ನವದೆಹಲಿ : ಮಾಜಿ ಪ್ರಧಾನಿಗಳಾದ ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಮತ್ತು ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿದ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, “ನಾನು ಅವರನ್ನ ಸ್ವಾಗತಿಸುತ್ತೇನೆ. ಯಾಕಿಲ್ಲ?” ಎಂದಿದ್ದಾರೆ.

 

ಪಿಎಂ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಮೂರು ವಿಭಿನ್ನ ಪೋಸ್ಟ್ಗಳ ಮೂಲಕ ಮೂವರು ದಿಗ್ಗಜರ ಕೊಡುಗೆಯನ್ನ ನೆನಪಿಸಿಕೊಂಡು ಘೋಷಣೆಗಳನ್ನ ಮಾಡಿದ್ದಾರೆ. ಲಾಲ್ ಕೃಷ್ಣ ಅಡ್ವಾಣಿ ಮತ್ತು ಕರ್ಪೂರಿ ಠಾಕೂರ್ ಈ ವರ್ಷ ಒಟ್ಟು ಐದು ಜನರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ.

“ದೇಶದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಮ್ಮ ಸರ್ಕಾರದ ಸೌಭಾಗ್ಯ. ಈ ಗೌರವವನ್ನ ಅವರು ದೇಶಕ್ಕೆ ನೀಡಿದ ಸಾಟಿಯಿಲ್ಲದ ಕೊಡುಗೆಗೆ ಅರ್ಪಿಸಲಾಗಿದೆ” ಎಂದು ಪ್ರಧಾನಿ ಮೋದಿ ಚರಣ್ ಸಿಂಗ್ ಅವರಿಗೆ ಭಾರತ ರತ್ನವನ್ನ ಘೋಷಿಸಿ ಬರೆದಿದ್ದಾರೆ. “ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತವನ್ನು ಜಾಗತಿಕ ಮಾರುಕಟ್ಟೆಗಳಿಗೆ ತೆರೆದು, ಆರ್ಥಿಕ ಅಭಿವೃದ್ಧಿಯ ಹೊಸ ಯುಗವನ್ನ ಪೋಷಿಸಿದ ಮಹತ್ವದ ಕ್ರಮಗಳಿಂದ ಗುರುತಿಸಲ್ಪಟ್ಟಿದೆ” ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.

 

‘ನಾನು ಅವನಿಗೆ ಮದುವೆ ಮಾಡದ್ದೇ ತಪ್ಪಾಯ್ತು’: ಮಗ- ಸೊಸೆ ವಿರುದ್ಧ ‘ರವೀಂದ್ರ ಜಡೇಜಾ ತಂದೆ’ ಅಸಮಾಧಾನ

BIG NEWS: ‘ದೇಶ ವಿಭಜನೆ’ಯ ಹೇಳಿಕೆ ಕೊಡುವವರನ್ನು ‘ಗುಂಡಿಕ್ಕಿ ಕೊಲ್ಲಬೇಕು’ – ಮಾಜಿ ಸಚಿವ ‘ಕೆಎಸ್ ಈಶ್ವರಪ್ಪ’

BREAKING : ಲೋಕಸಭಾ ಚುನಾವಣೆಗೂ ಮುನ್ನ ‘ಬಿಜೆಪಿ ಜತೆ RLD’ ಮೈತ್ರಿ : RLD ಮುಖ್ಯಸ್ಥ ‘ಜಯಂತ್ ಚೌಧರಿ’ ಘೋಷಣೆ

Share.
Exit mobile version