ಬೆಂಗಳೂರು: ಡಿಕೆ ಶಿವಕುಮಾರ್ ಗೆ ಮಾತ್ರವಲ್ಲ ನಮಗೂ ರಕ್ಷಣೆ ಮಾಡೋದಕ್ಕೆ ದೇವರು ಇದ್ದಾನೆ. ನಾನು ರಾಜರಾಜೇಶ್ವರಿ ದೇವಾಲಯಕ್ಕೆ ಹೋಗಿದ್ದು, ರಾಜರಾಜೇಶ್ವರಿ ದೇವರಿಗೇ ಇದನ್ನು ಬಿಡುತ್ತೇನೆ. ಆ ದೇವರೇ ಅವರಿಗೆ ಶಿಕ್ಷೆ ಕೊಡಲಿ ಎಂಬುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಮ್ಮ ಸರ್ಕಾರದ ನಾಶಕ್ಕೆ ನನ್ನ ಹಾಗೂ ಸಿಎಂ ವಿರುದ್ಧ ಶತ್ರು ಭೈರವಿ ಯಾಗ ಮಾಡಿಸಿದ್ದಾರೆ ಎನ್ನುವ ಕುರಿತಂತೆ ಮಾತನಾಡಿದರು. ಪುರಂದರ ದಾಸರು ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿ ಬಿಡು ನಾಲಿಗೆ ಎಂದಿದ್ದಾರೆ. ಅದೇ ರೀತಿಯಲ್ಲಿ ಡಿಕೆ ಶಿವಕುಮಾರ್ ನಡೆಯಾಗಿದೆ ಎಂಬುದಾಗಿ ತಿರುಗೇಟು ನೀಡಿದರು.
ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿದ್ದರೂ ಆ ಸ್ಥಾನದ ಗೌರವ, ಮೌಲ್ಯ ಏನು ಎಂಬುದೇ ಅವರಿಗೆ ಇನ್ನೂ ಅರ್ಥವಾಗಿಲ್ಲ. ಅವರು ನಮ್ಮ ಕುಟುಂಬವನ್ನು ಮುಗಿಸಲೇ ಬೇಕು ಅಂತ ಶ್ರಮ ಪಡುತ್ತಿದ್ದಾರೆ. ಅದರ ಮುಂದುವರೆದ ಭಾಗವೇ ಯಾಗದ ಮಾತಾಗಿದೆ. ಆದ್ರೇ ನಮ್ಮ ಕುಟುಂಬದಲ್ಲಿ ನನಗೆ ತಿಳುವಳಿಕೆ ಬಂದಾಗಿನಿಂದ ಕುರಿ, ಕೋಣ, ಮೇಕೆ ಕಡಿಯೋದು ಯಾವತ್ತೂ ಮಾಡಿಲ್ಲ ಎಂದರು.
ನಾವು ಹಿಂದೂ ಸಂಸ್ಕೃತಿಯಲ್ಲಿ ಇರುವ ಹಾಗೆ ಧಾರ್ಮಿಕ ಪೂಜೆ ಮಾಡುತ್ತೇವೆ. ನಾವು ದೇವರ ಪೂಜೆ ಮಾಡೋದು ಹಾಗೆ. ನಮಗೆ ಇರೋ ದೋಷ ಪರಿಹಾರಕ್ಕಾಗಿ ದೇವಾಲಯಕ್ಕೂ ಹೋಗುತ್ತೇವೆ. ಅದರ ಹೊರತಾಗಿ ಯಾವುದೇ ಯಾಗ, ಬಲಿ ಕೊಡೋ ಕೆಲಸ ಮಾಡಿಲ್ಲ ಎಂಬುದಾಗಿ ಡಿಕೆ ಶಿವಕುಮಾರ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
ಪಾಕ್ ಐಎಸ್ಐಗಾಗಿ ಬೇಹುಗಾರಿಕೆ: ಬ್ರಹ್ಮೋಸ್ ಮಾಜಿ ಎಂಜಿನಿಯರ್ ‘ನಿಶಾಂತ್ ಅಗರ್ವಾಲ್’ಗೆ ಜೀವಾವಧಿ ಶಿಕ್ಷೆ
ಕಾರ್ಮಿಕರೇ ಗಮನಿಸಿ : ರಾಜ್ಯ ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ʻಸೌಲಭ್ಯʼಗಳು!