ನವದೆಹಲಿ: ನನ್ನ ಆಪ್ತ ಸ್ನೇಹಿತನ ಮೂಲಕ ನನಗೆ ಬಿಜೆಪಿಗೆ ಸೇರಲು ಆಫರ್ ಬಂದಿದೆ ಎಂದು ದೆಹಲಿ ಸಚಿವೆ ಅತಿಶಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಇನ್ನೂ ಕೆಲವು ಎಎಪಿ ನಾಯಕರನ್ನು ಬಂಧಿಸಲಾಗುವುದು ಎಂದು ಅವರು ಇದೇ ವೇಳೆ ಹೇಳಿದರು. ಇದೇ ವೇಳೆ ಅವರು ಮಾತನಾಡಿ “ಆಮ್ ಆದ್ಮಿ ಪಕ್ಷ ಮತ್ತು ಅದರ ಎಲ್ಲಾ ನಾಯಕರನ್ನು ಹತ್ತಿಕ್ಕಲು ಪ್ರಧಾನಿ ಮತ್ತು ಬಿಜೆಪಿ ಮನಸ್ಸು ಮಾಡಿದ್ದಾರೆ ಅಂತ ಗಂಭೀರ ಆರೋಪ ಮಾಡಿದರು.
“ನನ್ನನ್ನು, ಸೌರಭ್ ಭಾರದ್ವಾಜ್, ರಾಘವ್ ಚಡ್ಡಾ, ದುರ್ಗೇಶ್ ಪಾಠಕ್ ಅವರನ್ನು ಜೈಲಿಗೆ ಹಾಕಲು ಸಿದ್ಧತೆಗಳು ನಡೆಯುತ್ತಿವೆ. “ನಾನು ಬಿಜೆಪಿಗೆ ಸೇರದಿದ್ದರೆ ಬಂಧಿಸುವುದಾಗಿ ಬೆದರಿಕೆ ಹಾಕಲಾಗಿದೆ. ಆದರೆ ಆಮ್ ಆದ್ಮಿ ಪಕ್ಷವು ಈ ಬೆದರಿಕೆಗಳಿಗೆ ಹೆದರುವುದಿಲ್ಲ ಅಂಥ ಅವರು ಇದೇ ವೇಳೇ ಹೇಳಿದ್ದಾರೆ.
ಪಕ್ಷವು ಹೋರಾಟವನ್ನು ಮುಂದುವರಿಸುತ್ತದೆ ಮತ್ತು ಬಿಜೆಪಿ ಎಲ್ಲಾ ಎಎಪಿ ಕಾರ್ಯಕರ್ತರನ್ನು ಜೈಲಿಗೆ ಹಾಕಿದರೆ, ಪ್ರತಿ ಕಾರ್ಯಕರ್ತರು, ಜನರು ಹೋರಾಡುತ್ತಾರೆ ಮತ್ತು ಸಮಾನವಾಗಿ ಗೆಲ್ಲುತ್ತಾರೆ ಎಂದು ಅವರು ಹೇಳಿದರು.