಲಿ ಎಂದು ನಾವು ಬಯಸುತ್ತೇವೆ ಅಂತ ಆರ್ ಆಶೋಕ್ ಹೇಳಿದರು.
ಇದಕ್ಕೆ ಮರು ಉತ್ತರಿಸಿದ ಸಿದ್ದರಾಮಯ್ಯ ಅವರು, “ಹೌದು ಈ ಐದು ವರ್ಷ ಅಲ್ಲಿ, ಮತ್ತೆ ಮುಂದಿನ ಐದು ವರ್ಷವೂ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದು ಹೇಳಿದರು. ಆಗಲೂ ನೀವೇ ಮುಖ್ಯ ಮಂತ್ರಿ ಆಗಿರುತ್ತೀರಾ ಎಂಬ ಬಿಜೆಪಿ ಸದಸ್ಯರ ಪ್ರಶ್ನೆಗೆ, ‘ಹೌದು ನಾನೇ ಇರುತ್ತೇನೆ’ ಎಂದು ಹೇಳಿದರು.
·