ಬೆಂಗಳೂರು: ನಗರದಲ್ಲಿ ಆದಾಯ ತೆರಿಗೆ ವಂಚನೆ ಸಂಬಂಧ 25ಕ್ಕೂ ಹೆಚ್ಚು ಕಡೆಯಲ್ಲಿ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ, ಮಹತ್ವದ ದಾಖಲೆಗಳ ಜಾಲಾಟದಲ್ಲಿ ತೊಡಗಿದ್ದಾರೆ.
ಬೆಂಗಳೂರು ನಗರದ ಉದ್ಯಮಿಗಳು, ರಿಯಲ್ ಎಸ್ಟೇಟ್ ಮಾಲೀಕರು, ಕಚೇರಿ, ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 25 ಕಡೆಯಲ್ಲಿ ಏಕ ಕಾಲಕ್ಕೆ ಈ ದಾಳಿಯನ್ನು ನಡೆಸಲಾಗಿದೆ.
ಆದಾಯ ತೆರಿಗೆ ವಂಚನೆ ಸಂಬಂಧ ಉದ್ಯಮಿಗಳ ನಿವಾಸ, ಕಚೇರಿ, ರಿಯಲ್ ಎಸ್ಟೇಟ್ ಮಾಲೀಕರ ನಿವಾಸ, ಕಚೇರಿ ಸೇರಿದಂತೆ ಹಲವೆಡೆ ದಾಳಿಯನ್ನು ನಡೆಸಿ ದಾಖಲೆಗಳ ಪರಿಶೀಲನೆ, ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.