ಬೆಂಗಳೂರು: ನಾನು ದೇಶದ ಬದಲಾವಣೆಗಾಗಿ ಮತದಾನ ಮಾಡಿದ್ದೇನೆ. ದ್ವೇಷದ ವಿರುದ್ಧ ತ ಹಾಕಿರುವೆ. ನೀವು ತಪ್ಪದೇ ಮತದಾನ ಮಾಡಿ ಎಂಬುದಾಗಿ ನಟ ಪ್ರಕಾಶ್ ರಾಜ್ ಅವರು ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ಈ ವೇಳೆಯಲ್ಲಿ ನಟ ಪ್ರಕಾಶ್ ರಾಜ್ ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಬಳಿಕ ವೀಡಿಯೋ ಶೇರ್ ಮಾಡಿರುವಂತ ಅವರು, ದೇಶದ ಬದಲಾವಣೆಗಾಗಿ ಮತದಾನ ಮಾಡಿರುವೆ, ದ್ವೇಷದ ವಿರುದ್ಧ ಮತ ಹಾಕಿರುವೆ. ಸಂಸತ್ ನಲ್ಲಿ ನನ್ನ ಪರವಾಗಿ ಧ್ವನಿ ಕೇಳಲಿ ಎಂದು ವೋಟು ಮಾಡಿದ್ದೇನೆ. ದಯಮಾಡಿ ವೋಡು ಮಾಡಿ, ಬದಲಾವಣೆಗೆ ಮತ ಹಾಕಿ ಎಂದಿದ್ದಾರೆ.
I have Voted .. please go and Vote #justasking #SaveDemocracySaveIndia pic.twitter.com/shg7jDSVpU
— Prakash Raj (@prakashraaj) April 26, 2024
ನಟ ಪ್ರಕಾಶ್ ರಾಜ್ ಅವರ ಈ ವೀಡಿಯೋ ಈಗ ವೈರಲ್ ಆಗಿದೆ. ಇಂದು ಬೆಳಿಗ್ಗೆ 7.45ಕ್ಕೆ ಮತಚಲಾಯಿಸಿದ ನಂತ್ರ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಆ ಬಳಿಕ ಈವರೆಗೆ 536ಕೆ ವೀಕ್ಷಕರು ನಟ ಪ್ರಕಾಶ್ ರಾಜ್ ಪೋಸ್ಟ್ ಮಾಡಿರುವಂತ ವೀಡಿಯೋ ವೀಕ್ಷಿಸಿದ್ದಾರೆ. ಅಲ್ಲದೇ 1.8ಕೆ ನೋಡುಗರು ಕಾಮೆಂಟ್ ಮಾಡಿದ್ದರೇ, 8.8ಕೆ ವೀಕ್ಷಕರು ರೀ ಟ್ವಿಟ್ ಮಾಡಿದ್ದಾರೆ.
BREAKING: ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನದ ಅವಧಿ ಮುಕ್ತಾಯ: ಮಂಡ್ಯದಲ್ಲಿ ಅತಿಹೆಚ್ಚು, ಬೆಂಗಳೂರಲ್ಲಿ ಕಡಿಮೆ ಮತದಾನ